ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಪ್ರದಾಯದ ಹಾಡುಗಳು (ಗುರುವಾರದ ಶುಭದಿನದಂದು) ಅಂಗಿರಾವುತನನ್ನು ನೋಡಿರೊ ನಿತ್ಯ ಮಂಗಳ ಮಹಿಮೆಯ ಪಾಡಿರೊ ಪ. ಗುರುವಾಸರ ಬಂದು ಒದಗಲು ನಾನಾ ಪರಿಯ ಪುಷ್ಪಗಳ ತಂದಿರಿಸಲು ದೊರೆಯು ಗೌರಾಂಗಿಯ ಧರಿಸಲು ನೋಡೆ ದುರಿತ ರಾಶಿಗಳ ಪರಿಹರಿಸಲು 1 ಶಂಖ ಚಕ್ರ ಗದಾಬ್ಜ ಗದೆಗಳನು ನಿಃ- ಶಂಕೆಯಿಂದ ಧರಿಸಿರುವನು ಮಂಕು ಮನುಜರಿಗೆ ದೊರಕುವಾ- ತಂಕಗಳೆಲ್ಲ ಪರಿಹರಿಪನಾ 2 ಇಂದಿರೆಯನು ಮೋಹಗೊಳಿಸುವ ಪೂರ್ಣಾ ನಂದ ವೆಂಕಟರಾಜನಿರುತಿಹ ಚಂದವ ನೆನೆವುತ್ತ ಸ್ತುತಿಸುವ ಭವ ಬಂಧಗಳೆಲ್ಲ ಕತ್ತರಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