ಒಟ್ಟು 7 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜಬ್ಯಾಡ ಬ್ಯಾಡೆಲೆ ಜಾಣಿ ಭವಭಂಜನ ಬಲರಾಮನ ಅಣಿ ಪ. ಕುಂಜರಗಮನೆ ಕಮಲಾಕ್ಷಿಕುಂಜರಗಮನೆ ಕಮಲಾಕ್ಷಿ ದ್ರೌಪದಿಅಂಜಬ್ಯಾಡ ಅಭಯಕೊಡತೇವ1 ಭಯವುಳ್ಳ ಬಾಲೆ ನೀ ಐವರಿಗೆ ಇಂತಿಪ್ಪೆಸೈವಲ್ಲದ ಮಾತು ಜಗಕಿದುಸೈವಲ್ಲದ ಮಾತು ಜಗಕಿದು ಈ ನಡೆತೆನಯವಲ್ಲವೆಂದು ನಗುತಾರೆ2 ಲೋಕದೊಳೊಬ್ಬಳಿಗೆ ಏಕಪತಿಯುಂಟುಏಕಕಾಲದೆ ಐವರ ಏಕಕಾಲದಲೆ ಐವರನ ಕೂಡೋದುನಾ ಕಾಣಿನೆಲ್ಲೂ ಕೌತುಕವ3 ಕೆಂಡವ ತುಂಬಿದ ಕುಂಡದಿ ಪುಟ್ಟಿದಿಕಂಡ ಜನಕೆಲ್ಲ ಭಯವಾದಿಕಂಡ ಜನಕೆಲ್ಲ ಭಯವಾದಿ ಭೀಮಸೇನನಿನ್ನ ಗಂಡ ಎಂಥ ಎದೆಗಾರ4 ಎಲ್ಲ ನಾರಿಯರೊಬ್ಬ ನಲ್ಲನಬೆರಿಯೆಬಲ್ಲಿದ ಭೂಪ ರೈವರುಬಲ್ಲಿದ ಭೂಪರೈವರ ನೊಲಿಸಿದಿಎಲ್ಲರಂತಲ್ಲ ಬಲುಧೀರೆ 5 ಪಲ್ಯಾದ ತುದಿಯಿಂದ ಎಲ್ಲ ಪದಾರ್ಥಮಾಡಿಬಲ್ಲಿದ ಮುನಿಗೆ ಉಣಿಸಿದಿಬಲ್ಲಿದ ಮುನಿಗೆ ಉಣಿಸಿದಿ ಇಂದ್ರÀಜಾಲಬಲ್ಲವಳಿಗಿಂಥ ಭಯವುಂಟೆ6 ಕೇಳ ದ್ರೌಪತಿ ರಾಜ್ಯವಾಳೊಗಂಡನ ಕೈಲೆಲಾಳಿ ತಕ್ಕೊಂಡ ಪರಿಯಂತೆಲಾಳಿ ತಕ್ಕೊಂಡ ಪರಿಯಂತೆ ಈ ನಡತೆಕೇಳಿದವರೆಲ್ಲ ನಗುತಾರೆ 7 ಅತ್ತೆಯ ಮಗ ನಿನ್ನ ಅತ್ಯಂತ ನಗೆನೋಡಿತಪ್ತವಾಗೊಮ್ಮೆ ತಿರುಗಿದತಪ್ತವಾಗೊಮ್ಮೆ ತಿರುಗಿದ ದ್ರೌಪತಿಮತ್ತಾರೆ ಬುದ್ಧಿ ಬರಲಿಲ್ಲ8 ಅರಸನ ಮಡದಿ ಒಬ್ಬ ಅರಸನ ಮನೆಯಲ್ಲಿನಿರುತ ದಾಸಿಯೆಂದು ಇರುತಲೆನಿರುತ ದಾಸಿಯೆಂದು ಇರುತಲೆ ಸೇವಿಸೋದುಈ ಸರಸ ರಮೇಶಗೆ ಹರುಷೇನ9
--------------
ಗಲಗಲಿಅವ್ವನವರು
