ಸಾಕೆಲೊ ಶ್ರೀರಂಗನಾಥ ಲೋಕದಾಟವೂ ಪ
ಬೇಕು ನಿನ್ನಪಾದ ಭಜನೆಯೇಕದಾಟವೂ ಅ.ಪ
ಕಾಕು ಮನುಜರೊಡನೆಯೆನ್ನಾ ನೂಕಲ್ಯಾತಕೋ ನೀ
ನೇಕನಾಥನೆಂಬೊ ಬಿರುದು ಬೇಕು ಮಾಡಿಕೊಳ್ಳೊ 1
ಅಂಧಕಾರವಾಧೀತಲ್ಲೋ ಚೆಂದವೇನೆಲೊ ನಾ
ನೊಂದೆನಲ್ಲೋ ಬಂದು ಕಾಯೊ ಇಂದಿರಾಪತಿ2
ಆರುಗಿರಿಯ ದಳದ ತುದಿಯೊಳಿರುವೊ ಶ್ರೀಗುರು
ದಾರಿ ತೋರೋ ತುಲಶೀರಾಮ ದಾಸದಾಸನೂ 3