ಹನುಮ ಸದ್ಭಕ್ತರ ಪ್ರೇಮ ನೆನೆವರ
ಮನದಿಷ್ಟ ಕನಿಕರದಿಂ ಕೊಡುವ ಪ
ಕುಂತಿಗರ್ಭಜ ಬಲವಂತನೆನಿಸಿದ್ಯೊ ಭೀಮ
ಪಂಥದಿಂ ಕರುಪನ ಸ್ವಂತು ಜೈಸಿದ್ಯೊ ವೀರ 1
ಮಧ್ವಕುಲದಿ ಜನಿಸಿ ಮಧ್ವಮುನಿಯೆನಿಸಿದಿಯೊ ತಿದ್ದಿ
ಮಧ್ವಾಂತಗ್ರಂಥ ಸಿದ್ಧಾಂತಪಡಿಸಿದ್ಯೊ 2
ಅಂಜನ್ಯುದರದಿ ಬಂದು ಭಂಜಿಸಿ ಲಂಕೆಯ
ಕಂಜಾಕ್ಷಿಯುಳ್ವøತ್ತಾಂತ ಕಂಜನಾಭನಿಗಿತ್ಯೊ 3
ಮಂಗಳಾಂಗನೆ ರಣರಂಗಮಧ್ಯದಿ ನೀ
ಪಿಂಗದಸುರರ ಸದೆದು ಭಂಗಪಡಿಸಿದ್ಯೊ ಖಳರ 4
ಸೀತಾದೇವಿಯ ತಂದು ನಾಥ ಶ್ರೀರಾಮನಿಗಿತ್ತ ವಿ
ಖ್ಯಾತ ಮಾರುತಿ ಎನ್ನ ಪ್ರೀತಿಲಿ ಸಲಹಯ್ಯ 5