ಪೊರೆಯಲಿದು ಸಮಯ ಗೋವಿಂದ ದೇವ
ಶರಣರಕ್ಷಕ ನೆಂಬ ಬಿರುದು ಮೆರೆದ ಮುಕುಂದ ಪ
ಬಂಧನದ ಭವದೊಳಗೆ ನಾನೊಂದು ದಿನ ಸುಖವನರಿಯೆ
ಮಂದ ಮತಿಯಲಿ ತೊಳಲಿ ಕಂದಿಕುಂದಿ
ಮುಂದು ಗಾಣದೆ ಯಮನ ಬಂಧದೊಳು ಸಿಲುಕಿದನು
ಮಂಧರಧರ ಕರುಣಸಿಂಧು ನೀ ಬಂದು 1
ಘೋರ ತಾಪವು ಬಂದು ಸಾರಿ ಎನ್ನನು ಮುಸುಕೆ
ಭೋರ ನುರಿಯಲಿ ಬಳಲಿ ಚೀರಿಹಾರಿ
ದುರಿತ ವಾರಿಧಿಯೋಳ್ ಬಿದ್ದು ಬಾಯಾರಿ
ಮೊರೆಯಿಡುವೆ ನರಕಾರಿ ದಯತೋರಿ 2
ತಂಡತಂಡದಿ ವೈರಿಗಳು ಕೂಡಿ ಕಾಯದೊಳು
ಅಂಡುಗೊಂಡೆನ್ನಳೆದು ತಂದು ಕೊಂಡು
ಹಿಂಡು ಖಂಡವನು ಸುಟ್ಟುರುವಿ ನುಂಗುವರೆನುತ
ಕಂಡು ಕೊಂಡಾನು ಸಾರಿದೆನಿಂದು ಬಂದು 3
ತರಳತನ ದಾಯಸದÀಲಿ ನೊಂದೆ ಮುನ್ನಬಲು
ತರುಣಿಯರ ಸಂಗದಲಿ ಮರುಳಾದೆನು
ಜರೆಬಂದು ಮುಸುಕಿ ಕಣ್ಗಾದೀ ಪರಿಯಭವ
ಶರಧಿಯೊಳು ಮುಳುಗಿ ಮೊರೆಯಿಡುವ ಚಿನ್ಮಯನೆ 4
ಹಿಂಗದಿದು ಭಯವ ಪೇಳಲು ತೀರದೆನಗೆ ಶ್ರೀ
ರಂಗನಿನ್ನಧೀನ ಜನವರಿಯಲೂ
ಮಂಗಳಾತ್ಮಕ ವಾಯುಜನ ಕೋಣೆ ಲಕ್ಷ್ಮೀಶ ನಿನ್ನ
ಡಿಂಗರಿಗನ ಕಾಯ್ವುದೀಗ ಸಮಯ ಕೃಪಾಳೋ 5