ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ ಉಡಿಯ ತುಂಬಿರೆ ನಮ್ಮ ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗ- ಳ್ವುಡಿಯ ತುಂಬಿರೆ ನಮ್ಮ ಪ ಜಂಬುನೇರಲ ಗೊನೆ ಜಾಂಬೂಫಲಗಳು ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು 1 ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು ಅಕ್ಕಿ ಅಂಜೂರ ಉತ್ತತ್ತಿ ಫಲಗಳು2 ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿ ಗ್ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ 3
--------------
ಹರಪನಹಳ್ಳಿಭೀಮವ್ವ
ದೇವೇಂದ್ರನ ಸೊಸೆ ದೇವಕ್ಕಿ ತನಯಳು ಏನೇನು ಬಯಸಿದಳು ಪ ಒಂದು ತಿಂಗಳು ತುಂಬಲು ಸುಭದ್ರ ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬುನೇರಳು ಬಯಸಿದಳು ಅಂಬುಜಾಕ್ಷನ ತಂಗಿ ಪೈಜಣ ರುಳಿ ಗೆಜ್ಜೆ ಕಾ- ಲುಂಗುರ ಕಿರುಪಿಲ್ಯ ಇಟ್ಟೇನೆಂಬುವಳು 1 ಎರಡು ತಿಂಗಳು ತುಂಬಲು ಸುಭದ್ರ ಪರಡಿ ಮಾಲತಿ ಸಣ್ಣ ಶ್ಯಾವಿಗೆ ಬಯಸಿದಳು ಪರಿವೇಶನ ತಂಗಿ ಹರಡಿ ಕಂಕಣ ಹಸ್ತ ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು 2 ಮೂರುತಿಂಗಳು ತುಂಬಲು ಸುಭದ್ರ ವಾಲ್ಯ ಪಚ್ಚದ ಚಂದ್ರ ಬಾಳ್ಯವ ಬಯಸಿದಳು ಮಾರನಯ್ಯನ ತಂಗಿ ತೋಳಿಗ್ವಜ್ರದ ವಂಕಿ ಮಾಣಿಕ್ಯದ್ವೊಡ್ಯಾಣ ಇಟ್ಟೇನೆಂಬುವಳು 3 ನಾಲ್ಕು ತಿಂಗಳು ತುಂಬಲು ಸುಭದ್ರ ಆಕಳ ತುಪ್ಪ ಅನಾರಸ ಬಯಸಿದಳು ಶ್ರೀಕಾಂತನ ತಂಗಿ ತೂಕದ ಸರಿಗೆಯಿಟ್ಟು ಏಕಾವಳಿಯ ಸರ ಹಾಕೇನೆಂಬುವಳು 4 ಐದು ತಿಂಗಳು ತುಂಬಲು ಸುಭದ್ರ ಕೆನೆಮೊಸರ್ಹಾಕಿದ ಬುತ್ತಿ ಚಿತ್ರಾನ್ನವ ಬಯಸಿದಳು ಅಸುರಾಂತಕನ ತಂಗಿ ಹಸುರುಪತ್ತಲನುಟ್ಟು ಕುಸುಮ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 5 ಆರು ತಿಂಗಳು ತುಂಬಲು ಸುಭದ್ರ ಚೌರಿ ರಾಗಟೆ ಜಡೆಬಂಗಾರ ಬಯಸಿದಳು ಮಾರನಯ್ಯನ ತಂಗಿ ನಾಗಮುರಿಗೆನಿಟ್ಟು