ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಜೀವಿಪೆನಯ್ಯಾ ನಿನ್ನನಗಲಿ ನಾನು ಶಾಂತ ಮೂರುತಿ ಕೃಷ್ಣ ಕೃಷ್ಣಯ್ಯಾ ಪ ದಂತಿವರದ ಭಕ್ತ ಚಿಂತಾಮಣಿಯೆ ಲಕ್ಷ್ಮೀ ಕಾಂತ ಸಕಲ ಜಗದಂತರಾತ್ಮಕ ದೇವ ಅ.ಪ. ಅಂಗಜಪಿತ ನಿನ್ನ ಅನುಪಮ ರೂಪವ ನಿತ್ಯ ನೋಡಿ ನಲಿಯುತ ತುಂಗಮಹಿಮ ನಿನ್ನ ಘನ ಕೃಪೆಯಿಂದ ಅಂತ- ರಂಗದ ಭಕ್ತ ನಾನೆಂದೆನಿಸಿರಲಾಗಿ ಮಂಗಳಾಂಗ ಮನೋಹರ ನಿನ್ನ ಸಂಗ ಬಿಟ್ಟಿರಲಾರೆನೋ ಸ್ವಾಮಿ ರಂಗ ಎನ್ನಂತರಂಗವರಿಯಯಾ ಇಂಗಿತಜ್ಞ ನೀನಲ್ಲವೇ ಕೃಷ್ಣ 1 ಇಂದಿರೇಶನೆ ನಿನ್ನ ಚರಿತೆಯ ಕೇಳಿ ಆ- ನಂದದ ಸವಿ ಕಂಡೆ ಪುಣ್ಯಾತ್ಮರಿಗೆ ಬೇರೆ ಒಂದರಲಭಿರುಚಿ ತೋರ್ಪುದೆ ಗುಣಗಣ ಸಿಂಧು ನಿನ್ನನು ಬಿಟ್ಟೇನೊಂದ ನಾನೊಲ್ಲೆನು ಸಿಂಧು ಮಂದಿರ ಸುಂದರ ನಿನ್ನ ಪೊಂದಿಕೊಂಡಿಹನಲ್ಲವೇ ಕೃಷ್ಣ ತಂದೆ ಕೈ ಬಿಡಬೇಡವೊ ಎಳ- ಗಂದಿಯೆಂಬುದ ನೆನೆದು ಪಾಲಿಸೊ 2 ದೋಷ ರಹಿತ ಯಾದವೇಶ ಭಕ್ತರ ಪೋಷ ಶ್ರೀಶ ಕರಿಗಿರೀಶ ಸಕಲ ಲೋಕೇಶ ಪಾದ ಭೂಸುರ ಪ್ರಿಯ ಎನ್ನ ದೋಷಗಳೆಣಿಸದೆ ನೀ ಸಲಹಲಿ ಬೇಕೊ ವಾಸುದೇವ ಪರಾತ್ಪರ ಕೃಷ್ಣ ಕ್ಲೇಶ ಪರಿಹರನಲ್ಲವೆ ಸ್ವಾಮಿ ದಾಸ ಜನರಭೀಷ್ಟದಾಯಕ ನಾ ಶರಣು ಹೊಕ್ಕಿಹೆನು ರಕ್ಷಿಸು 3
--------------
ವರಾವಾಣಿರಾಮರಾಯದಾಸರು
ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ ಪ ಹೆಚ್ಚಿದ ತಮನೆಂಬ ದನುಜ ವೇದವ ಕದ್ದುಬಚ್ಚಿಟ್ಟು ನೀರೊಳು ಮುಳುಗಿರಲುಮಚ್ಚ ರೂಪದಿಂದ ಪೋಗಿ ಅವನ ಕೊಂದಅಚ್ಯುತರಾಯನೆಂಬ ಮಾಸಾಳಮ್ಮ1 ಕೂರ್ಮ ರೂಪಿನಿಂದೆತ್ತಿದ ಗೋ-ವಿಂದನೆಂಬುವ ಮಾಸಾಳಮ್ಮ2 ವರಾಹ ರೂಪಿ ಮಾಸಾಳಮ್ಮ 3 ಲೇಸು ತಪ್ಪಿದನೆಂದು ಹಿರಣ್ಯಕ ತನಯನಘಾಸಿ ಮಾಡಲು, ಕಂಬ ಒಡೆದುದಿಸಿರೋಷದಿ ದೈತ್ಯನ ಕರುಳ ಕಿತ್ತ ನರಕೇಸರಿ ರೂಪಿನ ಮಾಸಾಳಮ್ಮ 4 ಆ ಮಹಾಸಿರಿಯ ಗರ್ವದಿ ಮುಂದರಿಯದೆಭೂಮಿಯನು ಬಲಿ ತಾನಾಳುತಿರೆನೇಮಿಸಿ ಎರಡೇ ಹೆಜ್ಜೆಯೊಳಳಕೊಂಡವಾಮನ ರೂಪಿನ ಮಾಸಾಳಮ್ಮ 5 ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನಆ ಮಹಾಮುನಿಯ ಪ್ರಾಣಕೆ ಮುನಿಯೆತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದರಾಮ ಭಾರ್ಗವನೆಂಬ ಮಾಸಾಳಮ್ಮ 6 ಜನಕ ಸುತೆಯನು ಕದ್ದೊಯ್ಯಲು ಲಂಕೆಗೆಗಣಿತಾತೀತ ಶರಧಿಯ ಕಟ್ಟಿಘನ ಕೋಪದಿ ದಶಿಶಿರನ ಕತ್ತರಿಸಿದಇನಕುಲ ರಾಮನೆಂಬ ಮಾಸಾಳಮ್ಮ 7 ದೇವಕಿ ಬಸುರೊಳು ಬಂದು ಗೋಕುಲದಿಆವ ಕಾವ ಗೊಲ್ಲರ ಸಲಹಿಮಾವನ ಕೊಂದು ಮತ್ತೈವರ ಸಲಹಿದದೇವ ಕೃಷ್ಣನೆಂಬ ಮಾಸಾಳಮ್ಮ8 ಪತಿವ್ರತೆಯರ ವ್ರತವಳಿಯಬೇಕೆನುತಲಿಅತಿಶಯದಿ ತ್ರಿಪುರದ ಸ್ತ್ರೀಯರನುತ ಬೌದ್ಧ ರೂಪದಿ ಬಹು ಭಂಗಪಡಿಸಿದರತಿಪತಿಪಿತನೆಂಬ ಮಾಸಾಳಮ್ಮ 9 ಖುಲ್ಲ ಮನುಜರನು ಕೊಲ್ಲಬೇಕೆನುತಲಿಭಲ್ಲೆ ಹಿಡಿದು ತುರಗವನೇರಿಅಲ್ಲಲ್ಲೆ ಸೊಲ್ಲಡಗಿಸಿ ವಲ್ಲಭನೆನಿಸಿದಬಲ್ಲಿದ ಕಲ್ಕಿಯೆಂಬ ಮಾಸಾಳಮ್ಮ 10 ಮಂಗಳ ಮಹಿಮ ಭುಜಂಗ ಶಯನ ಕಾ-ಳಿಂಗ ಮರ್ದನ ದೇವೋತ್ತುಂಗಅಂಗಜಪಿತ ನೆಲೆಯಾದಿಕೇಶವ ಅಂತ-ರಂಗದೊಳಿರುವ ಮಾಸಾಳಮ್ಮ 11
--------------
ಕನಕದಾಸ
ತ್ರಿವಿಕ್ರಮರಾಯನ ನಂಬಿರೊಭುವನದೊಳ್ ಭಾಗ್ಯವ ತುಂಬಿರೊಸವೆಯದ ಸುಖವ ಮೇಲುಂಬಿರೊ ವಾ-ಸವನ ಮನ್ನಣೆಯ ಕೈಕೊಂಬಿರೊ ಪ. ವಾದಿರಾಜಗೊಲಿದುಬಂದನ ಚೆಲ್ವಸೋದೆಯ ಪುರದಲ್ಲಿ ನಿಂದನಸಾಧಿಸಿ ಖಳರನು ಕೊಂದನ ತನ್ನಸೇರ್ದಜನರ ಬಾಳ್ ಬಾಳೆಂದನ 1 ಕಾಲಿಂದ ಬೊಮ್ಮಾಂಡ ಒಡೆದನ ಪುಣ್ಯ-ಶೀಲೆ ಗಂಗೆಯನು ಪಡೆದನಪಾಲಸಾಗರವನ್ನು ಕಡೆದನ ಶ್ರುತಿ-ಜಾಲ ಗದೆಯಿಂದ ಹೊಡೆದನ 2 ಇಂದಿರಾದೇವಿಯ ಗಂಡನ ಸುರಸಂದೋಹದೊಳು ಪ್ರಚಂಡನಇಂದ್ರಾದಿ ಗಿರಿವಜ್ರದಂಡನ ಮುನಿವೃಂದಾರವಿಂದಮಾರ್ತಾಂಡನ3 ಕಂಬುಕಂಧರ ಮಂಜುಳಗಾತ್ರನವೃಂದಾರಕರಿಗೆ ನೇತ್ರನ ಜಗಕಿಂದೇ ಸುಪವಿತ್ರನ 4 ವನಿತೆಯರರ್ಥಿಯ ಸಲಿಸದೆ ಮನೆಮನೆವಾರ್ತೆಯ ಹಂಬಲಿಸದೆದಿನ ದಿನ ಪಾಪವ ಗಳಿಸದೆ ಅಂತ-ಕನ ಭಟರಿಂದೆಮ್ಮ ಕೊಲಿಸದೆ 5 ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊಹರಿಯರ್ಚನೆಯನು