ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡಲಶಯನ ಹರೇ ಉಡುಪತಿ ಕುಲದೊರೆ ಪ ಅಡಿಗೆರಗಿದೆ ನಿನ್ನ ನೀಡೆಲೊ ಕರಗಳ ಅ.ಪ ನಡೆಯುವ ಪದಗಳು ಎಡವದಿರುವುದೇನೊ ಕಡುಮಂದನಲಿ ದಯ ಸಡಿಲಿಸದಿರೊ ದೇವ 1 ಕಂದನು ಪುಟ್ಟಲು ಅಂಧನಾಗಿರೆ ಅದನು ಚೆಂದವಿಲ್ಲೆನುತ ಬೀಸುವಳೆ ಜನನಿ 2 ಹೇಯ ಸಂಸಾರದಿ ಗಾಯವ ಪೊಂದಿ ನಾ ನೋಯುತಿರುವೆನು ಉಪಾಯವ ಕಾಣದೆ 3 ಲೋಪಗಳಿಗೆ ಬಲು ಕೋಪಿಸದೆ ಅಯ್ಯೋ ಪಾಪವೆಂದೆನ್ನುತ ಕಾಪಾಡೆಲೋ ದೇವ 4 ಎನ್ನೊಳು ದಯದಿ ಪ್ರಸನ್ನನಾಗುವೆಯೆಂದು ಎನ್ನಮನದಿ ಸದಾ ಧ್ಯಾನಿಸುವೆನೋ ದೇವ 5
--------------
ವಿದ್ಯಾಪ್ರಸನ್ನತೀರ್ಥರು
ಪುರುಷಾರ್ಥ ಪ ವರದ ಅಭೀಷ್ಟೆಯ ಕರದು ಎನಗೆ ನೀ ವರದನೆಂಬೊ ನಿನ್ನ ಬಿರುದನ ರಕ್ಷಿಸು ಅ.ಪ ಅಜನ ಜನಕನÀಲ್ಲಿ ಇರುವಿಯೊ ವಿಜನ ದೇಶದಲ್ಲೀ ಸುಜನರು ಇದ್ದಲ್ಲಿ ಬರುವೆಯೊ ಭಜನೆಮಾಡುವಲ್ಲೀ ಸುಜನರ ತಾಪಕೆ ವ್ಯಜನನು ನೀನೂ ಸುಜನಕಲ್ಪತರು ಕುಜನಕುಠಾರಾ 1 ನಂದನಂದನನೂ ಅವನಿನ್ನ ಬಂಧನದೊಳಗಿಹನೂ ಅಂಧನಾಗಿ ನಾನೂ ಸಂಸೃತಿ ಬಂಧನದೊಳಗಿನ್ನೂ ನೊಂದೆನು ಬೆಂದೆನು ಬಂದೆನು ನಿನ್ನಲಿ ಕಂದನ ಲಾಲಿಸು ಒಂದಿನ ಬಿಡದೆ 2 ಮರೆತೆನು ನಾನಿನ್ನಾ ಅವಗುಣ ಮರೆತು ಪಾಲಿಸು ಮುನ್ನಾ ಪರತರಗುರು ನಿನ್ನಾ ಹೊರತು ಗತಿ ಗುರುತತಿಲ್ಲ ಮುನ್ನಾ ಅರಿತು ಅನಂತಾದ್ರಿ ನಿರತನ ತೋರಿಸು ಮೋದ ಪುರನಿರತ ಸದ್ಗುರುವೆ 3
--------------
ಅನಂತಾದ್ರೀಶರು