ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯುದೇವರು ಅಂಜುವೆನು ನಿನಗಂಜನೆಯ ತನಯಪ್ರಭಂಜನನ ಸುತ ಅಂಜುವೆನು ಪ ಚಾರು ಮುದ್ರೆಯನುತೋರಿ ಲಂಕೆಯ ಸೂರೆ ಮಾಡಿದೆ ಘೋರರಾಕ್ಷಸರ್ಘಾತಗೊಳಿಸಿದಿ 1 ಭೂರಿ ಸೇವಿಸಿದೆನಾರಿ ಕಾಡಿದ ಕ್ರೂರರಡಹನು ಹಾರ ಮಾಡಿದಿ ಶೂರ ಭೀಮನೆ 2 ನಂದ ತೀರ್ಥನೆ ಬಂದು ದುರ್ಜನದುಂದು ನಿಲ್ಲಿಸುತಾಇಂದಿರೇಶ ವಿದೇಂದ್ರದೈವತ ವಂದ್ಯನೆಂದು ನಿಬಂಧ ಮಾಡಿದಿ 3
--------------
ಇಂದಿರೇಶರು
ಸೀಸಪದ್ಯ ಪ್ರಳಯ ರುದ್ರನ ಕೋಪಕ್ಕೆಮ್ಮಡಿಯ ಕೋಪದಿಂ ದ ಲಘು ಶಾಪವ ಮುನಿಯು ಕೊಟ್ಟರಂಜೆ ಕಡುಕಷ್ಟ ಕೋಟಲೆಯು ದುಃಖ ದಾರಿದ್ರಗಳು ಒಡನೊಡನೆ ಬಂದೊದಗೆ ನಡುಗೆ ನಾನು ಶರಭ ವೃಶ್ಚಿಕ ಸರ್ಪ ಮೊದಲಾದ ಬಲು ಕ್ರೂರ ಪ್ರಾಣಿಗಳ ಬಾಧೆಗಂಜೆ ಅಸಿಧಾರೆಗಂಜೆ ಇನ್ನಸು ಪೋಗುವುದಕಂಜೆ ವಸುಧೀಶರಾಗ್ರಹಕೆ ಲವಲೇಶವಂಜೆ ಉರಿಗಂಜೆ ಸೆರೆಗಂಜೆ ಹರಣದ ಭಯಕಂಜೆ ಕರಿಗಿರೀಶನ ಕರುಣವೊಂದಿರಲು ಎನಗೆ ಒರೆದ ವಚನಕೆ ಅನೃತ ಸಂಘಟಿಸಲದಕೆ ನೆರೆ ಅಂಜುವೆನು ನಾನು ಇನ್ನೊಂದಕಂಜೆ
--------------
ವರಾವಾಣಿರಾಮರಾಯದಾಸರು