ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚ ವೃಂದಾವನದಿ ಮೆರೆಯುತಿರುವಾ ||ಪಂಚಾಸ್ಯ ಸಂದಿಷ್ಟ ವೈಭವವ ಕೇಳಿ ಪ ವಿಪುಲ ಮತಿ ಪದಕರ್ಹ ಕಪಿಪ ರಾಮನ ಭಂಟಸ್ವಪನದಾಖ್ಯಾನವನೆ ಶಪಥ ಪೂರ್ವಕದೀ |ವಿಪ್ರಗೋಸುಗವಾಗಿ ಸುಪ್ರಕಟ ಗೈದಿಹರು ಅಪ್ರತಿಮ ಹಯಮೊಗನ ಸುಪ್ರೇಮ ಪಿಡಿದೂ 1 ಆಖ್ಯಾನ ಪೆಟ್ಟಿಗೆಯು ಅಂಧಕಾರದಲಿದ್ದುವ್ಯಾಖ್ಯಾತೃ ವೇದನಿಧಿ ಜನ್ಮತಾಳುತಲೀ |ವ್ಯಾಖ್ಯಾನ ಗೈದಾಗ್ಯು ಭಾವ ತಿಳಿಯದಲೇವೆಪ್ರಖ್ಯಾತಿ ಪಡೆಯದಲೆ ಬೀಗ ಮುದ್ರಿತದೀ 2 ಅಂಧ ಭಾವದೊಲೊಬ್ಬ ಪಂಗು ಭಾವದಲೊಬ್ಬ ಇಂದಿರೇಶನ ಮಹಿಮೆ ಪ್ರಕಟ ಗೈಯ್ಯುವಲೀ|ಅಂಧ ಪಂಗುನ್ಯಾಯ ಆಶ್ರಯಿಸಿ ಪ್ರಕಟಿಸುವಮಂದ ಜನರುದ್ಧಾರ ಕಾರ್ಯ ಗೈಸುತಲೀ 3 ಅನುಮಾನ ತೀರಥರ ಶಾಸ್ತ್ರವನೆ ಮಥಿಸುತ್ತತನುಮನ ಧನಧಾನ್ಯ ತೃಣವೆಂಬ ಕೀಲಿಯಲೀ |ಜ್ಞಾನ ಪೆಟ್ಟಿಗೆ ಬೀಗ ಮುದ್ರೆಯನೆ ತೆರೆಯುತ್ತ ಮನದ ಪಾತ್ರಿಯಲುಣ್ಣಿ ಆಖ್ಯಾನದನ್ನಾ 4 ಸಂತ ಸಂಗದಲಿಂದ ಮಂಥಿಸಲು ತತ್ವಗಳಅಂತ ರಂಗದ ಕದವು ತೆರೆದಂತರಾತ್ಮನನುಕಂತು ಪಿತನಾದ ಗುರು ಗೋವಿಂದ ವಿಠಲನ್ನಅಂತರಂಗದಿ ಕಾಂಬ ಪಂಥವಿತ್ತವರಾ 5
--------------
ಗುರುಗೋವಿಂದವಿಠಲರು