ನಂಬಿದವರ ಇಂಬಾದಾ ಕಮ
ಲಾಂಬಕನೇ ನಿನ್ನ ನಾಮ ಮಹಿಮೆಯಂತೋ ಪ
ಪಾತ-ಕವ ಮಾಡಿಯಮ ದೂತರೆಳೆತರುತಿರಲು
ಧಾತುಗಂದಿ ಅಜಮಿಳ ಭೀತಿಯಲಿ
ಸುತನಾರಾಯಣ ನೆನಲು ಬಂದು
ಖ್ಯಾತಿ-ನಾಮ ಹರಿಯಿತೋ ನೀಹೊರೆದೆಯೋ 1
ಪ್ರೇಮದಿಂದೋದಿ ಪಗಿಳಿಯಾ ವ್ಯಾಮೋಹ ಅಂತ್ಯದಲಿ
ಕಾಮಿನಿ ಗಣಿಕೆ ದೇಹ ಬಿಡಲಾರದೇ
ರಾಮರಾಮಾ ಮಾತಾಡೋಯನ್ನೆ
ನಾಮವೇ ಗತಿ ನಿಡಿತೋ ನೀನೀಡಿದೆಯೋ 2
ಅಂದಿಗಿಂದಿಗ್ಯಾದ ಭಕ್ತ ವೃಂದ ದವಸರದಲ್ಲಿ
ಛಂದದಿಂದ ಬಂದು ಕಾಮ್ಯ ಪೂರಿಸುವ
ತಂದೆ ಮಹಿಪತಿ ಸ್ವಾಮಿ ನಾಮಾ
ನಂದಬಲ್ಲ ನಲ್ಲದೇ ನಿನ್ನಾರು ಬಲ್ಲರೋ||3