ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋರಿ ಬಂದೆನೊ ನಾನು ಪತಿ ನಿನ್ನ ಪ ಘೋರ ಸಂಸಾರದಿಂದ ಪಾರು ಮಾಡುವಿಯೆಂದು ಅ.ಪ. ಸರ್ವ ಪ್ರಾಣಿಗಳಲ್ಲಿ ಸರ್ವವಸ್ತುಗಳಲ್ಲಿ ಸರ್ವೇಶ ಹರಿಯ ಕೂಡಿ ಸರ್ವದಾ ಇರುವೆಯೆಂದು 1 ಅಂಜಾನೆ ಗರ್ಭದಿ ಸಂಜಾನಿತ ನೀನಾಗಿ ಕಂಜನಾಭನ ಮನ- ರಂಜಾನೆ ಮಾಡಿದೆಯೆಂದು 2 ದಾನವಾಂತಕನಿಂದ ಸ- ನ್ಮಾನಿತನಾದಂಥ ದೀನರಕ್ಷಕ ಭೀಮ- ಸೇನ ವಿಕ್ರಮನೆಂದು 3 ಹೀನಬುದ್ಧಿಯ ಬಿಡಿಸಿ ದೀನ ಸುಜನರಿಗೆ ಜ್ಞಾನ ಮಾರ್ಗವ ತೋರಿ- ದಾನಂದತೀರ್ಥನೆಂದು 4 ಶ್ರೀ ರಂಗೇಶವಿಠಲಗೆ ಸಮ ರ್ಯಾರಿಲ್ಲವೆಂತೆಂದು ಈರೇಳು ಜಗದೊಳು ಸಾರುತಿರುವೆಯೆಂದು 5
--------------
ರಂಗೇಶವಿಠಲದಾಸರು
ಕೋಲು ಕೋಲೆನ್ನ ಕೋಲೆ ಪ ಅಂಜಾನೆ ಗಿರಿಯಲ್ಲಿ | ಸಂಜೀವರಾಯ ಸಹ ಕಂಜನಾಭನಿರುವ | ಅಂಜಿಕ್ಯಾತಕಮ್ಮ 1 ಮೂಡಲು ಗಿರಿವಾಸ | ನಾಡಿಗೊಡೆಯನೆಂದು ಪಾಡುವವರ ದೋಷ | ಓಡಿಸುವನಮ್ಮ 2 ವೆಂಕಟರಮಣನು | ಕಿಂಕರ ಜನಗಳ ಸಂಕಟಗಳ ಕಳೆವ | ಶಂಕೆ ಇಲ್ಲವಮ್ಮ 3 ಈಶ ಶ್ರೀನಿವಾಸ | ದಾಸ ಜನರ ಪೋಷ ರಾಶಿ ದೋಷ ಸುಟ್ಟು | ಲೇಸುಗೈವನಮ್ಮ 4 ಮತ್ಸ್ಯ ಮೂರುತಿ ತ | ನ್ನಿಚ್ಛೆಯಿಂದಲಿ ಬಲು ತುಚ್ಛ ದೈತ್ಯನನು | ಕೊಚ್ಚಿ ಬಿಸುಟನಮ್ಮ 5 ಅಮಿತ ಭಾರ ಪೊತ್ತು ಸುಮನಸರಿಗಮೃತ | ಮಮತೆಲಿತ್ತನಮ್ಮ 6 ಕ್ರೋಡಾಕಾರನಾಗಿ | ರೂಢಿಚೋರನಾದ ಹೇಡಿ ರಕ್ಕಸನ | ತೀಡಿ ಕೊಂದನಮ್ಮ 7 ಘೋರ ರೂಪ ಕೊಂಡು | ಕ್ರೂರ ರಕ್ಕಸನ ದೋರೆ ಕರುಳಕಿತ್ತು | ಪೋರನ ಪೊರೆದನಮ್ಮ 8 ಪುಟ್ಟ ಪೋರನಾಗಿ | ಬೆಟ್ಟದಂತೆ ಬೆಳೆದು ದಿಟ್ಟ ಬಲಿಯ ಶಿರವ | ಮೆಟ್ಟಿ ತುಳಿದನಮ್ಮ 9 ತಾತನ ನುಡಿ ಕೇಳಿ | ಕಾತರನಾಗದೆ ಮಾತೆಯ ಶಿರವನ್ನು | ತಾ ತರಿದಿಟ್ಟನಮ್ಮ 10 ಸೀತೆಯ ಬಿಡಿಸಲು | ಸೇತುವೆಯನು ಕಟ್ಟಿ ಭೂತನನ್ನು ಕೊಂದು | ಖ್ಯಾತಿಗೊಂಡನಮ್ಮ 11 ದ್ವಾರಕಪತಿ ತಾನು | ನಾರಿ ಪಾಂಚಾಲೆಯು ಕೋರಿದ ಕ್ಷಣದಲ್ಲಿ | ಸೀರೆಯ ನೇದನಮ್ಮ 12 ಚಿತ್ತಜನಯ್ಯನು | ಅತ್ತಿತ್ತ ಅಲೆಯುತ ಬೆತ್ತಲೆ ನಾರಿಯರ | ಮುತ್ತುಗೊಂಡನಮ್ಮ 13 ಜಲಜನಾಭನು ತಾ | ಕಲಿಗಾಲ ಕಡೆಯಲ್ಲಿ ಹಲವು ಪಾಪಿಗಳನು | ಫಲದಿ ಕೊಂದನಮ್ಮ 14 ಮುಟ್ಟಿ ಭಜಿಸುವರಿಗೆ | ಇಷ್ಟವಾದ ವರವಕೊಟ್ಟನು ರಂಗೇಶ | ವಿಠಲ ಕೇಳಮ್ಮ 15
--------------
ರಂಗೇಶವಿಠಲದಾಸರು
ಅಂಜಾನೆತನಯಧ | ನಂಜಾಯನಗ್ರಜ ||ಕಂಜಾಕ್ಷ ಶ್ರೀ ಮಧ್ವ | ಸಂಜಯವಂತಾ 1ಮಾರುತಿ ನಿನ್ನಯ | ಕೀರುತಿ ಜಗದೊಳು ||ಬೀರುತಿದ ಕೊ ನಾ | ಸಾರುತೀ ನೀಗಾ 2ರಾವಣಾನುಜ ಸು | ಗ್ರೀವಾ ವಿಪ್ರಜಾನಂತೆ ||ಭೂವರನಂತೆ ಕಾಯೋ | ದೇವೇಂದ್ರ ಪಾಲಾ3ಪ್ರಸ್ತುತಬಿನ್ನಪ| ವಿಸ್ತರಿಪಕೃತಿಸ ||ಮಸ್ತರೂ ಕೇಳಲಿ | ಆಸ್ಥೀಯಲಿಂದಾ4ಪ್ರಾಣೇಶ ವಿಠ್ಠಲಾ ಪ್ರೀ | ತಾನಾಗಬೇಕೀದಕೆ ||ಹೀನ ವಿಷಯಗಳಾ | ನಾನೊಲ್ಲೆ ದೇವ 5
--------------
ಪ್ರಾಣೇಶದಾಸರು