ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀತೆ ಸದ್ಗುಣ ಗಣಗಳ ವ್ರಾತೇ ಪರಿಪಾಲಿಸು ಮಾತೇ ಪ ವಾತ ಜನನಿ ನಿರ್ಧೂತ ಕಲ್ಮಷೇ ಅ.ಪ. ನೀರೋಳು ಓಲ್ಯಾಡುತ ಹರಿ ಬರಲೂ | ವೇದಾಭಿಧೆ ಇರಲೂವಾರಿಜಾಕ್ಷನು ಭಾರವನ್ಹೊರಲೂ | ವೇದವತಿ ನೀನಿರಲುಭೂರಿ ವರಹ ರೂಪವ ಕೊಳ್ಳಲು | ಧಾತ್ರಿ ರೂಪಿ ಇರಲುಸಾರಸಾಕ್ಷಿ ನೀ ಲಕುಮಿ ರೂಪದಲಿ | ನಾರಸಿಂಹನನ ಆರಾಧಿಸಿದೇ 1 ಬಲಿಯನ್ನು ವಂಚಿಸಿ ಹರಿ ಬಂದೂ | ಸುಖಾಭಿಧೆಯಂದೂತಲೆಯ ಗಡಿಕಾನು ಅವನೆಂದು | ಹರಿಣಿಯಾದೆ ಅಂದೂತಲೆ ಹತ್ತರವನ ಅಳಿಯಲು ಬಂದು | ಜನಕಾತ್ಮಜೆ ಅಂದೂಕಳುವಿನಿಂದಪಾಲ್ ಬೆಣ್ಣೆಯಮೆಲ್ಲುವ |ಗೊಲ್ಲನ ವಲಿಸಿದಿ ಚೆಲ್ವ ರುಕ್ಮಣೀ 2 ತ್ರಿಪುರರ ವ್ರತವನಳಿದವಗೇ | ವಲ್ಲಭೆ ದೇವತಿಯಾಗೇಸುಫಲಾ ರಾವುತನಾದವನಿಗೇ | ರಾಣಿ ಪ್ರಭಾ ಆಗೇವಿಪುಳ ರೂಪಗಳ ತೋರ್ದವಗೇ | ವಿಪುಳ ರೂಪಿಯಾಗೇಚಪಲಾಕ್ಷಿಯೆ ಗುರು ಗೋವಿಂದ ವಿಠಲನ | ಸಫಲಗೈಸು ಮಮ ಹೃತ್ಕಮಲದಲಿ 3
--------------
ಗುರುಗೋವಿಂದವಿಠಲರು