ಫಣಿರಾಜಶಯನ ರುಕ್ಮಿಣೀ ದೇವಿಯೊಡಗೂಡಿ
ಕುಳಿತಿರ್ದು ಸತಿಯೊಡನೆ
ಅಣಕವಾಡಿದನು ಇನಿತೆಂದು 1
243 ಹೇ ರಾಜಕನ್ನಿಕೆ ಭೂರಮಣ ನಾನಲ್ಲ
ನಾರದನ ನುಡಿಗೆ ನಳಿನಾಕ್ಷಿ 2
244 ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು
ಸುಕುಮಾರಿ ಎನಲು ಪರ
ವಶಳಾದಳಾಗ ಮಹಲಕ್ಷ್ಮಿ 3
245 ಈ ಮಾತ ಕೇಳಿ ಕೈ ಚಾಮರವನೀಡಾಡಿ
ಭುಗಿಲೆಂದು ಮಲಗಿದಾ
ಕಾಮಿನಿಯ ಕಂಡ ಕಮಲಾಕ್ಷ 4
246 ಕಂಗೆಟ್ಟಳೆಂದು ತನ್ನ ಅಂಗನೆಯ ಬಿಗಿದಪ್ಪಿ
ಮುಂಗುರುಳ ತಿದ್ದಿ ಮುದ್ದಿಸಿ | ಮುದ್ದಿಸಿ ಮಾತಾಡ್ಡ
ಕಂಗಳಶ್ರುಗಳ ಒರೆಸುತ್ತ5
247 ಸಲಿಗೆ ಮಾತಿನ ಬಗೆಯ ತಿಳಿಯದಲೆ ಹೀಗೆ ಚಂ
ಚಲವನೈದುವರೆ ಚಪಲಾಕ್ಷಿ | ಚಪಲಾಕ್ಷಿ ಏಳೆಂದು
ತÀಲೆಯ ಮೇಲಿಟ್ಟ ಕರಪದ್ಮ 6
248 ಶ್ರೀ ದೇವಿ ನಿನ್ನೊಳು ವಿನೋದ ಮಾಡಲಿಷ್ಟು ವಿ
ಅನುದಿನ | ಅನುದಿನದಿ ಸ್ಮರಿಸುವರ
ಕಾದುಕೊಂಡಿಹೆನು ಬಳಿಯಲ್ಲಿ 7
249 ಹಿಗ್ಗಿದಳು ಮನದಿ ಸೌಭಾಗ್ಯ ಭೂಮಿನಿಯು ಅಪ
ವರ್ಗದನ ನುಡಿಗೆ ಹರುಷಾದಿ | ಹರುಷದಿಂದಲಿ ಪಾದ
ಯುಗ್ಮಕೆರಗಿದಳು ಇನಿತೆಂದು 8
250 ಜಗದೇಕ ಮಾತೆ ಕೈ ಮುಗಿದು ಲಜ್ಜೆಯಲಾಗ
ಮಾತಾಡಿದಳು ಪತಿಯ
ಮೊಗವ ನೋಡುತಲಿ ನಳಿನಾಕ್ಷಿ 9
251 ಪರಿಪೂರ್ಣಕಾಮ ನಿನ್ನರಸಿ ನಾನಹುದು ಸ್ವೀ
ಕರಿಸಿದೆಯೊ ಎನ್ನ ಸತಿಯೆಂದು | ಸತಿಯೆಂದ ಕಾರಣಾ
ಕ್ಷರಳೆನಿಸಿಕೊಂಡೆ ಶ್ರುತಿಯಿಂದ10
252 ಭುವನಾಧಿಪತಿ ನೀನು ಅವಿಯೋಗಿ ನಿನಗಾನು
ನೃಪರ ಪತಿಯೆಂದು | ಪತಿಯೆಂದು ಬಗೆವೆನೇ
ಸವಿ ಮಾತಿದಲ್ಲ ಸರ್ವಜ್ಞ 11
253 ಭಗವಂತ ನೀನು ದುರ್ಭಗ ದೇಹಗತರವರು
ತ್ರಿಗುಣವರ್ಜಿತವು ತವರೂಪ | ತವರೂಪ ಗುಣಗಳನು
ಪೊಗಳಲೆನ್ನಳವೆ ಪರಮಾತ್ಮ12
254 ಭಾನು ತನ್ನಯ ಕಿರಣ ಪಾಣಿಗಳ ದೆಸೆಯಿಂದ
ಪಾನೀಯಜಗಳನರಳಿಸಿ | ಆರಳಿಸಿ ಗಂಧ ಆ
ಘ್ರಾಣಿಸಿದಂತೆ ಗ್ರಹಿಸೀದಿ13
255 ಬೈದವನ ಕುತ್ತಿಗೆಯ ಕೊಯ್ದು ಅಂಧಂತಮಸ್ಸಿ
ಪರಿಪಂಥಿ ನೃಪರನ್ನು
ಐದುವೆನೆ ನಿನ್ನ ಹೊರತಾಗಿ 14
256 ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ
ನಿರ್ಮಿಸಿ ಸಲಹಿ ಸಂಹಾರ | ಸಂಹಾರ ಮಾಡುವೆನು
ದುರ್ಮದಾಂಧರನಾ ಬಗೆವೇನೆ 15
257 ಮಂಜುಳೋಕ್ತಿಯ ಕೇಳಿ ಅಂಜಲ್ಯಾತಕೆಂದು ನವ
ಕಂಜಲೋಚನೆಯ ಬಿಗಿದಪ್ಪಿ | ಬಿಗಿದಪ್ಪಿ ಮುದ್ದಿಸಿದ ಧ
ನಂಜಯ ಪ್ರಿಯನು ಸಥೆಯಿಂದ16
258 ನಿನಗೆ ಎನ್ನಲಿ ಭಕುತಿ ಎನಿತಿಹುದೊ ಕಂಡೆ
ಎಂದೆಂದು ಇಹುದು ಇದ
ಕನುಮಾನವಿಲ್ಲ ವನಜಾಕ್ಷಿ 17
259 ದೋಷವರ್ಜಿತ ರುಕ್ಮಿಣೀಶನ ವಿಲಾಸ
ತೋಷದಲಿ ಕೇಳಿ ಪಠಿಸಿದ | ಪಠಿಸಿದಂಥವರ ಅಭಿ
ಲಾಷೆ ಪೊರೈಸಿ ಸಲಹೂವ 18
260 ನೀತಜನಕ ಶ್ರೀ ಜಗನ್ನಾಥ ವಿಠ್ಠಲ ಜಗ
ನ್ಮಾತೆಯೆನಿಸುವಳು ಮಹಲಕ್ಷ್ಮಿ | ಮಹಲಕ್ಷ್ಮಿ ಸುತ ಬ್ರಹ್ಮ
ಪಾತ್ರನೆನಿಸುವ ಗುರು ರುದ್ರ 19