ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೊಮ್ಮ ಗಟ್ಟಿಯಲಿದ್ದ ನಮ್ಮ ಪ್ರಾಣೇಶನು ಹ- ನುಮನೆಂಬುವ ಹರಿಭಜಕನೀತ 1 ರಮ್ಮೆರಮಣನಾದ ರಾಮಸೇವಕನಂಘ್ರಿ ಒಮ್ಮೆ ನೋಡಲು ದೋಷದೂರವಾಗ 2 ಕರ ಜೋಡಿಸಿ ಮುಗಿದು ಕೊಂ- ಡಾಡುತೀತ ನಗುವ ಮಹಿಮೆಯನು 3 ಆಡಿದ್ವಚನ ಸತ್ಯಮಾಡುವ ಭಕುತರು ಬೇಡಿದ್ವರಗಳ ಚೆಲ್ಲಾಡುವನು 4 ಹರುಷದಿಂದಲಿ ತಾ ಕಿಂಪುರುಷಖಂಡದಿ ತಪಾ- ಚರಿಸುತಿದ್ದನು ಮಹಾಪುರುಷನೀತ 5 ಅರಸರಂತಕನಾದ ಪರಶುರಾಮನ ಗೆದ್ದ ಅರಸನಂಘ್ರಿಗಳನು ಸ್ಮರಿಸಿಕೊಂಡು 6 ಸುಗ್ರೀವನಲ್ಲಿ ಪರಮನುಗ್ರ(ಹ) ಮಾಡುತಲಿ ದ- ಶಗ್ರೀವನಲ್ಲಿ ಬಂದನಾಗ್ರ(ಹ)ದಿಂದ 7 ನಖ ಶಿರದಿಂದುದ್ದವ ಮಾಡಿ ಉರಿವೀಲಂಕೆಗೆ ತಾನಂಕುರವನಿಟ್ಟ(?) 8 ಮರನಕಿತ್ತಕ್ಷಕುಮಾರನ ಮುರಿದು ತಾರ ಮರನ ಕರೆದು(?) ತಂದಮರನಾದನು 9 ವರದಿ ಬೆಳದ ಕುಂಭಕರಣನ ಕೊಂದು ಕಟ್ಟಿ ಸ್ಥಿರಪಟ್ಟವನು ವಿಭೀಷಣರಿಗಿಟ್ಟ 10 ಮಾತೆಕೊಟ್ಟಂಥ ರತ್ನರಾಕಟೆಯನ್ನು ತಂದು ಭೂತಳದೊಡೆಯಗಿಟ್ಟ ಪ್ರೀತಿಯಿಂದ 11 ಜೊತೆಮುತ್ತಿನ ಹಾರ ಕೊಡಲು ಜಾನಕಿ ರಘು- ನಾಥಗ್ವೊಲಿದು ಅಜಪದವಿನಿಟ್ಟ 12 ಸೀತಾಚೋರನ ಪ್ರಾಣಘಾತಕನು 13 ಅಂಜನಾತ್ಮಜ ದೊಡ್ಡ ಸಂಜೀವನವ ತಂದು ಕೊಂದಕಪಿಗಳ ಪ್ರಾಣ ಪಡೆದನೀತ 14 ಕಂಜಾಕ್ಷಿಯಳ ಕರೆತಂದು ಕೂಡಿಸಿ ರಾಮ- ಗಂಜದೆ ಎಡೆಯ ಕದ್ದೊಯ್ದೆಂಜಲುಂಡ 15 ರೋಮ ರೋಮಕೆ ಕೋಟಿ ಲಿಂಗ ಧರಿಸಿದ ಸು- ಜ್ಞಾನಿಗಳೊಡೆಯ ಮುಖ್ಯಪ್ರಾಣದೇವ 16 ರಾಮ ಲಕ್ಷ್ಮಣ ಸೀತಾದೇವೇರಿಂದ್ವೊಡಗೂಡಿ ಈ ಮಹಾಸ್ಥಳದಿ ನಿಂತ ಮಹಾತ್ಮನು 17 ಭೀತಿ ಇಲ್ಲದಲೆ ಭೀಮೇಶ ಕೃಷ್ಣ(ನ) ನಿಜ ದೂತನೆನಿಸಿದ ಪ್ರಖ್ಯಾತನೀತ 18
