ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಟ್ಟಿಗೆ ಹಿಟ್ಟಿಲ್ಲ ನಿನ್ನಯ ಜುಟ್ಟಿಗೆ ಮಲ್ಲಿಗೆಯು ಪ ಉಟ್ಟಿರುವುದು ಶತಛಿದ್ರದ ವಸ್ತ್ರವು ತೊಟ್ಟಿರುವುದು ಜರತಾರಿಯ ಅಂಗಿಯುಅ.ಪ ಮಾತೆಯ ಗರ್ಭದಲಿ ವಿಧ ವಿಧ ಯಾತನೆಯನನುಭವಿಸಿ ಭೂತಲದಲಿ ಮದಮತ್ಸರ ಲೋಭಕೆ ಸೋತು ಮನವ ನಿರ್ಭೀತಿಯಿಂದಿರುವೆಯೊ 1 ದಿನಗಳು ಕಳೆಯುತಿರೆ ಲೋಕದ ಪ್ರಣಯವು ಹೆಚ್ಚುತಿದೆ ತನಯ ತರುಣಿ ಮನೆ ಕನಕಗಳೆಲ್ಲವು ಕನಸಿನ ತೆರದಲಿ ಕ್ಷಣಿಕವೆಂದರಿಯದೆ 2 ಇದು ನನ್ನದೆಂಬ ಅನುಭವ ಮಂಗನ ಹಿಗ್ಗಟೆಯು ಇಂದಿರೆಯರಸನ ಪರಮ ಪ್ರಸನ್ನತೆ ಪೊಂದಿದ ಪುರುಷನೆ ಜೀವನ್ಮುಕ್ತನು 3
--------------
ವಿದ್ಯಾಪ್ರಸನ್ನತೀರ್ಥರು