ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ಶುಭಮಂಗಳಂ ಪ ಅಂಜನೆ ಗರ್ಭದಿಂ ಬಂದವಗೆ ಕಂಜಾಕ್ಷಿ ವಾರ್ತೆಯ ತಂದವಗೆ ಸಂಜೀವನ ತಂದು ರಾಮನ ರಂಜನೆಗೈದ ಮುಖ್ಯಪ್ರಾಣಗೆ 1 ಕುಂತಿಯ ಕಂದನೆಂದೆನಿಸಿದವಗೆ ದಂತಿ ಸಾಸಿರ ಬಲವಂತನೆಗೆ ಕಂತು ಪಿತನ ಮಂತ್ರಿಯೆನಿಸಿ ಕುರುಕುಲ ಅಂತಕನಾದ ಭೀಮಸೇನಗೆ 2 ನಡುಮನೆ ವೇದವತಿ ವರಸುತಗೆ ಉಡುದಾರ ಉಪವೀತ ತೊರೆದವಗೆ ಸಿರಿ ರಂಗೇಶವಿಠಲನ ಬಿಡದೆ ಪೂಜಿಪ ಮಧ್ವರಾಯಗೆ 3
--------------
ರಂಗೇಶವಿಠಲದಾಸರು