ಅಂಜಿಸೋದ್ಯಾತಕಯ್ಯಾ ಬ್ರಹ್ಮಣ್ಯ ಗುರು ಪ
ಅಂಜಿಸೊದ್ಯಾಕಘ ಭಂಜಕನೆನಿಸಿ ನೀ
ಕಂಜನಾಭನ ಭಕ್ತಿ ಪಂಜರದೊಳಿಡದೇ ಅ.ಪ
ಹೊಂದÀದೀ ನರಜನ್ಮವ ಇಂದಿರೇಶನು ಎಲ್ಲ
ಹೊಂದೀ ಹೊದರಿಯದ ಮಂದಮತಿಯನು 1
ಬಿಂಬ ಮೂಡಲು ಪ್ರತಿಬಿಂಬ ಮಾಡುವುದೆಂದು
ಶಂಬರಾರಿಯ ಪಿತನ ನಂಬದ ಢಂಬಿಯೊಳಂ
ಜಿಸೋದ್ಯಾತಕಯ್ಯಾ2
ಶ್ರೀ ನರಹರಿಪಾದ ಧ್ಯಾನವ ಮಾಡದೆ
ಬುದ್ಧಿ ಹೀನನಾದವಗೆ ಸುಜ್ಞಾನ ಕೊಡದೆ ಸುಮ್ಮನಂ
ಜಿಸೋದ್ಯಾತಕಯ್ಯಾ 3