ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುದ್ರ ದೇವರು ಕಂಟಕವ ಪರಿಹರಿಸೊ ಶ್ರೀ ಕಂಠಮೂರುತಿಯೇ ಪ ಬಂಟನೆಂದೆನಿಸೆನ್ನ ವೈಕುಂಠಮೂರುತಿಗೇ ಅ.ಪ ತಂಟೆಸಂಸಾರದ ಲಂಪಟದಲೆನ್ನ ಮನ ಮರ್ಕಟದÀ ತೆರದಿ ಪರ್ಯಟನ ಮಾಡೆ ಅಂಟಿಕೊಂಡಿಹ ಈ ಭವಾಟವಿಯ ದಾಂಟಿಸುವೆ ನೆಂಟ ನೀನಹುದಯ್ಯ ಶಿತಿಕಂಠದೇವಾ 1 ನಿರ್ಜರೇಶನ ಬಿಂಬ ಮೂರ್ಜಗದೊಳಗೆಲ್ಲ ಧೂರ್ಜಟಯೆ ನೀನೆ ಭವವರ್ಜಿತನ ಮಾಡೋ ದುರ್ಜಯವು ಎನ್ನ ಮನ ಆರ್ಜಿಸದೆ ಹರಿಭಕುತಿ ಪತಿ ಜನಾರ್ದನನೊಳ್ ಮನ ನಿಲ್ಲಿಸೋ2 ತ್ರ್ಯಂಬಕನೆ ಎನ್ನ ಮನದಂಬರದೋಳ್ ಹರಿಪಾದ ಅಂಬುರುಹ ತೋರಯ್ಯ ಶಂಭೋ ಮಹಾದೇವಾ ಕುಂಭಿಣಿಯೊಳು ಒಂದೆ ಇಂಬುತೋರದು ಎನಗೆ ವೈರಿ ಭವಭಯ ಹಾರೀ 3 ವಾಮದೇವನೆ ಕಾಯೊ ತಾಮಸಮತಿ ಹರಿಸಿ ಶ್ರೀ ಮನೋಹರನಲ್ಲಿ ಸನ್ಮನವ ನೀಡೋ ಸೋಮಶೇಖರ ಸುರಸ್ತೋಮದಲಿ ನಿನ್ನಂಥ ಪ್ರೇಮಿಗಳ ನಾ ಕಾಣೆ ಉಮೆಯರಸ ಸಲಹಯ್ಯ 4 ಶಿಕ್ಷಕನು ನೀ ಜ್ಞಾನಚಕ್ಷುವ ನೀಡು ವಿರೂ ಪಾಕ್ಷಮೂರುತಿ ಶ್ರೀ ವೇಂಕಟೇಶನ ಭಕ್ತ ಈ ಕ್ಷಿತಿಯೊಳ್ ಉರಗಾದ್ರಿವಾಸವಿಠಲನ ಪ್ರ ತ್ಯಕ್ಷದಲಿ ನೋಳ್ಪ ಶ್ರೀ ತ್ರ್ಯಕ್ಷಮೂರುತಿಯೇ 5
--------------
ಉರಗಾದ್ರಿವಾಸವಿಠಲದಾಸರು