ಅಂಜದಾಕ್ಷಣ ಕಂಜನೇತ್ರನೆ
ಸಂಜೀವಿನಿಯಾ ತಂದು ನೀಡಿದಾ ಪ
ಪಸುಳನೈಯಾ ವಪುವೆಸೆವ ರಾಯ
ಅಸುರವರ್ಗದಸುವ ಮಿಸುಕದಾಕ್ಷಣ ಹಿಸುಕಿ ಬಿಡುತಿಹ 1
ಭೀಮಸೇನಾ ಭಕ್ತಕಾಮಪೂರ್ಣಾ
ಕಾಮಕೀಚಕಾ ಬಾರ ಪಾಮರರಿದಾ
ನಾಕ ನಾನು ಮೆರೆದಾ 2
ಶಕ್ತಿಸಾರಾ ಭಕ್ತ ವಿರಕ್ತಿ ಪೂರಾ
ಭಕ್ತವೃಂದಕೆ ಮುಕ್ತಿಪಥ ಮಹಾಪೂರಾ
ಯುಕ್ತಿಯಿಂದಾ ವ್ಯಕ್ತಪಡಿಸಿದಾ ಅವ್ಯಕ್ತರೂಪಾ 3
ಕ್ಲೇಶದೂರಾ ಪ್ರಾಣೇಶ ವಾರಾ ಗಂಭೀರಾ
ದಾಸಜನ ನುಡಿಯಾ ಗುಣದೋಷ ಹರಣಾ ಅಣಿಮಾ
ವಾಸನ ರಹಿತಾ ಗುಣಗಣಗಡಣಾ ಗರಿಮಾ 4
ದಿಟ್ಟ ರಾಮಾದಕಾ ಹೃದಯ ಪ್ರೇಮ ಮಧುರಾ
ವಿಠಲನರಸಿಂಹಾ ಎದೆಯಾರವಿಂದ ನಯನಾ
ದಿಟ್ಟನಿಟ್ಟಿಗೇ ಸಾಧನೆಯ ಸಾರುವಂಥಾ ಧೀರಾ 5