ವಿಘ್ನೇಶ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ
ದುರಿತ | ಉದ್ಧರಿಸೊ ಇವನಾ ಅ.ಪ.
ಮೂಲ ಕಾರಣ ಜಗಕೆ | ಪಾಲಾಬ್ಧಿಶಯ ನಿನ್ನ ಲೀಲೆಗಳ ತೋರುತ್ತ | ಸಲಹೊ ಇವನಾಕೀಲಾಲ ಜಾಸನುತ | ಮಾಲೋಲ ಶ್ರೀ ಹರಿಯೆವ್ಯಾಳ್ಯ ವ್ಯಾಳ್ಯಕೆ ಪಾಪ | ಜಾಲಗಳ ಹರಿಸೋ 1
ಆಪ್ತ ಸತಿಸುತರಲ್ಲಿ | ವ್ಯಾಪ್ತ ನಿಹ ಹರಿಯೆಂದುಸೂಕ್ತೋಪಚಾರಗಳ | ಪ್ರಾಪ್ತಿಗೈಸುತಲೀ |ಮೌಕ್ತಿಕೋ | ಪಾಯವೇ | ದೋಕ್ತಸಮನಿಸುತಕೀರ್ತಿಕೊಡಿಸಿವಗೆ ಶ್ರೀ | ಕಾಂತ ಮೂರುತಿಯೇ2
ಪಾಂಚ ಭೌತಿಕ ದೇಹ | ಪಂಚತ್ವ ಪಡೆವುದನೆಸಂಚಿಂತನೆಯ ಕೊಟ್ಟು | ಪಂಚ ಪಂಚಾತ್ಮಾಮುಂಚೆ ತಿಳಿಸಿವಗೆ ಸ | ತ್ಪಂಚ ಭೇದ ಜ್ಞಾನವಾಂಛಿತಾರ್ಥದನಾಗೊ | ಅಂಚೆವಹಪಿತನೇ 3
ನಂದ ಮುನಿ ಮತದ ಮಕ | ರಂದ ಉಣಿಸುತ ಇವಗೆಸಂದೇಹ ಕಳೆದು ಆ | ನಂದಗಳ ನೀಯೋಇಂದಿರಾರಾಧ್ಯ ಪದ | ಮಂದಾಕಿನೀ ಜನಕಕಂದನನು ಕಾಪಾಡು | ಯೆಂದು ಪ್ರಾರ್ಥಿಸುವೇ 4
ಕಾಲ | ಯಾವ ಸಮಯದಲಿರಲಿದೇವತವ ಸಂಸ್ಮರಣೆ | ಭಾವದಲಿ ಮಾಳ್ವಾಭಾವ ಪಾಲಿಸುತಿವಗೆ | ನೀವೊಲಿಯ ಬೇಕೆಂದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5