ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಡಮತಿಗಡ ಕಡಿದೀಡ್ಯಾಡಿ ಪಡಿರೋ ಸನ್ಮಾರ್ಗವ ಹುಡುಕ್ಯಾಡಿ ಪ ಗಡಗಡಸದೃಢದಯಿಡುತೋಡೋಡಿ ಪಡಿರೋ ಕಡು ಅನಂದ್ವೊಯ್ಕುಂಠ ನೋಡಿ ಅ.ಪ ಚಿಂತೆ ಭ್ರಾಂತಿಗಳ ದೂರಮಾಡಿ ನಿ ಶ್ಚಿಂತರಾಗಿರೋ ಮನ ಮಡಿಮಾಡಿ ಶಾಂತಿತೈಲ್ಹೊಯ್ದು ಜ್ಞಾನಜ್ಯೋತಿಕುಡಿ ಚಾಚಿ ನಿಂತು ನೋಡಿರೋ ಹರಿಪುರದಕಡೆ ಅಂತ್ಯ ಪಾರಿಲ್ಲದಾತ್ಯಂತ ಪ್ರಕಾಶದಿಂ ನಿಂತು ಬೆಳಗುತಾರೋ ಆನಂತಸೂರ್ಯರು ಕೂಡಿ 1 ಬೋಧಾದಿಮಯ ಮಹದ್ವಾರಗಳು ಮತ್ತು ವೇದ ನಿರ್ಮಯ ಪುರಬೀದಿಗಳು ಆದಿಅಂತಿಲ್ಲದಷ್ಟ ಭೋಗಗಳು ವಿ ನೋದ ಮುಕ್ತಿ ಕಾಂತೇರಾಟಗಳು ವೇದವೇದಾಂತ ಅಹ್ಲಾದದಿಂ ಪೊಗಳುವ ಸುಜನ ಮಹದಾದಿಪದವಿಗಳು2 ಸೇವಿಪ ಸುರಮುನಿಗಣಗಳು ಕೋವಿದ ನಾರದಾದಿ ಗಾನಗಳು ರಂಭೆ ನಾಯಕಿಯರ ಮಹನರ್ತನಗಳು ಸಾವಿರಮುಖಪೀಠದ್ಹೊಳೆವ ಶ್ರೀರಾಮನ ಪಾವನಪಾದಕಂಡು ಸಾವ್ಹುಟ್ಟು ಗೆಲಿರೆಲೋ 3
--------------
ರಾಮದಾಸರು
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಬೇಕಿಲ್ಲ ಎನಗನ್ಯ ಏನೇನು ಸ್ವಾಮಿ ಸಾಕು ನಿನ್ನಯ ನಾಮವೊಂದೆ ನುತ ಪ್ರೇಮಿ ಪ ದುರುಳ ಸಂಹರ ನಾಮ ದುರಿತ ಪರಿಹರ ನಾಮ ಶರಧಿಮಥನ ನಾಮ ಸುರರ ಸಲಹಿದ ನಾಮ ಹರನ ಪ್ರೇಮದ ನಾಮ ಪರಮೇಷ್ಟಿಯನು ಪಡೆದ ಸ್ಥಿರನಾಮದ್ಹೊರತು 1 ಸೃಷ್ಟಿಯಾಳುವ ನಾಮ ಶಿಷ್ಟಪಾಲನ ನಾಮ ಕಷ್ಟ ಕಳೆಯುವ ನಾಮ ಇಷ್ಟಪೂರ್ಣ ನಾಮ ಮುಟ್ಟುಮುಡಿ ಹರನಾಮ ಅಷ್ಟಸಿರಿಪತಿನಾಮ (ಹುಟ್ಟುಸಾವಿ)ಲ್ಲದ ಶಿಷ್ಟನಾಮದ್ಹೊರತು 2 ವೇದ ಹೊಗಳಿದ ನಾಮ ಸಾಧುವಂದಿತನಾಮ ಬೋಧರೂಪದ ನಾಮ ಆದಿಮಹನಾಮ ಭೇದವಿಲ್ಲವ ನಾಮ ವೇದಗೋಚರ ನಾಮ ಆದಿ ಅಂತಿಲ್ಲದನಾದಿ ನಾಮದ್ಹೊರತು 3 ತರಳನ್ಪೊರೆದ ನಾಮ ಕರಿಯ ಸಲಹಿದ ನಾಮ ತರುಣಿನುದ್ಧಾರ ನಾಮ ಧರೆಪೊತ್ತ ನಾಮ ಕರುಣೆ ತುಂಬಿದ ನಾಮ ಶರಣಾಗತಪ್ರಿಯ ನಾಮ ನರನ ಬೆಂಬಲನಾದ ಹರಿನಾಮದ್ಹೊರತು 4 ಮೂರು ಕಳೆಯುವ ನಾಮ ಆರುಗೆಲಿಸುವ ನಾಮ ಆರುನಾಲ್ಕು ಸುಲಭದಿ ಹಾರಿಸುವ ನಾಮ ಸಾರ ಮುಕ್ತಿಯ ನಾಮ ಧೀರ ಶ್ರೀರಾಮ ನಿಮ್ಮಪಾರನಾಮದ್ಹೊರತು 5
--------------
ರಾಮದಾಸರು
ತಿರುಪತಿಯ ಶ್ರೀವೆಂಕಟೇಶಗೋವಿಂದಹರಿಗೋವಿಂದಪರತರ ಪರಮಾನಂದ ಪಮಂದರಗಿರಿಧÀರ ಸುಂದರಮೂರುತಿನಂದನಕಂದ ಗೋವಿಂದ ಮುಕ್ಕುಂದ ಅ.ಪದುರಿತರಾಶಿ ನಾಶ ಗೋವಿಂದಪರಮಪದವಿಗೀಶ ಗೋವಿಂದಸುರಮುನಿಸೇವಿತ ಹರಅಜವಿನಮಿತಪರಮಚರಿತ ಸಿರಿಗೋವಿಂದ 1ಹುಟ್ಟುಸಾವಿಲ್ಲದ ಗೋವಿಂದತಟ್ಟು ಮುಟ್ಟಿಲ್ಲದ ಗೋವಿಂದಸೃಷ್ಟಿ ತನ್ನಾಧೀನದಿಟ್ಟು ಆಳುವ ದಿಟಸೃಷ್ಟಿಗೆ ಸಿಲುಕದ ಗೋವಿಂದ 2ಆದಿಅಂತಿಲ್ಲದ ಗೋವಿಂದನಾದಕಲೆಯಿಲ್ಲದ ಗೋವಿಂದಸಾರಿ ಪೊಗಳುವ ವೇದಕೆ ಕಾಣದಆದಿಅನಾದಿ ಬ್ರಹ್ಮ ಗೋವಿಂದ 3ಮುಚ್ಚಲು ಮಾಜದ ಗೋವಿಂದಬಿಚ್ಚಲು ಕಾಣದ ಗೋವಿಂದಅಚ್ಚುತಾನಂತೆಂದು ಬಚ್ಚಿಟ್ಟ್ಹೊಗಳುವರಸಚ್ಚಿತ್ತದ್ಹೊಳೆಯುವ ಗೋವಿಂದ 4ನಶ್ವರವಿಲ್ಲದ ಗೋವಿಂದಶಾಶ್ವತ ಮಹಿಮೆಯ ಗೋವಿಂದವಿಶ್ವವಿಶ್ವರಕ್ಷ ವಿಶ್ವನಾಟಕ ಮಹವಿಶ್ವವಿಶ್ವಾಕರ ಗೋವಿಂದ5ಅಸಮ ಲೀಲಾಜಾಲ ಗೋವಿಂದಅಸುರಕುಲದಕಾಲಗೋವಿಂದದಶವಿಧವತಾರದಿ ವಸುಧೆಯ ಭಾರವಕುಶಲದಿಂದಿಳುಹಿದ ಗೋವಿಂದ 6ತಿಳಿಯಲು ತಿಳಿಯದ ಗೋವಿಂದತಿಳಿವಿಗೆ ಸುಲಭದ ಗೋವಿಂದಬೆಳಕುಕತ್ತಲೆದೆಸೆಸುಳಿವಿಲ್ಲದಸ್ಥಾನದ್ಹೊಳೆಯುವ ಅಕಳಂಕ ಗೋವಿಂದ 7ಭೂಷಣ ಮಣಿಮಾಲ ಗೋವಿಂದಶ್ರೀಶ ಶ್ರೀನಿವಾಸ ಗೋವಿಂದವಾಸುಕಿಶಯನ ಶೇಷಾರಿಗಮನಸಾಸಿರನಾಮದ ಗೋವಿಂದ 8ನಾಮರೂಪಿಲ್ಲದ ಗೋವಿಂದನೇಮನಿತ್ಯಿಲ್ಲದ ಗೋವಿಂದಶಾಮಸುಂದರ ಮುಕ್ತಿ ಸೋಮಭೀಮಸುಖದ್ಧಾಮ ಶ್ರೀರಾಮ ನಿಜಗೋವಿಂದ 9
--------------
ರಾಮದಾಸರು