4. ಆಂಡಾಳ್
ಶ್ರೀಗೋದಾದೇವಿ ಶ್ರೀಭೂ ನೀಳಾ ಅಂಡಾಳ್ ದೇವಿ
ಭೋಗಿಶಯನನ ಭಾಗ್ಯದ ರಾಣಿ ಪ
ಸರಿತುಳಸಿಯ ಮೂಲದಳುದಿಸಿದಳೆ
ಪೆರಿಯಾಳ್ವಾರರ ಪ್ರೇಮಕುಮಾರಿ
ಪರಮಾತ್ಮಗೆ ಹೂ ಮುಡಿದು ಮುಡಿಸಿದೆ
ಕರಣತ್ರಯದೊಳಗವನೊಳು ಬೆರೆದೆ 1
ಧನುರ್ಮಾಸದವ ವ್ರತಾಚರಿಸಿದೆ ತಾಚರಿಸಿದೆ
ಅನುಮತಿಸಿದ ಗೆಳತಿಯರೊಡಗೂಡಿ
ವಿನಯದಿಂದ ತಿರುಪ್ಪಾವೈ ಪಾಡುತ
ಕನಸೊಳು ಶ್ರೀರಂಗನೊಳು ಕೂಡಿದೆ 2
ಕಡುತ್ವರೆಯಿಂ ತಿರುಮೊಳಿಯಿಂ ತುತಿಸಿ
ಸಡಗರದಿಂದವನಂ ಕೈವಿಡಿದೇ
ಒಡೆಯನೊಡಲೊಳಗೆ ಎಡೆಯಂ ಪಡೆದೆ
ಪೊಡವೀಶ ಜಾಜಿಕೇಶವನ ಮಡದಿ 3