ಮಾಡಿರೊ ಶ್ರೀ-ಹರಿಯ ಮೂರುತಿಯ ನೋಡಿರೊ 6 ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನ ಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ 7 ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- - - - - - - - - - - - - - - - - - - -8 ಜಯಿಸಿ ಕಂಸನೆಂಬ ಮಾವನ ಭಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ 9
--------------
ವಾದಿರಾಜ
ನರಸಿಂಹ ಹ್ಯಾಂಗೆ ಮಾಡಲೋ ನರಸಿಂಗ ದೊರೆಯ ಪ ಹ್ಯಾಂಗೆ ಮಾಡಲಿನ್ನು ಭವದಿಭಂಗ ಪಡುವೆ ನಿಮ್ಮ ಪಾದಸಂಗ ದೊರಕುವದಕೆ ಅಂತ-ರಂಗದ ಸಾಧನ ವ್ಯಾವುದ್ಹೇಳೋ ಅ.ಪ. ಎಲ್ಲಿ ಪೋದೆಯೋ ನಮ್ಮಲ್ಲೆ ನೀನುಕಲ್ಲು ಆದೆಯೋ ಬಲ್ಲೆ ಸುಖದ ಬಾಧೆಎಲ್ಲ ಬಿಟ್ಟು ನಿಮ್ಮ ಪಾದದಲ್ಲಿ ಸೇರಿ ಸೇವೆಮಾಳ್ಪರಲ್ಲಿ ಛಲವ ಮಾಡುವರೆ 1 ಅಭೀಷ್ಟ ಕೊಡುವೆ ಎಂದು ಬಂದೆ 2 ನಿತ್ಯ ಇಂದಿರೇಶ ಮನದಿ ಭಾಷಿಸುವುದು 3
--------------
ಇಂದಿರೇಶರು
ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ ಪ ಬಾ ಬಾ ವೇಂಕಟಾಚಲ ವಿಹಾರ ಬಾ ಬಾನೇಕಾವತಾರ ಧೀರ-ಶೂರ ಅ.ಪ. ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ ಅಕ್ಷಯವಂತ ಸೂಕ್ಷ್ಮಾಂಬರ ಧರಾ- ಧ್ಯಕ್ಷ ಪ್ರತ್ಯಕ್ಷದ ದೈವ ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ 1 ಜಾಂಬೂನಾದಾಂಬರ ಸಾಂಬಜನಕ-ನೀ ಲಾಂಬುದ ವರ್ಣಸುಪೂರ್ಣ ಸಾಂಬವಿನುತ ಸುಗುಣಾಂಬುಧಿ ನಾನಾ ವಿ ಡಂಬನ ತೋರಿದ ಮಹಿಮ ಕಾಂಬುವೆ ನಿನ್ನ ಚರಣಾಂಬುಜ ಮನದೊಳು ಜಾಂಬುವಂತನ ಪರಿಪಾಲಾ ವಿ- ಶ್ವಂಭರಂಬರಗ್ಗಣಿಯ ಪಡೆದ ವೃ- ತ್ತುಂಬರೇಶಾಂಬುಧಿ ಶಾಯಿ 2 ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ ಕಾಳೆ ಹೆಗ್ಗಾಳೆ ತಮ್ಮಟಿ ನಿ- ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ ಕಂಬುಡಿಕ್ಕಿ ವಾದ್ಯ ಸೂಳೈಸುತಲಿರೆ ಭಾಗವತರು ಸಂ ಮೇಳದಿ ಕುಣಿದೊಲಿದಾಡೆ ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ ಢಾಲುಗಳು ಒಪ್ಪಿರಲು3 ಹಂಸವಾಹನ ಕ್ರತುಧ್ವಂಸಿ ಸುಮನಸೋ ತ್ತಂಸ ಕೃಶಾನು ಪಾಪಿಗಳ ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ ಕೌಂಶಿಕಾಪತಿಯು ಧನವ ಅಂಶಮಾಲಿ ಸೋಮಕಂಶಿಕಮುನಿ ಪರಮ ಹಂಸರು ಅಲ್ಲಲ್ಲಿ ನಿಂದು ಸಂಶಯ ಮಾಡದೆ ಸಮ್ಮೊಗರಾಗಿಹರು ಕಂಸಾರಿ ತ್ರಿಗುಣಾತೀಶ 4 ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು ವಾರಿಧಿಯಲಿ ಮಗ್ನರಾಗಿ ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯರು ನಿಂದಿಹರು 5 ಅಂದು ಬಲೀಂದ್ರನ್ನ ದ್ವಾರದಿ ನೀನಿರೆ ಮಂದಮತಿಯು ರಾವಣನು ಬಂದು ಕೆಣಕೆ ನಗುತ ಮಹಾಲೀಲೆ ಯಿಂದಲಿ ನೀನಾ ಖಳನ ಒಂದು ಶತಯೋಜನ ತಡಮಾಡದಲೆ ನೀ ಹಿಂದಕ್ಕೆ ಬೆರಳಲ್ಲಿ ಒಗೆದೆ ಅಂದವಾಗಿಹುದೇನೊ ದೇವ6 ಬಂಗಾರ ರಥದೊಳು ಶೃಂಗಾರವಾದ ಶ್ರೀ ಮಂಗಳಾಂಗ ಕಳಿಂಗ ಭಂಗ ನರಸಿಂಗÀ ಅಂಗಜ ಜನಕ ಸಾ- ರಥಾಂಗ ಪಾಣಿ ವಿಹಂಗ ಪ್ಲ- ಸಂಗೀತ ಲೋಲ ಗೋಪಾಂಗನೆಯರ ಅಂತ- ರಂಗ ಸಂತಾಪ ವಿದೂರ 7 ತಡಮಾಡಲಾಗದೊ ಪೊಡವೀಶ ನೀನಿಂದು ತಡೆವರಿನ್ನಾರೈಯ ವಡೆಯ ವೇದವೇದ್ಯ ಕಡೆಗಣ್ಣಿನಿಂದ ನೋಡಿದಲೆ ನಡೆವುದು ನುಡಿವುದು ಅಡಿಗಡಿಗೆ ನೀನು ಬಿಡದೆ ಒಳಗೆ ಹೊರಗಿದ್ದು ಸಡಗರ ದೈವವೆ ನುಡಿಯ ಲಾಲಿಸುವುದು ವಡನೊಡನೆ ಪಾಲಿಸುತ್ತ 8 ಹತ್ತವತಾರದ ಹರಿಯೆ ಘನಸಿರಿಯೆ ಮತ್ತೊಬ್ಬರನು ಹೀಗೆ ಕರೆಯೆ ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎ- ನ್ಹತ್ತಿಲಿ ಆಡುವ ಮರಿಯೆ ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ ಎತ್ತನೋಡಲು ನಿನಗೆ ಸರಿಯೆ ಅತ್ತಿತ್ತ ಪೋಗದೆ ಇತ್ತ ಬಾರೈಯ ಎ- ನ್ಹತ್ತಿಲಿ ವೆಂಕಟದೊರೆಯ 9
--------------
ವಿಜಯದಾಸ
