ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಗು ಮಲಗಮ್ಮ ತಾಯೆ ಶ್ರೀಹರಿಯ ಜಾಯೆ ಮಲಗು ದುಗ್ಧಾಬ್ಧಿನಿಲಯೆ ಸಾಗರನ ತನಯೆ ಜೋ ಜೋ ಪ ಇಂದಿರೆಯೆ ಹರಿ ನಿನ್ನ ಅಂದವನು ನೋಡಿ ಮಂದರಧರ ತನ ವಕ್ಷದಿ ಮಂದಿರವ ಮಾಡಿ ಚಂದದಿ ಮುದ್ದಿಪನು ಗೋವಿಂದ ನಲಿದಾಡಿ ಮಂದಸ್ಮಿತನಾಗಿ ತಾ ನಿಂದಿರುವ ನಿನ ಕೂಡಿ 1 ಮೂರುಕಣ್ಣ ಮೋಹಿಸಿದನೇನೆಂಬೆನಾಗ ಮಾರಮಣನು ಸ್ತ್ರೀ ವೇಷಧರಿಸಿದಾಗ ಆ ರಮೇಶ ಮರುಳಾದನಮ್ಮ ನಿನಗೀಗ ನೀರೆ ನೀ ಮಲಗು ನಿಶ್ಚಿಂತಳಾಗಿ ಬೇಗ 2 ಪನ್ನಗಾರಿಧ್ವಜಗೆ ಛತ್ರ ಚಾಮರವಾದಿ ಉನ್ನಂಥ ವಸ್ತ್ರ ಆಭರಣಗಳು ನೀನಾದಿ ಅನ್ನಪಾನಾದಿಗಳಿತ್ತು ತೃಪ್ತಿಪಡಿಪಳಾದಿ ನಿನ್ನಂತೆ ಸೇವಿಪರ್ಯಾರು ಮೂರು ಭುವನದಿ 3 ಏನು ಸುಕೃತಗೈದಿದ್ದೆ ನಾ ಕಾಣೆನಮ್ಮಾ ಜಾಣೆ ನಿನಗೆಣೆಯ ಕಾಣೆ ಜನನಿ ಕೇಳಮ್ಮಾ ತಾನೆ ತನ್ನಲ್ಲಿ ರಮಿಪನಲ್ಲವೇನಮ್ಮಾ ದಾನವಾಂತಕನು ನಿನ್ನ ಕೈಪಿಡಿದನಮ್ಮಾ 4 ಮಂಗಳಾಂಗಿಯೆ ನಿನಗೆ ಸರಿಸಮರ್ಯಾರಿಲ್ಲ ಭೃಂಗಕುಂತಳೆ ಕೈ ಜೋಡಿಪರು ಸುರರೆಲ್ಲ ಬಂಗಾರದ ಮಂಚವಣಿಯಾಗಿಹುದಲ್ಲ ರಂಗೇಶವಿಠಲ ತಾ ಪವಡಿಸಿರ್ಪನಲ್ಲ 5
--------------
ರಂಗೇಶವಿಠಲದಾಸರು