ಬಾರಿಯ ಜಿಡ್ಡಂತೆ ದುರ್ಜನ ಸಂಗ
ಬಾರಿಯ ಜಿಡ್ಡಂತೆ ಪ
ತೂರಿ ಪೋಗದಂತೆ ದಾರಿಕಟ್ಟು ಮಾಡಿ
ಊರು ಸುತ್ತ್ಹಚ್ಚಿದ ಅ.ಪ
ತಲೆಬಾಗಿ ನೆಲವನ್ನು ನೋಡದೆ
ತಿಳಿಯದಲೆ ಇದನು ತುಳಿಯಲು ಅಂಗಾಲಿ
ನೊಳಗೆ ಮುರಿದು ಖಂಡ
ಕೊಳೆಸಿ ಕೀವುಮಾಡಿ ಅಳಿಸಿ ಬಳಲಿಸುವ 1
ಉಡಿಗೆ ತೊಡಿಗೆಗಳನ್ನು ಅಂಟಲು
ಬಿಡಿಸಲು ಬಿಡದಿನ್ನು ಅಡರಿಕೊಂಡು ಇದು
ತೊಡರಿ ತೊಡರಿ ಬಲು
ಮಿಡುಕಿಸುವ ಕಡು ತೊಡರಿನ ಅಂಟು2
ನಿಷ್ಠೆಯಿಂದ ಜವದಿ ಶ್ರೀರಾಮ
ಪಟ್ಟಣ ಮಾರ್ಗದಿ ನೆಟ್ಟಗೆ ಪೋಗುವ
ಶಿಷ್ಟರ ಕಾಲೊಳು ನೆಟ್ಟು
ಕಷ್ಟ ಕೊಟ್ಟು ಬಿಟ್ಟು ಕಟ್ಟು ಮಾಡ್ವ 3