ರಂಗಯ್ಯ ಮನೆಗೆ ಬಂದರೆ ಅಂತ-ರಂಗದಿ ಗುಡಿಕಟ್ಟಿ ಕುಣಿವೆ ನಾ ಪ ಎಳೆ ತುಳಸಿವನ ಮಾಲೆಯು ರಂಗ-ಗೆಳೆ ನೀಲದ ಮೈಯ ಢಾಳವುಪೊಳೆವ ಪೊಂಗೊಳಲೊಪ್ಪೆ, ಚೆಲುವನು ನಮ್ಮನಿಲಯಕ್ಕೆ ಬಂದ ಭಾಗ್ಯವು ನೋಡ 1 ಬಾಡಿದ ಮಾವು ಪಲ್ಲವಿಸಿತು, ಹರಿನೋಡಲು ಜಗವು ಭುಲ್ಲವಿಸಿತುಕೂಡಿದ ಮನದ ತಾಪಗಳೆಲ್ಲ, ಎತ್ತ-ಲೋಡಿತೊ ಹರಿ ಬಂದ ಭರದಿಂದ ನೋಡ 2 ಬಿಸಿಲು ಬೆಳೆದಿಂಗಳಾಯಿತು, ತಾ-ಮಸಹೋಗಿ ಜ್ಞಾನೋದಯವಾಯಿತುಕುಸುಮನಾಭನು ತಾ ಬಂದರೆ ಅಲ್ಲಿವಿಷ ಹೋಗಿ ಅಮೃತವಾಯಿತು ನೋಡ 3 ಹಾವು ನ್ಯಾವಳವಾಯಿತು, ಅಲ್ಲಿದಾವಾನಳ ತಂಪಾಯಿತುಬೇವು ಸಕ್ಕರೆ ಆಯಿತು ನಮ್ಮದೇವಕಿಸುತ ಬಂದರೆ ನೋಡ 4ಜಾಣೇರರಸನೋಡು ರಂಗನು, ಅವತಾನಾಗಿ ಬೆನ್ನ ಬಿಡ ನಮ್ಮನುಏನಾದರೂ ಅಗಲದಲೆ ನಮ್ಮಮಾನಾಭಿಮಾನದೊಡೆಯ ಶ್ರೀ ಕೃಷ್ಣ 5
--------------
ವ್ಯಾಸರಾಯರು
ಪಕ್ಷಿವಾಹನ ಶ್ರೀ ವಾಮನ್ನ ಅಂತ- |ರಿಕ್ಷಾಳಕ ಪ್ರಿಯ ಕಾಯೆನ್ನ ||ಋಕ್ಷಪನಿಭಮಾಯಾಕಕ್ಷಾಜಿÕ ಹರೆ ಜಗ- |ತ್ಕುಕ್ಷೆ ನಂಬಿದೆನೆನ್ನುಪೇಕ್ಷೆ ಮಾಡಲಿ ಬೇಡ ಪಅಂಜಿನಾಧರಾ ಧರಧಾಮಹೇ ನಿ |ರಂಜನ ವನಮಾಲಿ ಭೂಮಾ ||ಅಂಜಲಿಪುಟದಿಂದಲಂಜಿ ಬೇಡುವೆ ಬಲ |ಭಂಜನಾನುಜವಿತತತ್ರಿಜಗ||ಮಂಜುಳಾಂಗನೇ ವೀತ ಭೂಮುಖ |ಕಂಜನಾಭನೆ ತರುಣಿ ಶಿವನೃಪ||ಕುಂಜರವರದಕರವಪಿಡಿಯೊ 1ಪಾಠೀಣಕಮಠವರಾಹ| ನೀಚಹಾಟಕಾರಿವಟುಭೂಭುಜ ಹಾ ||ಖೇಟಾಹಬುದ್ಧಕಲ್ಕಿ ಘೋಟಕಾನನವಿಶ್ವ|ನಾಟಕ ಭೈಷ್ಮೀ ಮುಖ ವಧೂಟನಿಯರವಲ್ಲಭ||ಕೋಟಿಭಾಸ್ಕರತೇಜನಿನ್ನಯ |ಆಟ ತಿಳಿಯಲುಕೋಕನದಶುಭ||ಪೀಠ ಲಕುಮಿ ಅಶಕ್ತರಹರು ಕಿ |ರೀಟಸಖನಿನ್ನವರೊಳಗಿಡೊ 2ಶಂತನುವಿನ ವಂಶ ರಕ್ಷ | ಮಾತುಲಾಂತಕ ಜಲಜದಳಾಕ್ಷ ||ಮಂಥಾರಿ ಶಿಶುಪಾಲ ದಂತವಕ್ರ ಮುರಾದಿ |ಹಂತ ದಾನವರ ನಿಕೃಂತನಾಹಿಮದ ಹಾ ||ನಂತಧುನಿಪಿತ ವೇದ ವೇದ್ಯ ಅ |ನಂತ ಮಹಿಮನೆ ಅತ್ರಿ ಸುತ ನಿ- ||ಶ್ಚಿಂತ ಶ್ರೀ ಪ್ರಾಣೇಶ ವಿಠಲ ದು- |ರಂತ ಶಕ್ತಿಭವಾಬ್ಧಿಘಟಜಾ 3
--------------
ಪ್ರಾಣೇಶದಾಸರು