ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ನಿನ್ನ ದಯವು ಆಗೋದೋ ಇಂದಿರೇಶ ದುರಿತ ಹಿಂದಕ್ಕ್ಹೋಗೋದೊ ಮಂದಬುದ್ಧಿಯಿಂದ ನಾಲಿಗೆ ಹಿಂದೆ ಮುಂದೆ ನೋಡುತಿಹುದು ಸಂದೇಹ ಬಿಟ್ಟು ಗೋವಿಂದನ್ನ ನೆನೆಯಲಿಕ್ಕೆ ಪ ಹರಿಯ ತನಯ ಹರಿಯು ಹರಿಯೆಂದು ಒರೆಯುತಿರಲು ಗಿರಿಯನ್ಹತ್ತಿಸಿ ಉರಿಗೆ ಕೆಡುಹಿದ ಕರುಣವಿಲ್ಲದ ಹಿರಣ್ಯಕನು ಪರಮ ಬಾಧೆ ಬಡಿಸುತಿರಲು ಕರೆಯೆ ಕಂಬದಿ ಬಂದು ನರ- ಹರಿಯ ನಾಮ ಕಾಯ್ತು ಅವನ 1 ಕಂತುಪಿತನೆ ನಿನ್ನ ಭಜಿಸದೆ ದ್ವಿಜನು ಕೆಟ್ಟು ಅಂತ್ಯಜ ಸ್ತ್ರೀಯಳ ಕೂಡಿ ಮೆರೆಯಲು ಅಂತ್ಯಕಾಲದಲ್ಲಿ ಏಕಾಂತದಿಂದ ಮಗನ ಕರೆಯೆ ಕಂತುನಯ್ಯ ನಿನ್ನ ನಾಮ ಎಂಥಗತಿಯ ಕೊಟ್ಟಿತವಗೆ2 ದುಷ್ಟಪತ್ನಿ ನುಡಿಗೆ ಉತ್ತಾನಪಾದ ತನ್ನ ಪುತ್ರನಿಂದ ರಹಿತನಾಗಲು ಅಚ್ಚುತನ ಧ್ಯಾನದಲಾಸಕ್ತನಾಗೆ ಉಗ್ರತಪಕೆ ಮೆಚ್ಚಿಕೊಟ್ಟ ನಮ್ಮ ಸ್ವಾಮಿ ಹೆಚ್ಚಿನ ಲೋಕ ಪದವಿ ಧ್ರುವಗೆ 3 ಬಂದು ಭರದಿ ಮಡುವ ಕಲಕುವೋ ಮದಡಗಜವ ಕಂಡು ಮಕರಿ ಕಾಲು ಹಿಡಿಯಲು ಬಂಧುಗಳಿಂದ ರಹಿತವಾಗಿ ಒಂದು ಸಾವಿರ್ವರುಷ ಬಾಳಲು ಇಂದಿರೇಶ ನಿನ್ನ ಸ್ಮರಣೆಯಿಂದ ಶಾಪ ವಿಮೋಚಿತನಾದ 4 ಸೃಷ್ಟಿಗಧಿಕ ನಿನ್ನ ದಯವಿರೆ ಪಾಂಡುಸುತರ ಪಟ್ಟದ ರಾಣಿ ಸಭೆಗೆ ಎಳೆಯಲು ವಸ್ತ್ರಹರಣ ಕಾಲದಲ್ಲಿ ಭಕ್ತಿಯಲ್ಲಿ ಭೀಮೇಶ- ಕೃಷ್ಣನ ಮುಟ್ಟಿ ಭಜಿಸೆ ಕೃಷ್ಣೆಗಾಕ್ಷಣ ತೃಪ್ತನಾಗಿ ಕೊಟ್ಟೆಯೊ ವಸನ 5
--------------
ಹರಪನಹಳ್ಳಿಭೀಮವ್ವ
ದಯ ಬಾರದ್ಯಾಕೊ ರಾಘವಾ ಪ ಕಾಯಬೇಕು ಯೆಂದು ಕೊರಗಿ ಮೊರೆಯಿಡೆ ನ್ಯಾಯವೇನು ಯೆನ್ನ ಮರತುಬಿಡುವದು ಅ.ಪ ಅಂದು ಅಜಮಿಳನು ಅಂತ್ಯಕಾಲದಲ್ಲಿ ಕಂದ ನಾರ ಬಾಯೆಂದು ಕರಿಯಲು ಅಂದ ಮಾತುಗಳಿಗೆ ಅತಿ ಹರುಷಿಸಿ ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ 1 ಹರಿಯೆ ಗತಿಯೆಂದು ಹೊಗಳು ಕಂದನ ಹರುಷವಿಲ್ಲದೆ ಪಿತ ಕಷ್ಟಪಡಿಸಲು ಊರು ತೋರದಂತಾ ಸ್ತಂಭದಿಂದ ಬಂದು ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ 2 ಸರ್ಪಶಯನನೆ ಸಾರ್ವಭೌಮನೆ ನಾಸಿಕ ಶ್ರೋತ್ರವಳಿದನೇ ಅಪ್ಪ ಗುರುವರ ವಿಜಯವಿಠ್ಠಲನೇ ಒಪ್ಪದಿಂದ ವಲಿವ ವರದರಾಜನೇ 3
--------------
ವಿಜಯದಾಸ
