ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಕಿಲ್ಲ ಎನಗನ್ಯ ಏನೇನು ಸ್ವಾಮಿ ಸಾಕು ನಿನ್ನಯ ನಾಮವೊಂದೆ ನುತ ಪ್ರೇಮಿ ಪ ದುರುಳ ಸಂಹರ ನಾಮ ದುರಿತ ಪರಿಹರ ನಾಮ ಶರಧಿಮಥನ ನಾಮ ಸುರರ ಸಲಹಿದ ನಾಮ ಹರನ ಪ್ರೇಮದ ನಾಮ ಪರಮೇಷ್ಟಿಯನು ಪಡೆದ ಸ್ಥಿರನಾಮದ್ಹೊರತು 1 ಸೃಷ್ಟಿಯಾಳುವ ನಾಮ ಶಿಷ್ಟಪಾಲನ ನಾಮ ಕಷ್ಟ ಕಳೆಯುವ ನಾಮ ಇಷ್ಟಪೂರ್ಣ ನಾಮ ಮುಟ್ಟುಮುಡಿ ಹರನಾಮ ಅಷ್ಟಸಿರಿಪತಿನಾಮ (ಹುಟ್ಟುಸಾವಿ)ಲ್ಲದ ಶಿಷ್ಟನಾಮದ್ಹೊರತು 2 ವೇದ ಹೊಗಳಿದ ನಾಮ ಸಾಧುವಂದಿತನಾಮ ಬೋಧರೂಪದ ನಾಮ ಆದಿಮಹನಾಮ ಭೇದವಿಲ್ಲವ ನಾಮ ವೇದಗೋಚರ ನಾಮ ಆದಿ ಅಂತಿಲ್ಲದನಾದಿ ನಾಮದ್ಹೊರತು 3 ತರಳನ್ಪೊರೆದ ನಾಮ ಕರಿಯ ಸಲಹಿದ ನಾಮ ತರುಣಿನುದ್ಧಾರ ನಾಮ ಧರೆಪೊತ್ತ ನಾಮ ಕರುಣೆ ತುಂಬಿದ ನಾಮ ಶರಣಾಗತಪ್ರಿಯ ನಾಮ ನರನ ಬೆಂಬಲನಾದ ಹರಿನಾಮದ್ಹೊರತು 4 ಮೂರು ಕಳೆಯುವ ನಾಮ ಆರುಗೆಲಿಸುವ ನಾಮ ಆರುನಾಲ್ಕು ಸುಲಭದಿ ಹಾರಿಸುವ ನಾಮ ಸಾರ ಮುಕ್ತಿಯ ನಾಮ ಧೀರ ಶ್ರೀರಾಮ ನಿಮ್ಮಪಾರನಾಮದ್ಹೊರತು 5
--------------
ರಾಮದಾಸರು