--------------
ಹರಪನಹಳ್ಳಿಭೀಮವ್ವ
ಭಾರ ನಿನ್ನದು ದೇವಾ ಭಕುತ ಸಂಜೀವಾ ಪ ದೂರ ನೋಡದೆ ಪೊರೆಯೊ ದುರಿತಗಳ ತರಿಯೊ ಅ.ಪ. ಮೂರನೆ ಗುಣದಿಂದ ಮತ್ತನಾಗಿ ಬಹಳ ಮೂರು ವಿಧ ವಿಷಯದಲಿ ಮಗ್ನನಾದೆ ಮೂರುಖಾಗ್ರೇಸರಿಗೆ ಮುಂದಾವಗತಿಯೈಯ ಮೂರಾವತಾರವುಳ್ಳ ಮರುತಾತ್ಮಜನೆ 1 ಆರು ಮೂರರ ದ್ವಾರದ ಸ್ಥಿರದ ಮನೆಯೊಳಗೆ ಆರು ವೈರಿಗಳು ಕಂಡಾವಾಗಲೂ ಆರು ಬಿಡಿಸದ ಬವಣೆ ಬಡಿಸುತಲೈದಾವರೆ ಆರೆರಡು ಪೆಸರುಳ್ಳ ಅಂಜನಾತ್ಮಜನೆ 2 ಪಂಚೇಂದ್ರಿಯಗಳು ಕೂಡೆ ಪರಿಪರಿ ಬಗೆಯಿಂದ ಪಂಚಮಹಾ ಪಾತಕಕೆ ಎಳೆಯುತಾರೆ ಪಂಚಕಷ್ಟಕೆ ಗುರಿಯು ಆಗಲಾರೆನು ಪ್ರಾಣ ಪಂಚಪದಕವೇ Pದರುಂಡಲಗಿ ಹನುಮಯ್ಯ 3
--------------
ಕದರುಂಡಲಗಿ ಹನುಮಯ್ಯ
ಶುಭನಾಮ ಶೋಭಿತಧಾಮಶ್ರೀ ಭೂಪ ಸಾರಸನಾಭ ವಿಭೋ ವಿಭೋ ಪ.ಅರ್ಭಕಪಾಲಕ ದರ್ಭಶಯನವಿಶ್ವಗರ್ಭ ವಿದಾರಿತ ದುರ್ಭಾಗ್ಯ ದನುಜ 1ದÀÀಂಡಿತ ರಕ್ಷ ಕೋದಂಡಮಂಡಿತಕರದÀಂಡಕಹರ ಕೋಟಿ ಚಂಡಕರಾಭಾ 2ಮರ್ದಿತದುಷ್ಟ ವಿವರ್ಧಿತ ಶಿಷ್ಟ ಕಪರ್ದಿ ವಿರಿಂಚಾಂತಧ್ರ್ಯಾನಚರಣ3ಅಂಜನಾತ್ಮಜ ಕೃತಾಂಜಲಿ ಪುಟಸೇವ್ಯಮಂಜುಳ ಸೂಕ್ತ ಪ್ರಭಂಜಿತಕಲುಷ4ಭದ್ರ ಚರಿತ್ರ ಲಸದ್ರತ್ನ ಭೂಷಣಚಿದ್ರೂಪ ಪ್ರಸನ್ವೆಂಕಟಾದ್ರೀಶಪಾಹಿ5
--------------
ಪ್ರಸನ್ನವೆಂಕಟದಾಸರು