ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಇಭರಾಮಪುರ ಕೃಷ್ಣಾಚಾರ್ಯರ ಸ್ತೋತ್ರ (ಅಪ್ಪಾವರು) 140 ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ | ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ || ಇಭರಾಜ ವರದನಿಗು ದ್ರುಪದಾತ್ಮಜಾಪತಿಗು | ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ ಶ್ರೀರಾಮನರಹರಿ ಶ್ರೀಕರನಾರಾಯಣ | ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ || ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ | ಅರವಿಂದದಲಿ ನಾನು ಶರಣು ಶರಣಾದೆ 1 ಪಂಚಮುಖ ಹನುಮಂತ ನರಸಿಂಹ ಗರುಡ ವರಾಹ ಹಯವದನ || ಈ ಅಂಜನಾಸುತನನ್ನು ತತ್ ಅಂತಸ್ಥ | ಪಂಚರೂಪ ಶ್ರೀಶನ್ನ ಪೂಜಿಪಮಹಂತ 2 ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು ಅಪ್ಪಮಕ್ಕಳಂತೆ ಕಾಯ್ದಿರಿ ಜನರ || ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ 3 ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು ತಾಳಿಗೋರೂಪ ಪಾದಜ ಧಾನ್ಯ ಉಂಡು || ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು | ಜಲಜನಾಭನ ಗಾಯಕನೆಂದು ಆಶಿಸಿದಿರಿ 4 ಬೊಮ್ಮನ ಪಿತ `ಶ್ರೀ ಪ್ರಸನ್ನ ಶ್ರೀನಿವಾಸನಲಿ' ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ || ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು ಪ್ರೇಮಾನುಗ್ರಹದಯದಿ ಪಾಲಿಪುದು ಶರಣು 5 ಪ || ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು