ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಂದರ ಕೃಷ್ಣನು ಕರೆಯುವ ಬನ್ನಿರೆ ಇಂದುಮುಖಿಯರೆಲ್ಲ ಪ ಚಂದದಿ ವಿಹರಿಸುವ ಬನ್ನಿರಿ ಇಂದುಮುಖಿಯರೆಲ್ಲ ಅ.ಪ ಭಾಸುರಾಂಗನ ಕೂಡಿ ನಾವು ರಾಸಕ್ರೀಡೆಯಲಿ ಈ ಸಂಸಾರದ ಕ್ಲೇಶಗಳನು ಪರಿ ಹಾಸ ಮಾಡುವ ಬನ್ನಿ 1 ಪರಿಮಳ ಕುಸುಮಗಳ ಸೊಗಸಿನ ತರುಲತೆ ಬುಡದಲ್ಲಿ ಮುರಹರ ಕೃಷ್ಣನ ಮುರಳಿಯನೂದುವ ತರಳೆಯ ಅಂಬನ್ನಿ 2 ನಂದಕುಮಾರನಿಗೆ ನಾವು ಮಂದಹಾಸದಲ್ಲಿ ಗಂಧ ತಾಂಬೂಲಗಳಂದದಿ ನೀಡುತಾ ನಂದಪಡುವ ಬನ್ನಿ 3 ಯಮುನಾ ತೀರದಲಿ ನಾವು ಸುಮಬÁಣನ ಸೊಲ್ಲನು ಮುರಿಯುವ ಬನ್ನಿ ಕಮಲಾಕ್ಷಿಯರೆಲ್ಲಾ 4 ಪನ್ನಗವೇಣಿಯರೇ ಈಗ ಪ್ರ ಸನ್ನವದನ ಕೃಷ್ಣ ತನ್ನ ಇಂಗಿತವನರುಹಲು ಎಮ್ಮನು ಸನ್ನೆಯ ಮಾಡುತಿಹ 5
--------------
ವಿದ್ಯಾಪ್ರಸನ್ನತೀರ್ಥರು