ಪುಂಡರೀಕಾಕ್ಷನ ನಾ ಕಂಡೆ
ಪಾಂಡುರಂಗೇಶನ ಪಾಂಡವಪಕ್ಷನ ಪ
ಅಂಡಜವಾಹನೋದ್ದಂಡ ಪರಾಕ್ರಮ
ಶುಂಡಲವರದ ಭೂಮಂಡಲ ಭರಿತನಅ.ಪ
ದೇವದೇವೇಶನ ಭಾವಜಜನಕನ
ಪಾವನಚರಿತನ ಭಾವುಕವರದನ
ಶ್ರೀವನಮಾಲನ ಲಾವಣ್ಯಾಂಗನ
ದೇವತರಂಗಿಣಿ ಪಾವನ ಪದನ1
ಪಾತಕ ಹರಣನ
ಜ್ಯೋತಿಸ್ವರೂಪನ ಭೂತಳವಳೆದನ
ಪಾತಕ ಹರ ಜೀಮೂತ ನೀಲಾಂಗನ
[ಪ್ರೀತ] ಮಾಂಗಿರಿನಾಥ ಸುಂದರನ 2