ನದಿಗಳು
ಗೋದಾವರೀ ದೇವಿ ನಿನಗೆ ಶರಣಾರ್ಥಿ ಪ
ಮೇದಿನಿಯ ಪಾಪ ಸಂಹಾರಿಣೀ ಕಲ್ಯಾಣಿ ಅ.ಪ
ಹೇಮಾದ್ರಿಸಂಜಾತೆ ಸೋಮಸಮಕಾಂತಿಯುತ
ಭೂಮಿಜಾಖೇಲನಾ ಪುಳಿನಭರಿತೆ
ಕ್ಷೇಮ ಸಂದಾತೆ ಶ್ರೀರಾಮ ಕರಪೂಜಿತೇ
ಕಾಮಿತಾರ್ಥದೆ ಮಾತೆ ಪ್ರಾಙ್ಮುಖೀ ವರದಾತೆ 1
ದೇವಗಂಗೋಪಮೆ ಪಾವನತರಂಗಿಣೆ
ವಿಪ್ರ ಸುಖದಾತೆ ಮೌನಿವಿನುತೆ
ಕಾವೇರಿಸನ್ಮಿತ್ರೆ ಪರಮಶುಭಚಾರಿತ್ರೆ
ಜೀವಪೋಷಕಶಾಲಿ ವಸನಾಂಬಿಕೆ 2
ದಂಡಕಾರಣ್ಯ ಸಂಚಾರಿಣಿ ನಾ ನಿನ್ನ
ಕಂಡು ಧನ್ಯತೆಯಾಂತೆ ಮಿಂದು ನಲಿದೆ
ಅಂಡಜಾಧಿಪಗಮನ ಮಾಂಗಿರೀಶನ ಸುತ ಎಂತು
ಕಂಡಂತೆ ಮನದೊಳಾನಂದವಾಂತೆ 3