ಬೆಳಗಾಯಿತೇಳಿರಯ್ಯಾ ಜನರೆ ಪ
ಒಳಹೊರಗೆ ಅಂಧಕಾರವು ವ್ಯಾಪಿಸಿರೆ ರಾತ್ರಿ
ಲಲನೆಯರ ತೆಕ್ಕೆಯಲಿ ನಿದ್ರಾಭರದಿ ಕಾಲ
ತಳಮಳದೆ ತಮ್ಮ ಸ್ಥಳಗಳನು ಬಿಟ್ಟು ತಾವ್
ಕಲಕಲಧ್ವನಿಯಿಂದ ದೆಸೆದೆಸೆಗೆ ಪೋಗುತವೆ
ಮಲಗಿರುವುದುಚಿತವಲ್ಲ ಜನರೆ 1
ಮರೆವೆಯನು ಬಿಟ್ಟು ಕಣ್ದೆರದು ಕೈಯುಜ್ಜಿ ಶ್ರೀ-
ಹರಿಯ ಸಂಸ್ಮರಿಸಿ ಗುರುಹಿರಿಯರಡಿಗಳಿಗೆರಗಿ
ದೊರೆಭಾಗ್ಯವಂತಗೋಸತಿಯರಿಗೆ ನಮಿಸಿ ದರ್ಪಣ
ನೋಡಿನಿತ್ಯ ಕೃತ್ಯ
ಹರುಷದಲಿ ನಿಮ್ಮ ನಿಮ್ಮನುಕೂಲದಂತೆ ಆ-
ಸುಖಂಗಳ ಪಡಿಯಿರೈ 2
ವ್ಯರ್ಥಕಾಲಕ್ಷೇಪ ಮಾಡದಿರಿಯಿದರಿಂದ-
ನರ್ಥ ಬರದಂತೆ ಯೋಚಿಸಿ ಈಗ ನಾವೇ ಕೃ-
ಜನ್ಮವು ದುರ್ಲಭ
ತೀರ್ಥಪಾದಗೆ ಸಮರ್ಪಣೆಗೈಯ್ಯೆಮನದಿಷ್ಟ
ಸಜ್ಜನರು ಸಾಕ್ಷಿ 3
ನೆರೆಹೊರೆಯ ನೋಡುತಾಭರಣ ವಸ್ತ್ರಗಳು ಬಹು
ದೊರೆತ ಮಟ್ಟಿಗೆ ಭೋಗ ಭಾಗ್ಯಗಳನನುಭವಿಸಿ
ಪರಮಧರ್ಮವ ಘಳಿಸಿರೈ 4