ಜಾಜಿ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 6 ಏಳು ತಿಂಗಳು ತುಂಬಲು ಸುಭದ್ರ ಕ್ಷೀರ ಮಂಡಿಗೆ ಬುಂದ್ಯ ಫೇಣಿಯ ಬಯಸಿದಳು ಕಮಲ ಕ್ಯಾದಿಗೆ ಮುಡಿಯ ನಿಂಬಾವಳಿ ಪತ್ತಲ ನಿರಿದುಟ್ಟೇನೆಂಬುವಳು7 ಎಂಟು ತಿಂಗಳು ತುಂಬಲು ಸುಭದ್ರ ಚಿಂತಾಕು ಪದಕ ಕಟ್ಟಾಣಿಯ ಬಯಸಿದಳು ವೈಕುಂಠಪತಿಯ ತಂಗಿ ಇಂಟರ್ ಪಪ್ಪುಳಿನುಟ್ಟು ಸೀಮಂತದುತ್ಸವ ಮಾಡೆ ಸುಖದಿಂದಿರುವಳು 8 ಒಂಬತ್ತು ತಿಂಗಳು ತುಂಬಲು ಸುಭದ್ರೆಗೆ ಬಂಗಾರದ್ಹೊರಸಿನಲ್ಲಿರಿಸಿ ಆರತಿ ಮಾಡಲು ಮಂಗಳಮಹಿಮ ಭೀಮೇಶಕೃಷ್ಣನ ತಂಗಿ ಕಂದ ಅಭಿಮನ್ಯು ಎಂಬುವನ ಪಡೆದಳು 9
--------------
ಹರಪನಹಳ್ಳಿಭೀಮವ್ವ
ಫಲಾಹಾರವ ಮಾಡೊ ಪರಮಪುರುಷನೆ ಲಲನೆ ಲಕುಮಿಯ ಕರಕಂಜದಿಂದ ಪ. ಕದಳಿ ಕಾಮಾರೆ ಖರ್ಜುರ ಕಿತ್ತಳೆ ಕಂಚಿ ಬದರಿ ಬೆಳಲು ಬಿಕ್ಕೆ ಹಲಸು ದ್ರಾಕ್ಷಿಗಳು ಮಧುರಮಾವು ಮಾದಳ ತೆಂಗಿನಕಾಯಿ ತುದಿಮೊದಲಾದ ಪರಿಪರಿ ಫಲಗಳು 1 ಉತ್ತತ್ತೆ ಜೇನು ಅಂಜೂರ ಸೇಬು ದಾಳಿಂಬೆ ಮತ್ತಾದ ತುಮರೆ ಪರಗಿ ಕಾರೆ ಕವಳಿ ಕತ್ತರಿಸಿದ ಕಬ್ಬು ಜಂಬುನೇರಳೆಹಣ್ಣು ಒತ್ತಿದ ಬೇಳೆ ನೆನೆಗಡಲೆ ಕರ್ಬುಜೀಹಣ್ಣು 2 ಹಾಲು ಸಕ್ಕರೆ ಬೆಣ್ಣೆ ತುಪ್ಪ ಸೀಕರಣೆಯು ಸಾಲುರಸಾಯನ ಸವಿಯೆಳನೀರು ಮೂಲೋಕದೊಡೆಯ ಹಯವದನ ವೆಂಕಟರೇಯ ಪಾಲಿಸೊ ಲಕುಮಿಯ ಕರಕಂಜದಿಂದ 3
--------------
ವಾದಿರಾಜ
ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು ಮುನ್ನಿನಂದದಲಿ ಸುತನ ಮುಂದಿಟ್ಟು 151 ಇಕ್ಷ್ವಾಕುಕುಲತಿಲಕನೆ ನಿನ್ನ ರಾಜ್ಯವ ಒಪ್ಪಿಸಿಕೊಳಲೆನಗಳವೆ ಪುತ್ರಗೆ ಪಟ್ಟವ ಕಟ್ಟುವುದೇನು ಕಾರಣ ವಿಸ್ತಾರವಾಗಿ ಹೇಳೆಂದ 152 ಕೇಳಿದೆ ಕರ್ಣದಿ ಹೀನದ ವಾಕ್ಯವ ಜಾರತ್ವ ಬಂದಿತಾತ್ಮಜೆಗೆ ಮಾಡುವೆನು 153 ಅಮರಲೋಕಕ್ಕೆ ವಶವಹರು ಭಾಧೆಗೆ ಗುರಿಯಾಗಿ 154 ವ್ಯರ್ಥವಾಯಿತು ಎನ್ನ ಬದುಕು ಮಾಡಿಕೊಂಬೆನೆಂದ 155 ಕಥೆಯ ಕೇಳರಿಯಾ ಕುಂದನೊದ್ದವರಾರು ಜಗದಿ 156 ಮೀರಿದರಾರೊ ಕಲ್ಪನೆಯ 157 ಸರ್ವಾಂಗದಿಂದ ಸುಂದರಿಯು ಸತಿ ಲಾಂಛನೆಯ ತಾಳಿದನು 158 ಸೆರೆತಂದ ತಾರಾದೇವಿಯನು ಪಾಡೇನು ಭೂಪಾಲ 159 