ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೈಭವ ನೋಡಿರೈ ಪ ಗುರುವರೇಣ್ಯ ಸತ್ಯ ಪ್ರಮೋದ ತೀರ್ಥರು ಸಂಭ್ರಮದಲಿ ಮೆರೆದು ಬರುವ ವೈಭವ ನೋಡಿರೈ 1 ಪರಮಹಂಸ ಪರಿವ್ರಾಜಕಾದಿ ಸ ದ್ಬಿರುದುಗಳಿಂದಲಿ ಕರೆಸಿಕೊಳ್ಳುವ 2 ಅಂದಣದಲಿ ನಲುವಿಂದ ಪರಾಶರ ಕಂದನ ನಿರಿಶ್ಯಾನಂದ ಬಡುವ 3 ಸುಂದರ ರಾಜಮಹೇಂದ್ರ ಪುರದಿ ಜನ ಸಂದಹಿಯೋಳ್ಬುಧ ವೃಂದ ಬರುವ 4 ಮೋದತೀರ್ಥ ಸುಮತೋದಧಿ ಚಂದ್ರ ಪ್ರ ಮೋದ ತೀರ್ಥರಿವರೆಂದು ನುಡಿವ 5 ಮೇದಿನಿ ಸುರಕೃತ ವೇದ ಘೋಷಣ ಸು- ನಾದ ಭರಿತ ಬಹುವಾದ್ಯ ನಿನದ 6 ಪರವಶದಲಿ ತನುಮರೆದು ಕುಣಿವ7 ಕಂಡೆನು ಪರಮತ ಖಂಡನದಿ ಸುಧೆಯ ಮಂಡನೋತ್ಸವದಿ ಕಂಡುಬರುವ 8 ಚಲುವ ಗುರು ಚರಣ ಜಲಜಕೆ ನಮಿಸುತ ಲಲನೆಯರಾರುತಿ ಬೆಳಗುತಿರುವ 9 ನೇಮದಿ ಎಡಬಲ ಭೂಮಿಸುರರು ಕೈ ಚಾಮರ ಬೀಸುತ ಸಾಮ ಪಠಣ10 ಭಯವ ಪುಟ್ಟಿಸಿ ಹೃದಯದಿ ಮಾಯ್ಗಳ ಜಯ ಘೋಷದಿ ನಿರ್ಭಯದಿ ಬರುವ 11 ಕಾಣೆನು ಸತ್ಯಜ್ಞಾನ ತೀರ್ಥರ ಸ- ಮಾನ ಗುರುಗಳೆಂದಾನಮಿಸುವ 12 ಪಾವನತರ ಗೋದಾವರಿ ಸ್ನಾನದಿ ಶ್ರೀವರನಂಘ್ರಿಯ ಶೇವಿಸುವರ 13 ವಿದ್ವಜ್ಜನನುತ ಮಧ್ವಮುನಿಯ ಮತ ವೃದ್ಧಿಕಾರಿಣಿ ಪ್ರಸಿದ್ಧ ಸಭೆಯ 14 ಸಿರಿ ಕಾರ್ಪರ ನರಸಿಂಹನೆ ಪರನೆಂದರುಹುತ ಮೆರೆವ ಸಭೆಯ 15
--------------
ಕಾರ್ಪರ ನರಹರಿದಾಸರು
ಶ್ರೀ ರಾಘವೇಂದ್ರರು ನೋಡಿದೆ ನಾ ಗುರುವರನ ಈರೂಢಿಗಧಿಕ ರಾಘವೇಂದ್ರರಾಯನ ಪ ವೃಂದಾವನ ರೂಪನ ಭಕ್ತ ವೃಂದಕಾನಂದ ಕೊಡುವ ಕಲ್ಪದ್ರುಮನಕಂದರ್ಪನ ಗೆಲಿದವನಅಂದಣದಲಿ ನಾಲವಿಂದ ಮೆರೆವರ 1 ಕಮಲಾಕ್ಷಿಮಾಲಾ ಕಂಧರನ ಈ ಕ್ಷಿತಿಯೊಳು ಮಧ್ವಮತಾಬ್ಧಿ ಚಂದಿರನತಮವೈರಿಸಮತೇಜದವನ ಸಾಧುಸುಮನ ಪ್ರಿಯ ಸುಧೀಂದ್ರ ಕರಜನ2 ಶೃಂಗಾರಾಭರಣಭೂಷಣ ದಿವ್ಯಅಂಗ ಪುಣ್ಯದಿ ಲೋಕ ಪವಿತ್ರ ಗೈಯುವನತುಂಗಾತಟ ಮಂದಿರನ ಮಹಮಂಗಲಪ್ರದ ಮಂತ್ರಾನಿಲಯದೊಲ್ಲಭನ 3 ಲೇಸಾದ ಭಿಕ್ಷು ಎನಿಪನ ತನ್ನದಾಸರಾ ಸ್ತುತಿಗೆ ಸರ್ವಾರ್ಥದಾಯಕನಭಾಸುರಾಗಮ್ಯ ಮಹಿಮನ ಜಗಧೀರ ನರಹರಿದೂತ ದೇವಸ್ವಭಾವನ 4 ಪರವಾದಿ ಹೃದಯದಲ್ಲಣನ ದ್ವೈತಸ್ಥಿರವೆಂದು ಜಗದಿ ಭೇರಿಯ ಹೊಡಿಸಿದನಪರಿಮಳಾದಿ ಗ್ರಂಥ ಬೀರಿದನ ಕರಿವರದ ಐಹೊಳೆ ವೆಂಕಟನ ಕಿಂಕರನ 5
--------------
ಐಹೊಳೆ ವೆಂಕಟೇಶ