ಚನ್ನಕೇಶವ
ಇನ್ನೇನಿನ್ನೇನಿನ್ನು ಯನಗಿನ್ನೇನಿನ್ನೇನಿನ್ನು ಪ.
ಚನ್ನಕೇಶವನಿವನನ್ನು ಹೃದಯದೊಳ್
ಚೆನ್ನಾಗಿ ನೆಲಸಿರಲಿನ್ನೇನ ಬೇಡುವೆ 1
ಭುವಿಜಾತೆಯೆನ್ನ ಮಾತೆ - ಭುವಿನಾಥನೆನ್ನ ತಾತ
ಇವರೆನ್ನೊಳಿರುತಿರೆ ಭವಕ್ಲೇಶ ಪರಿದಿರೆ 2
ಅಂಡಜವಾಹನಾಖಂಡಲಾರ್ಚಿತನ
ಪುಂಡರೀಕಾಕ್ಷನ ಕಂಡು ಕೊಂಡಾಡಿದೆ 3
ಧರೆಯೊಳಧಿಕ ಶೇಷಗಿರಿಯೊಳು ನೆಲಸಿರ್ಪ
ವರದ ಶ್ರೀನರಹರಿ ವರದನೆನ್ನೊಳಿರೆ 4