ಅಂಜಬ್ಯಾಡಂಜಬ್ಯಾಡವೋ ಭೂನಂದಸೂನು ಪ ಅಂಜಬ್ಯಾಡಂಜಬ್ಯಾಡ ಕರುಣನಿಧಿಯೆಸಂಜೆ ಮುಂಜಾನಿಲ್ಲೆ ಬಾರೋ ಮಂಜುಳಾದ ಕಥೆಯ ಪೇಳ್ವೆ ಅ.ಪ. ಪಾಂಡುತನಯನಂತೆ ನಿನ್ನ ಭಂಡಿ ಬಾಹು ಕನ್ನೆಮಾಡಿಕಂಡ ಕಂಡ ಕಾರ್ಯದಲ್ಲೆ ದಂಡಿಸುವುದು ಎನ್ನೊಳಿಲ್ಲ 1 ಗೋಪಿಯಂತೆ ಸೊಂಟದಲ್ಲೆ ತ್ಯಾಪಿ ಹಗ್ಗಗಳನೆ ಕಟ್ಟಿಶ್ರೀಪತಿಯ ಒರಳಿಗ್ಹಾಕಿ ಆಪರಿಂದ ಕಟ್ಟೋಣಿಲ್ಲ2 ಜಾರ ಚೋರನಂತೆ ನಿನ್ನ ನಾರೇರಂತೆ ವ್ಯಾಸಮುನಿಯಮಾರಿಗ್ಹಾಕಿ ವಾರ್ತೆಯನ್ನು ದೂರೋಣಿಲ್ಲ ಜಗದಿ ಸ್ವಾಮಿ 3 ಮಂದಗಮನೆ ಮೋಹಕಾಗಿ ಚಂದ್ರಮೌಳಿಯಂತೆ ಬೆಣ್ಣೆಹಿಂದೆ ಮುಂದೆ ಓಡಿಸಿಂದು ದಣಿಸೋಣಿಲ್ಲ ಶ್ರೀಶಕೃಷ್ಣ 4 ಇಂದಿರೇಶ ಎನ್ನ ಹೃದಯ ಮಂದಿರದೊಳಿಟ್ಟುಕೊಂಡುಚಂದ ಚಂದ ಕಥೆಯ ಪೇಳ್ವೆ ನಂದತನಯ ನೊಂದಿಸುವೆನು 5
--------------
ಇಂದಿರೇಶರು
ಆತ್ಮನಿವೇದನೆ ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ ಭಂಜನ ಹರಿ ಶರಣರ ಕಾವಾ ಪ ಮಾತ ಹೇಳುವೆ ನಿನಗೊಂದ ಪರರಜ್ಯೋತಿ ಕಾಣುವತನಕೀ ಬಂಧ ಭೂತ ಭೇತಾಳಗಳಿಂದ ನಿನಗೆ ಭೀತಿ ಪುಟ್ಟಲಿಲ್ಲೋ ಮತಿಮಂದ 1 ಛೇದ ಭೇದಗಳು ನಿನಗೆಲ್ಲಿ ನೀ ಅ- ನಾದಿ ನಿತ್ಯವೆಂಬುದ ಬಲ್ಲಿ ವೇದ ಬಾಹ್ಯರಾಗದೆ ಇಲ್ಲಿ ಹರಿ ಪಾದ ಇನ್ಯಾಕೆ ಪೂಜಿಸಲೊಲ್ಲಿ 2 ನೀನು ನಿನ್ನದು ಅಲ್ಲವೋ ನೋಡಾ ದೇಹ ನಾನು ನನ್ನದೆಂಬರೋ ಮೂಢಾ ಮಾನಹಾನಿ ಮಾಡಿಕೊಳಬೇಡ ಬಿಡು ಸಾನುಬಂಧಿಗಳ ಸ್ನೇಹವ ಗಾಢ 3 ಅಹಿತಾದಿ ವಿಭೂತಿಯ ನೋಡೋ ಸೋಹಂ ಎಂಬರೆ ವಿಘಾತಿಯ ನೇಹವ ಪಡೆವರೆ ಗೀತೆಯ ಕೇಳಿ ಮೋಹವ ಕಳಕೋ ವಿಜಾತಿಯ 4 ಮಧ್ವವಲ್ಲಭ ಮಾಡಿದ ಗ್ರಂಥ ದೊಳಗದ್ವೈತತ್ರಯ ತಿಳಿದಂಥ ವಿದ್ವಾಂಸರು ಚರಿಸುವ ಪಂಥವನ್ನು ಸದ್ಭಕ್ತಿಲಿ ಸಾಧಿಸು ಭ್ರಾಂತ 5 ಜಾಗರ ಸ್ವಪ್ನ ಸುಷುಪ್ತಿಗಳೊಳು ವರ ಭೋಗಿಶಯನನ ರೂಪಗಳೇಳು ಭಾಗವತ ಬಲ್ಲವರ ಕೇಳು ಬೃಹ- ದ್ಯಾಗವ ಹರಿಗರ್ಪಿಸಿ ಬಾಳು 6 ಪಂಚಾತುಮ ಸಿಲುಕವ ಷಟ್ ಪಂಚ ಪಂಚಿಕೆಗಳ ಕರ್ಮವ ಮೀಟಿ ಪಂಚಿಕೆ ತಿಳಿದುಕೊಂಡರೆ ನಿಷ್ಪ್ರ ಪಂಚನಾಗಿ ನೀ ಕಡೆದಾಟಿ7 ಜ್ಞಾನೇಚ್ಛಾ ಕ್ರಿಯಾ ಶಕ್ತಿಗಳೆಂಬ ಈ ಮ- ಹಾನುಭಾವದಿ ನಿನ್ನ ಬಿಂಬ ತಾನೇ ಸರ್ವತ್ರದಲಿ ಕಾಂಬ ಇದ- ಕೇನು ಸಂದೇಹವಿಲ್ಲವೋ ಶುಂಭ 8 ತಾಪತ್ರಯಂಗಳು ನಿನಗೆಲ್ಲಿ ಪುಣ್ಯ ಪಾಪಕ್ಕೆ ಲೇಪನಾಗೋಕೆ ಹೊಲ್ಲ ಪ್ರಾಪಕ ಸ್ಥಾಪಕ ಹರಿಯೆಲ್ಲ ಜಗ ದ್ವ್ಯಾಪಕನೆಂದರಿತರೆ ಕೊಲ್ಲ 9 ಡಿಂಭದೊಳಗೆ ಚೇತನವಿಟ್ಟು ಜಗ- ದಂಬಾರಮಣ ಮಾಡಿದ ಕಟ್ಟು ಉಂಬುಡುವ ಕ್ರಿಯೆಗಳನಷ್ಟು ನಿನ್ನ ಬಿಂಬನಾಧೀನನಾದರೆ ಇಷ್ಟ 10 ಲಕ್ಕುಮಿ ಅವನ ಪಟ್ಟದ ರಾಣಿ ದೇ- ವರ್ಕಳು ಪರಿಚಾರಕ ಶ್ರೇಣಿ ವಕ್ಕಲು ನಾವೆಲ್ಲರು ಪ್ರಾಣಿ ದಶ- ದಿಕ್ಕುನಾಳುವ ನಮ್ಮ ದೊರೆಯ ನೀ 11 ಮತ್ರ್ಯಲೋಕದ ಸಂಪದ ಪೊಳ್ಳು ಜಗ ಮಿಥ್ಯಮತವೆಂದಿಗು ಜೊಳ್ಳು ಶ್ರುತ್ಯನ್ನರ್ಥ ಪೇಳ್ವದೇ ಸುಳ್ಳು ನೀ ಭೃತ್ಯನು ಕರ್ತನಾಗದಿರೆಲೋ ಕೇಳು12 ಮಾಧವನಲಿ ತನುಮನ ಮೆಚ್ಚು ಕ್ರೋಧರೂಪದ ಕಲಿಮಲ ಕೊಚ್ಚು ಮೋದತೀರ್ಥರ ವಚನವ ಮೆಚ್ಚು ವಾದಿ ಮತಕ್ಕೆ ಬೆಂಕಿಯ ಹಚ್ಚು 13 ಸವಿವುಳ್ಳರೆ ಕೇಳೆನ್ನಯ ಸೊಲ್ಲ ನಮ್ಮ ಪವನನಯ್ಯನ ಪ್ರೇರಣೆಯಿಲ್ಲ ಎವೆಯಿಕ್ಕಲರಿಯದೀ ಜಗವೆಲ್ಲ ಎಂದು ಶಿವ ತನ್ನ ಸತಿಗೆ ಹೇಳಿದನಲ್ಲ 14 ಧ್ರುವ ಬಲ್ಯಾದಿ ರಾಯರ ನೋಡು ನಿನ್ನ ಅವಗುಣಗಳನೆಲ್ಲಾ ಈಡ್ಯಾಡೋ ಅವಶ್ಯವಾಗಿ ಕರ್ಮವ ಮಾಡೋ ಮಾ- ಧವ ನಿನ್ನವನೆಂದು ನಲಿದಾಡೋ 15 ನಿಂದಾ ಸ್ತುತಿಗಳ ತಾಳಿಕೋ ಬಲು ಸಂದೇಹ ಬಂದಲ್ಲಿ ಕೇಳಿಕೋ ಬಂದವರಿಂದಲಿ ಬಾಳಿಕೋ ಗೋ- ವಿಂದ ನಿನ್ನವನೆಂದು ಹೇಳಿಕೋ 16 ತತ್ವವಿಚಾರವ ಮಾಡಿಕೋ ನಿನ್ನ ಭಕ್ತಿಯ ಆಳವ ಅಳಿದುಕೋ ಮಾಯಾ ಮೋಹ ಕಳೆದುಕೋ ನಿನ್ನ ಹತ್ತಿರ ಹರಿಯಿರುವ ನೋಡಿಕೋ 17 ಹಿಂಡು ದೈವಗಳಿಂದ್ಹಿರಿಯನೀತ ತನ್ನ ತೊಂಡನೆಂದದವರಿಗೆ ತಾ ಸೋತಾ ದಂಡಿಸಿ ದಯಮಾಡುವ ದಾತಾ ಭೂ- ಮಂಡಲದೊಳಗೆಲ್ಲ ಪ್ರಣ್ಯತಾ 18 ನಾಡ ಖೋಡಿ ದೈವಗಳಂತೆ ತನ್ನ ಬೇಡಲು ತಾ ಬೇಡಿಕೊಳನಂತೆ ನೀಡುವ ನಿಖಿಳಾರ್ಥವದಂತೆ ನಿಜ ನೋಡಿಕೋ ನಿನಗ್ಯಾತರ ಚಿಂತೆ 19 ಏನು ಕೊಟ್ಟರೆ ಕೈಚಾಚುವ ತನ್ನಾ- ಧೀನವೆಂದರೆ ನಸುನಾಚುವಾ ದಾನವ ಕೊಡಲೂರಿ ಗೀಚುವ ತನ್ನಲಿ ತಾನೇವೇ ಮನದೊಳು ಸೂಚುವ20 ಕರಕರದಲ್ಲಿ ತಾ ಬರುವಾನು ಮರತುಬಿಟ್ಟವರ ತಾ ಮರೆಯಾನು ನಿಜ ಶರಣರ ಕಾದುಕೊಂಡಿರುವಾನು ತನ್ನ ಸರಿಯಂದವರ ಹಲ್ಲು ಮುರಿದಾನು 21 ಆರು ಮುನಿದು ಮಾಡುವದೇನು ಪ್ರೇರ್ಯ ಪ್ರೇರಕರೊಳಗಿದ್ದು ಹರಿ ತಾನು ಓರಂತೆ ಕಾರ್ಯವ ನಡೆಸೋನು ಮುಖ್ಯ ಕಾರಣ ಶ್ರೀಹರಿ ಅಲ್ಲವೇನೋ 22 ಹಲವು ಹಂಬಲಿಸಲ್ಯಾತಕೆ ಹುಚ್ಚಾ ವಿದ್ಯಾ ಕುಲಶೀಲಧನದಿಂದ ಹರಿ ಮೆಚ್ಚಾ ಕಲಿಯುಗದೊಳಗಾರ್ಯರ ಪೆಚ್ಚಾ ತಿಳಿ ಸುಲಭೋಪಾಯಾದಿಗಳ ನಿಚ್ಯಾ 23 ದುರ್ಜನರೊಳು ದೈನ್ಯ ಬಡದಿರು ಸಾಧು ಸಜ್ಜನರೊಳು ವೈರ ತೊಡದಿರು ಅರ್ಜುನಸಖನಂಘ್ರಿ ಬಿಡದಿರು ನಿ- ರ್ಲಜ್ಜನಾಗಿ ಬಾಯ್ಬಿಡದಿರು 24 ಭಯರೂಪದಿ ಒಳಹೊರಗಿದ್ದು ನಿ- ರ್ಭಯ ನಾಮಕನು ಧೈರ್ಯವನೆ ಗೆದ್ದು ಭಯದೋರುವನೆಂಬುದೆ ಮದ್ದು ಮಹಾ ಭಯಕೃದ್ಭಯಹಾರಿಯನೆ ಪೊಂದು 25 ಪರಸತಿಯರ ಸಂಗವ ಬಿಡು ಹರಿ ಸರ್ವೋತ್ತಮನೆಂದು ಕೊಂಡಾಡು ಪರಮಾತ್ಮನ ಧ್ಯಾನವ ಮಾಡು ನರ ಹರಿದಾಸರಂಗಳ ಒಡಗೂಡು 26 ಸೃಷ್ಟಿಗೊಡೆಯ ಶ್ರೀದವಿಠಲ ವಿಷ್ಟಾವಿಷ್ಟನಾಗಿದ್ದೆಲ್ಲ ಇಷ್ಟಾನಿಷ್ಟವ ಕೊಡಬಲ್ಲ ಮನ- ಮುಟ್ಟಿದವರ ಬೆಂಬಿಡನಲ್ಲಾ 27
