ಪಂಢರಿನಾಥ ವಿಠಲ | ತೊಂಡನನು ಸಲಹೊ ಪ
ಅಂಡಜಾದಿಪತುರಗ | ಕುಂಡಲಿಯ ಶಯನಾ ಅ.ಪ.
ಭವ ಸಮುದ್ರಕೆ ಪೋತ | ತವಪಾದವಾಶ್ರಯಿಸಿಬವಣೆಗಳ ಕಳೆವೆನೆನೆ | ತವಕದಿಂದಿರುವಾ |ಇವನ ಕೈ ಪಿಡಿಯುತ್ತ | ಧೃವವರದ ಸಲಹೋಮಾಧವನೆ ಭಿನ್ನವಿಪೆ ಶ್ರೀ | ಪವನ ವಂದಿತನೇ 1
ಅಂತರಂಗದ ದೈತ್ಯ | ಸಂತತಿಯು ಕೊಡುತಿಪ್ಪಸಂತಾಪ ಹರಿಸಿ ಮ | ಧ್ವಾಂತರಾತ್ಮಾ ಹರಿಯೆಸಂತತವು ತವನಾಮ | ಚಿಂತೆಯಲ್ಲಿರಿಸುತ್ತಸಂತಸವ ಬಡಿಸೊ ಶ್ರೀ | ಕಂತುಹರಸಖನೇ 2
ಇಂದು | ಆಶಿಸುತ್ತಿಹನೇ |ಲೇಸಾದ ಸತ್ಪಂಥ | ದಾಶಯವ ತಿಳಿಸುತ್ತದಾಸನಾಗೆಂದೆನುತ | ಆಶಿಷವನೀವೇ 3
ಹರಿಗುರೂ ಸದ್ಭಕ್ತಿ | ಪರತತ್ವ ಸುಜ್ಞಾನಮರುತ ಮತ ದೀಕ್ಷೆಯನು | ವಿಷಯ ವೈರಾಗ್ಯ |ಕರುಣಿಸುತ ತರಳನ್ನು | ಪೊರೆಯೆಂದು ಬಿನ್ನೈಪೆಕರಿವರದ ಕಮಲಾಕ್ಷ | ಕಾರುಣ್ಯ ನಿಧಿಯೇ 4
ಗಾನಲೋಲನೆ ಇವಗೆ | ಧ್ಯಾನ ಸಾಧನ ಕೊಟ್ಟುಕಾಣಿಸೋ ಹೃದ್ಗುಹದಿ | ಮೌನಿಜನವಂದ್ಯ |ಜಾಣಗುರೂಗೋವಿಂದ | ವಿಠಲ ಮಧ್ಭಿನ್ನತವನೀನಾಗಿ ಸಲಿಸೆಂದು | ಆನಮಿಸಿ ಬೇಡ್ವೆ5