ಕುಮಾರತಿಯ ಮಂದಿರಕೆ ಅರುಹಿದರಾರು ನಿನ್ನೊಡನೆ 160 ನಿಲ್ಲಿಸಿದ ಪ್ರಧಾನಿ ನಡೆತಂದ ಸೆಜ್ಜೆವಾಹರಿಗೆ 161 ಮಲಿನವನುಟ್ಟ ಮಾನಿನಿಯ ಸೆಳೆವಿಡಿದೆತ್ತಿದ ರಾಯ 162 ಮಾಜುವದೇಕೆ ಎನ್ನೊಡನೆ ಬ್ರಾಹ್ಮರು ಮೆಚ್ಚುವಂತೆ 163 ಸುರರೊ ನರರೊ ಕಿನ್ನರರೊ ಗಿರಿಜೇಶನಾಣೆ ಹೇಳೆಂದ 164 ವಿಶ್ವಲೋಚನನಂಘ್ರಿಯಾಣೆ 165 ಸರಿಯ ನಾರಿಯರು ಉರಿವ ಪಾವಕನ 166 ಬ್ರಾಹ್ಮರಿಗ್ಯೊಗ್ಯವಹುದೆ ಬರುವುದು ನಿಮ್ಮ ಕುಲಕೆ 167 ಪಾತಕಿಯೆಂದು ತಿಳಿದು ಬರುವುದೆ ಉಚಿತವು 168 ಮುನಿದು ಅರಣ್ಯಕ್ಹೋಗುವರೆ ವರಿಸು ನಿನಗೆ ಉತ್ತುಮವುಳ್ಳ ಪುರಷಗೆ ಧಾರೆಯನೆರೆವೆನು 169 ಪಾತಕ ಬರಿದೆ ನಿಂದ್ಯವನು (ಅ) ಬಂದೊದಗಿದ ಮೇಲೆ 170 ತೂಪಿರಿದು ಮಂತರಿಸಿ ಘೋರ ಕಾನನಕೆ 171 ಗುರಿಮಾಡಿ ನಾರಿ ಕಂಬನಿದುಂಬಿದಳು 172 ವಶವಲ್ಲದಂಥ ಮೂಗುತಿಯ ಬಿಸುಸುಯ್ವದೇತಕೆ ತಾಯೆ 173 ಕುಮಾರಿಯ ಮೇಲೆ ಸ್ನೇಹದಲಿ ವಿಧಿಯೆಂದ್ಹೊರಳಿದಳು 174 ಅಳುವುದೇತಕೆ ತಾಯೆ ನೀನು ಕಲ್ಮಾಡು ನಿನ್ನ ದೇಹವನು 175 ಹೇಳಿದನೇಕಾಂತದಲಿ ಉದಯಕೆ ಬನ್ನಿರೆಂದ 176 ಕರೆಸಿದನಾಗ ಕಿಂಕರರ ಪ್ರಧಾನಿಯು ತರಿಸಿದನೊಜ್ರದಂದಣವ ಬನ್ನಿರಿ ಶೀಘ್ರದಿಂದ 177 ಮಾಡಿರಿಮನಕೆ ಬಂದುದನು ನಾನಿಡುವೆ ರಾಯನ ಮುಂದೆ 178 ಮೇಲೆ ಪನ್ನಂಗ ಕವಿದವು ಶೀಘ್ರದಿ ಪೊತ್ತು ನಡೆದರು 179 ಬಸವಳಿದಳು ಶ್ರೀ ಹರಿಯ ಸ್ತುತಿಸುತಿರ್ದಳೆ ತನ್ನ ಮನದಿ 180 ಕಾಲನ ವಶಕೆÉ ಒಪ್ಪಿಸದೆ ಪಾದಾರವಿಂದೊಳಿರಿಸು 181 ಭಾರವನ್ಹೊತ್ತು ಬಳಲಿ ಬಾಯಾರುತ್ತ ಏರುತ್ತ ಘಟ್ಟ ಬೆಟ್ಟಗಳ ಬಾಲೆಯ ತಂದಿಳುಹಿದರು 182 ಬಾ ಬಳಲಿದೆಯೆನುತ ರಂಭೆಯನುಪಚರಿಸಿದರು 183 ತೊಪ್ಪಲ ಮೇಲ್ಹರಹಿದರು ಕತ್ತಿಗೆ ಮಯ್ಯನಿಕ್ಕಿದಳು 184 ಕಂಬುಚಕ್ರಧಾರಿ ವೈಕುಂಠವಾಸಗೆ ವಂದಿಸಿದಳು ತನ್ನ ಮನದಿ ಸ್ತುತಿಯ ಮಾಡಿದಳು 185 ಅರಣ್ಯದಲ್ಲಿ ತನ್ನ ನೆನೆವ ಕುಮಾರಿಗೆ ಕಾರುಣ್ಯದಿಂದೊದಗಿದನು ನಿದ್ರೆ ಕವಿದವು 186 ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಭಕ್ತರಿಗೊಜ್ರಪಂಜರನೆ ದೂತರ ಮನವ 187 ಯೋಚಿಸಿ ತಮ್ಮ ಮನದಿ ಪಾತಕ ಎತ್ತಿದಾಯುಧವನಿಳುಹಿದರು 188 ಒಬ್ಬರೊಬ್ಬರು ಮಾತನಾಡಿ ಉರ್ವೀಶಗೊಯ್ದು ಒಪ್ಪಿಸುವ 189 ವಾರಿಜಗಂಧಿಯ ಬಿಟ್ಟು ರಾಯಗೆ ಗುರುತ ತೋರಿದರು 190 ತಪ್ಪದೆ ರಾಯನೋಲಗಕೆ ಚಿತ್ತೈಸು ಜೀಯವಧಾನ 191 ತಂದೆವು ಮುದ್ರೆಯುಂಗುರವ ಮನದಲಿ ಮರುಗಿದನು 192 ಅಂಜೂರ ಕೊಯ್ದು ಕೊಟ್ಟಂತೆ ಬೆಂದೊಡಲನೆಂತು ಪೊರೆಯಲಿ 193 ಕೆಂಡದೊಳಾಜ್ಯ ಬಿದ್ದಂತೆ ಬೆಂದರು ಶೋಕಾಗ್ನಿಯಿಂದ 194 ಮೇಲೆ ಸ್ನೇಹದಲಿ ತಲೆಯೆತ್ತಿದವಬ್ಜ ಬಂಧುಗಳು 195 ಹಸಿದ ಹೆಬ್ಬುಲಿಗೆ 196 ಬೆದರುವಳು ವ್ಯಾಘ್ರದಟ್ಟುಳಿಗೆ ಮರಳಿ ಧೈರ್ಯವನೆ ಮಾಡುವಳು 197 ಮಾಯಪಾಶಕೆ ಗುರಿಮಾಡಿ ಮುಕ್ತಿ ಸಾಧನವು 198
--------------
ಹೆಳವನಕಟ್ಟೆ ಗಿರಿಯಮ್ಮ
ಮಡಿಲು ತುಂಬಿದರಮ್ಮ ಮುತ್ತೈದೆಯರೆಲ್ಲ ಕಡಲಕುಮಾರಿಗೆ ಸಡಗರದಿಂದ ಪ ಅರಿಶಿನ ಕುಂಕುಮ ಸುಗಂಧಸೇವಂತಿಗೆ ಪರಿಮಳ ಪಾದರಿ ಮಲ್ಲಿಗೆ ಮುಡಿಸಿ 1 ರಸಬಾಳೆ ಖರ್ಜೂರ ಖರ್ಬೂಜ ದಾಳಿಂಬೆಯ ಕಸಿಮಾವು ಸೇವು ಅಂಜೂರ ದ್ರಾಕ್ಷಿ 2 ಕೊಡಗಿನ ಕಿತ್ತಳೆ ದೃಢತರ ಸಿಹಿನಿಂಬೆ ಕಡುಸವಿ ಗಂಗಪಾಣಿ ಕಪಿತ್ಥಗಳನು 3 ಅಡಿಕೆ ಬೆಳ್ಳೆಲೆ ದ್ರಾಕ್ಷಿ ಗೋಡಂಬಿ ಸಕ್ಕರೆ ಒಡನೆ ಕೊಬರಿ ನಾರಿಕೇಳ ಬೆಲ್ಲದಚ್ಚು 4 ಮುತ್ತುರತ್ನ ಮಾಣಿಕ್ಯ ಅಪರಂಜಿಯ ಸ್ವರ್ಣ ವಿತ್ತ ಮುದ್ರೆಯ ಹಣ ಬಾದಾಮಿಬೆರಸಿ 5 ಬೆಳ್ಳಿ ತಟ್ಟೇಲಿ ಪಂಚವಾಳ ಪನ್ನೀರುದಾನಿ ಒಳ್ಳೆ ಗಂಧವು ಮಂಗಳ ದ್ರವ್ಯವಿಟ್ಟು6 ಜರತಾರಿ ಸೀರೆ ಕಾಪುಕುಪ್ಪಸ ಕೊಟ್ಟು ಹರುಷದಿ ಹರಸುತ್ತ ಅಕ್ಷತೆ ಸೂಸಿ 7 ಜಾಜಿಕೇಶವ ಸಹ ಮೂಜಗವಾಳೆ ರಾಜಿಪ ಮಕ್ಕಳೊಡೆ ನಿತ್ಯಸುಖಿಯಾಗು 8
--------------
ಶಾಮಶರ್ಮರು
ವಿಶೇಷ ಆ ಹಣ್ಣು ಈ ಹಣ್ಣು ನೆನಸಿ ಫಲವೇನೆ ಈ ಹುಣಸೇಹಣ್ಣಿಗೆ ಸಮಬಾಹೋದೇನೆ ಪ ಹಡಗಿಂದ ಬಂದಿತು ಉತ್ತತ್ತಿ ಹಣ್ಣು ಬಡವರಿಗೆ ಬೇಕಾದ ಬಾಳೆಯ ಹಣ್ಣು ಕೂತರೆ ಏಳದು ಕುಂಬಳದ್ದಲ್ಲ ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 1 ಮಕ್ಕಳು ಬಯಸುವ ಚಕ್ಕೋತ ಹಣ್ಣು ಸಕ್ಕರೆ ಸವಿಯಾದ ಅನಾಸಿನ ಹಣ್ಣು ರುಚಿ ಹಲಸಿನ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 2 ದಾಹವಡಗಿಸುವದು ದ್ರಾಕ್ಷಿಯ ಹಣ್ಣು ದೊರೆಗಳು ತಿನ್ನುವ ದಾಳಿಂಬೆ ಹಣ್ಣು ಫರಂಗಿಯರು ತಿನ್ನುವ ಪನ್ನೇರಳೆ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 3 ಅತಿಮಧುರವಾದ ಕಿತ್ತಲೆ ಹಣ್ಣು ಯತಿಗಳಿಗಾನಂದ ಸೀತಾಫಲದ್ಹಣ್ಣು ಅತಿರುಚಿಯಾದ ಅಂಜೂರದ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 4 ಮಾನವಂತರು ತಿನ್ನುವ ಮಾವಿನ ಹಣ್ಣು ಜ್ಞಾನಿಗಳಿಗೆ ರಾಮನಾಮದ ಹಣ್ಣು ದೀನಜನರು ತಿಂಬ ಮೂಸುಂಬೆ ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 5 ಅಪರೂಪದಲಿ ಬೆಳೆದ ಮಾದಳದ್ಹಣ್ಣು ಕಪಿಗಳು ತಿನ್ನುವ ಸೀಬೆಯ ಹಣ್ಣು ತಪಸ್ವಿಗಳಾಹಾರ ಜಂಬುನೇರಳೆಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 6 ಪರಿ ಔಪಧಕೆ ಹೆರಳೆಯ ಹಣ್ಣು ಮರ್ಯಾದೆಗೆ ಕೊಡುವ ನಿಂಬೆಯ ಹಣ್ಣು ಪರಮ ರೂಪಿಯಾದ ಕರಬೂಜದ್ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 7 ಬಡವರಿಗೂ ಈ ಹುಣಸೇ ಹಣ್ಣಿರಬೇಕು ಬಲ್ಲಿದರಿಗೂ ಹುಣಸೇ ಹಣ್ಣಿರಬೇಕು ರುಚಿ ಎಲ್ಲ ಜನರುಗಳು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 8 ಹುಣಸೇಹಣ್ಣಿಲ್ಲದೆ ಭಾಂಡ ಶುದ್ಧಿಗಳಿಲ್ಲ ಹುಣಸೇ ಇಲ್ಲದೆ ಸ್ವಯಂಪಾಕ ರುಚಿಯು ಇಲ್ಲ ಹುಣಸೇ ಮರಕ್ಕಿಂತ ಗಟ್ಟಿ ಮರಗಳಿಲ್ಲ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 9 ಹುಣಸೇಕಾಯಿಯ ಕುಟ್ಟಿ ರಸವ ಮಾಡುವರು ಹುಣಸೇಹಣ್ಣನು ಕುಟ್ಟಿ ಅಣಿಮಾಡಿಡುವರು ಹುಣಸೇಹಣ್ಣಿನ ಬೆಲೆ ಮುಗಿಲಿಗೇರಿರಲು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 10 ಹರಿಯ ಅಪ್ಪಣೆಯಂತೆ ಹುಣಸೆಯ ಮರಹುಟ್ಟಿ ಪರರಿಗೆ ಉಪಕÀರಿಸುವದಿದು ಹರಿಯಾಜ್ಞೆ ವರದ ಶ್ರೀ ಹರಿ ಕಮಲನಾಭ ವಿಠ್ಠಲನಿಚ್ಛೆ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 11
--------------
ನಿಡಗುರುಕಿ ಜೀವೂಬಾಯಿ