ಸ್ಥಿರ ನೀಡೆನ್ನ್ವದನಾಬ್ಜದಿ ಪರಮ
ಪುರುಷ ನಿನ್ನ ಸ್ಮರಣೆ ಪ
ಸೌಖ್ಯ ಸುಭೋಗದಿರಲಿ
ಬೇನಿಯಿಂದ ಒರಲುತಿರಲಿ
ತ್ರಾಣಗುಂದಿ ತೊಳಲುತಿರಲಿ
ದಾನವಾಂತಕ ನಿನ್ನ ಧ್ಯಾನ 1
ಭೂಮಿಪರು ಸನ್ಮಾನ ಕೊಡಲಿ
ಪಾಮರೆಂದು ಒದೆದು ನೂಕಲಿ
ಭೂಮಿಜನರಪಹಾಸ್ಯ ಗೈಯಲಿ
ಸ್ವಾಮಿ ನಿಮ್ಮ ಭಜನಾನಂದ 2
ಚಿಂತೆಯಿರಲಿ ಶ್ರೀಮಂತಿಕಿರಲಿ
ಸಂತಸೆಂಬುದು ಸಿಗದ್ಹೋಗಲಿ
ಅಂತಕಾರಿ ಶ್ರೀರಾಮ ನಿನ್ನ
ಚಿಂತನೆ ಎನ್ನ ಅಂತ್ಯಕಾಲದಿ 3