ನಮೋ ನಮೋ ಕಾಲಭೈರವ ಹರಿಯ ಚರಣ- ಸಮೀಪದೊಳಗಿದ್ದು ಮೆರೆವ ಪ. ಸಮೀಚೀನಜ್ಞಾನಭಕ್ತ- ಸಮೂಹವ ಕಾವ ಲಕ್ಷ್ಮೀ- ರಮಣನ ಕಾರ್ಯಮಂತ್ರಿ- ಯು ಮಾಧವನ ಸಮಾನಬಲ ಅ.ಪ. ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ- ಮುಟ್ಟಿ ಭಜಿಪ ವೈರಿಮರ್ದನ ಸೃಷ್ಟಿ ಮೂರರಲ್ಲಿ ಕೀರ್ತಿ- ಪಟ್ಟ ದಿಟ್ಟ ಧೀರ ಪರಮ ನಿಷ್ಠ ಪುಷ್ಪ ತುಷ್ಟಿಪ್ರದ ಬ- ಲಿಷ್ಠ ಶ್ರೇಷ್ಠ ಭೂತಪತಿಯೆ 1 ಶ್ರೀನಿವಾಸನಾಜ್ಞೆ ಮೀರದೆ ನಡೆಸುವದೆ ಪ್ರ- ಧಾನ ಕಾರ್ಯ ನಿನ್ನದೆಂಬುದೆ ತಾನು ಕಿಂಚಿದರಿತು ಸನ್ನಿ- ಧಾನವನ್ನೋಲೈಸಿ ಬಂದೆ ದೀನಬಂಧು ಸುಗುಣಸಿಂಧು ಮಾನತ್ರಾಣವಿತ್ತು ಸಲಹೊ 2 ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆ ಸ್ವಂತ ಬಂದು ಮಾಡು ರಕ್ಷಣೆ ಅಂತ್ಯಕಾಲದಲ್ಲಿ ಹರಿಯ ಚಿಂತನೆಗೆ ವಿಘ್ನ ಬಾರ- ದಂತೆ ಕಾವ ಮಹಾ ತೇಜೋ- ಸೂರಿ 3 ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟ ಪಾಲಿಸುವ ಚಂದ್ರಶೇಖರ ಖೂಳ ಜನರ ಗರ್ವಮುರಿವ ಶೂಲಪಾಣಿ ಸುಗುಣಶ್ರೇಣಿ ಮೂಲಪತಿಯ ಪಾದಪದ್ಮ ಮೂಲದೊಳಗೆ ನಲಿವ ಚೆಲುವ 4 ಭೂರಿ ಮಹಿಮೆಯ ಭಕ್ತರಿಂಗಾ- ಧಾರವಾಗಿ ರಾಜಿಸಿರುವೆಯ ಧೀರ ಲಕ್ಷ್ಮೀನಾರಾಯಣನ ಸೇರಿದಾನತರ್ಗೆ ಮಂ- ದಾರ ಮಹೋದಾರ ಗಂ- ಭೀರ ಧೀರ ಚಾರುಚರಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಮೋ ನಮೋ ಕಾಲಭೈರವ ಹರಿಯ ಚರಣ-ಸಮೀಪದೊಳಗಿದ್ದು ಮೆರೆವ ಪ.ಸಮೀಚೀನಜ್ಞಾನಭಕ್ತ-ಸಮೂಹವಕಾವಲಕ್ಷ್ಮೀ-ರಮಣನ ಕಾರ್ಯಮಂತ್ರಿ-ಯು ಮಾಧವನ ಸಮಾನಬಲ ಅ.ಪ.ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ-ಮುಟ್ಟಿ ಭಜಿಪ ವೈರಿಮರ್ದನಸೃಷ್ಟಿ ಮೂರರಲ್ಲಿ ಕೀರ್ತಿ-ಪಟ್ಟ ದಿಟ್ಟ ಧೀರಪರಮನಿಷ್ಠ ಪುಷ್ಪ ತುಷ್ಟಿಪ್ರದ ಬ-ಲಿಷ್ಠ ಶ್ರೇಷ್ಠ ಭೂತಪತಿಯೆ 1ಶ್ರೀನಿವಾಸನಾಜೆÕ ಮೀರದೆ ನಡೆಸುವದೆ ಪ್ರ-ಧಾನ ಕಾರ್ಯ ನಿನ್ನದೆಂಬುದೆತಾನು ಕಿಂಚಿದರಿತು ಸನ್ನಿ-ಧಾನವನ್ನೋಲೈಸಿ ಬಂದೆದೀನಬಂಧು ಸುಗುಣಸಿಂಧುಮಾನತ್ರಾಣವಿತ್ತು ಸಲಹೊ 2ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆಸ್ವಂತ ಬಂದುಮಾಡುರಕ್ಷಣೆಅಂತ್ಯಕಾಲದಲ್ಲಿ ಹರಿಯಚಿಂತನೆಗೆ ವಿಘ್ನ ಬಾರ-ದಂತೆಕಾವಮಹಾ ತೇಜೋ-ವಂತ ಹೊಂಕಾರಿಸೂರಿ3ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟಪಾಲಿಸುವ ಚಂದ್ರಶೇಖರಖೂಳಜನರ ಗರ್ವಮುರಿವಶೂಲಪಾಣಿ ಸುಗುಣಶ್ರೇಣಿಮೂಲಪತಿಯ ಪಾದಪದ್ಮಮೂಲದೊಳಗೆ ನಲಿವ ಚೆಲುವ 4ತೋರಿಕೊಳ್ಳದೆಭೂರಿಮಹಿಮೆಯ ಭಕ್ತರಿಂಗಾ-ಧಾರವಾಗಿ ರಾಜಿಸಿರುವೆಯಧೀರ ಲಕ್ಷ್ಮೀನಾರಾಯಣನಸೇರಿದಾನತರ್ಗೆ ಮಂ-ದಾರಮಹೋದಾರ ಗಂ-ಭೀರ ಧೀರ ಚಾರುಚರಿತ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