ನೀಲಲೋಹಿತ ಡಮರುಗ ತ್ರಿಶೂಲ ಶೋಭಿತ ಪ
ಶುಂಡಾಲ ಚರ್ಮ ಸುದು
ಮೃಡ ಸತತ ಪಾಲಿಸು ಕರುಣದಿ ಅ.ಪ.
ನಂದಿವಾಹನ ನಮಿಪೆ ಖಳ
ವೃಂದ ಮೋಹನ
ಅಂಧಕರಿಪು ಶಿಖಿ ಸ್ಯಂದನ ಜನಕ ಸ
ನಂದನಾದಿ ಮುನಿ ವಂದಿತ ಪದಯುಗ 1
ಸೋಮಶೇಖರ ಗಿರಿಜಾಸು
ತ್ರಾಮ ಲೇಖರಾ
ಭವ ಭೀಮ ಭಯಾಂತಕ
ಕಾಮರಹಿತ ಗುಣಧಾಮ ದಯಾನಿಧೆ 2
ನಾಗಭೂಷಣ ವಿಮಲ ಸ
ರಾಗ ಭಾಷಣ
ಭೋಗಿಶಯನ ಜಗನ್ನಾಥ ವಿಠಲನ
ಯೋಗದಿ ಒಲಿಸುವ ಭಾಗವತರೊಳಿಡೊ 3