ನಾಮಧ್ಯಾನವ ಮಾಡಿರೋಪ
ನಾಮಧ್ಯಾನವ ಮಾಡಿ | ಕಾಮಿತಾರ್ಥವ ಬೇಡಿ ||
ಶ್ಯಾಮಸುಂದರ ಸು | ಪ್ರೇಮಿ ಶ್ರೀರಾಮನ ಅ.ಪ
ಸತಿ | ಹೈಮಾವತಿಯು ಸದಾ||
ಪ್ರೇಮದಿ ಜಪಿಸುವ | ರಾಮಚಂದ್ರನ ಗುಣ 1
ಶಿವನ ಧನುವ ಮುರಿ| ದವನಿಜೆ ಗೊಲಿದಾ||
ರವಿವಂಶಾಬುಧಿ ಸೋಮ| ಭುವನ ವಿಖ್ಯಾತನ 2
ಕಡುಭಕ್ತಿಯಿಂದಿತ್ತ | ಶಬರಿಯುಚ್ಛಿಷ್ಟವ||
ಬಿಡದೆ ಸ್ವೀಕರಿಸಿದ | ಪ್ರಭು ರಾಮಚಂದ್ರನ 3
ಕರಗಳ ಕಡಿದು ಕ| ಬಂಧನ ಶಾಪವÀ||
ಪರಿಹಾರ ಗೈದ ವ| ಸುಂಧರಪಾಲನ4
ಬ್ರಹ್ಮಪದವಿಯನ್ನು | ಅಂಜನೆಸುತಗಿತ್ತ
ಬ್ರಹ್ಮಾಂಡನಾಯಕ | ಕಂಜಾಕ್ಷ ರಾಮನ 5