ನಿನಗೆ ಅಂಜುವಳಲ್ಲೋ ಮುರಾರೆ ಮಧುರಿಪು ಪ
ಮಲ್ಲರ ಗೆಲಿದಿಹ ಗೊಲ್ಲ ಗೋಪಾಲ ಬಾ ಪರಿಪಾಲಿಸು ಅ.ಪ.
ಮಾನವ ಮಡುಹಿದ ಮಲ್ಲನ ಕಂಡು ಅಂಜುವಳೆ ರಂಗ ನಾ ಅಂಜುವಳೇ 1
ಥಂಡ ಥಂಡದಾ ಬಲು ಭಂಡ ಮಾತಾಡುವ ಪುಂಡನಿಗೆ ನಾ ಅಂಜುವಳೇ ಪುಂಡ ಜರಾಸಂಧನಿಗಂಜಿ ನಗೇಂದ್ರನ ಭಂಡಿ ಪೊಡೆದ ಈ ಭಂಡನಿಗೇ ರಂಗಾ ನಾ ಅಂಜುವೆನೇ 2
ಹಿಂಡು ಜೀವರಾ ನಾ ಅಂಬುಜದೊಳಿಟ್ಟು ಸಲಹುವತೊಂಬನಿಗೆ ನಾ ಅಂಜುವಳೇ ಪುಂಡ ಖಳರ ಚಂಡಾಡುವತಂದೆವರದಗೋಪಾಲವಿಠ್ಠಲ ರಂಗಾ 3