--------------
ಶ್ರೀದವಿಠಲರು
ಎಂಥ ಗಾಡಿಕಾರನೆ ಯಶೋದೆ ನಿನ್ನ ಮಗ ಏಕಾಂತಕಾಂತೆರೊಳಾಡುವ ಕೊಂಕು ನೋಡುವ ಪ.ಮುಗುಳುನಗೆಗಳಿಂದ ಮಡದೇರ ಕಂಚುಕದಬಿಗುಹಿನ ಮಲಕ ಬಿಟ್ಟ ಬಹಳ ದಿಟ್ಟಉಗುರೊತ್ತಿ ಗುರುತು ಪೊಂಬುಗುರಿಗಳೆಮ್ಮವೆಮೊಗ್ಗು ಮೊಲೆಗಳ ಪಿಡಿದು ಮೊನೆ ನೋಡಿದ 1ತೋಳೆರಡನು ತಳಕಿಕ್ಕಿ ಇವಿಗೋ ದುಂಡುಮೊಲೆ ಎನಗಂದವೆಂದು ಮೋಹನಸಿಂಧುತಾಳಿದ್ದ ಕೊರಳೊಳು ತನ್ನ ಪದಕದೊಳುಮೇಲದೆಯೆಂದಪ್ಪಿದ ಬಿಗಿದಪ್ಪಿದ 2ರಾಕೇಂದುಮುಖಿಗೆರಾಹುಬಂದು ತೊಡರಿತುಈಕೆಗೆ ಮೋಸವೆಂದು ಎತ್ತಿದ ಬಂದುಜೋಕೆ ಮಾಡುವೆನೆಂದುಜಡಿದುಮಾರವೇಣಿಯಸಾಕಿ ಉಪಕಾರವೆಂದಸಚ್ಚಿದಾನಂದ3ಎಲೆಲೆ ನಾಭಿ ಒಲ್ಪಕಾಯಳೆ ನಾವು ಮುಟ್ಟಿ ಕೆಂಪಿನಾಮೊಲೆ ಮೊಗ್ಗು ಕಪ್ಪಾದವೆಂದು ಮುಟ್ಟಿ ಅಹುದೆಂದುಅಲಕದ ಪೆಳಲ ಬಿಟ್ಟು ಅಹಿರಿಪು ನವಿಲುಥರಅಲರ್ಗಳಾರ್ಮುಡಿಗಟ್ಟಿದ ಅಂಜಬ್ಯಾಡೆಂದ 4ಚದುರೇರೆನ್ನ ವಂಚಿಸಿ ಚಿನ್ನಿಪಾಲು ತನಿವಣ್ಣುಇದೀಗ ಬಚ್ಚಿಟ್ಟರೆಂದು ಯದುಕುಲೇಂದುಮುದ್ದು ಬಟುಗಲ್ಲದಿ ಮೊನೆವಲ್ಗಳ ನಾಟಿಸಿಅಧರಾಮೃತ ಪೀರಿದ ಅತಿಕೊಬ್ಬಿದ 5ಮುಡಿಯ ತೋರಕ ಕೊಡ ಮಲಿ ಭಾರಕಬಡನಡು ಮುರಿವದೆಂದು ನಗೆಯಲ್ಲವೆಂದುಜಡಿತದೊಡ್ಯಾಣವ ಜಾಣೆ ಕಟಿಗೆ ಬಿಗಿದುಡಿಗೆ ಕರವನಿಡಿದ ದುಡುಕು ಮಾಡಿದ 6ಮೃಗಮದಬಾವನ್ನ ಮಘಮಘಿಪ ಪೂಮಾಲೆಝಗಝಗಿಪ ಭೂಷಣವ ಜಾತಿ ಮೌಕ್ತಿಕವಮುಗುದೇರಿಗಿತ್ತ ಮೋಹಿಪ ಪ್ರಸನ್ನವೆಂಕಟಜಗಕೊಬ್ಬ ಚೆಲುವನಮ್ಮ ಜಯಿಸಿದ ನಮ್ಮ 7
--------------
ಪ್ರಸನ್ನವೆಂಕಟದಾಸರು