ಯಾಕೆ ಕೆಡುವೆ ಖೋಡಿ ಮನವೆ ಪ
ಲೋಕದಿರವ ನೋಡಿ ನೂಕುನುಗ್ಗಾಗಿ
ಕಾಕುಗುಣದಿ ಯಮಲೋಕ ಪಡೆವುದವಲೋಕನ ಮಾಡಿ ಅ.ಪ
ಭ್ರಮಿಸಬಾರದ ಭ್ರಮಿಸಿ ಮನಸೆ
ಕ್ರಮಗೆಟ್ಟಾಚರಿಸಿ
ಶಮೆದಮೆ ಅರಿಯದೆ ಸುಮನರ ನೋಡದೆ
ಸುಮ್ಮನಳಿವೆ ಈ ಸಮಯ ಸಿಗುವುದೇ1
ತಂತು ತಿಳಿಯದ್ಹೋದಿ ಜಗತ್ತಿನ
ಚಿಂತನೆಗೊಳಗಾದಿ
ಸಂತಸ ವಹಿಸದೆ ಸಂತರ ತಿಳಿಯದೆ
ಅಂತರವರಿಯದೆ ಅಂತ್ಯಕೀಡಾದಿ2
ಪಾಮರ ನೀನಾದಿ ನಾಶನ
ತಾಮಸ ಅಳಿದ್ಹೋದಿ
ಸ್ವಾಮಿಯೊಳಾಡದೆ ಕ್ಷೇಮವ ಪಡೆಯದೆ
ನಾಮಭಜಿಸಿ ಶ್ರೀರಾಮನ ಕೂಡದೆ 3