ಹೊಟ್ಟಿಗೆ ಹಿಟ್ಟಿಲ್ಲ ನಿನ್ನಯ
ಜುಟ್ಟಿಗೆ ಮಲ್ಲಿಗೆಯು ಪ
ಉಟ್ಟಿರುವುದು ಶತಛಿದ್ರದ ವಸ್ತ್ರವು
ತೊಟ್ಟಿರುವುದು ಜರತಾರಿಯ ಅಂಗಿಯುಅ.ಪ
ಮಾತೆಯ ಗರ್ಭದಲಿ ವಿಧ ವಿಧ
ಯಾತನೆಯನನುಭವಿಸಿ
ಭೂತಲದಲಿ ಮದಮತ್ಸರ ಲೋಭಕೆ
ಸೋತು ಮನವ ನಿರ್ಭೀತಿಯಿಂದಿರುವೆಯೊ 1
ದಿನಗಳು ಕಳೆಯುತಿರೆ ಲೋಕದ
ಪ್ರಣಯವು ಹೆಚ್ಚುತಿದೆ
ತನಯ ತರುಣಿ ಮನೆ ಕನಕಗಳೆಲ್ಲವು
ಕನಸಿನ ತೆರದಲಿ ಕ್ಷಣಿಕವೆಂದರಿಯದೆ 2
ಇದು ನನ್ನದೆಂಬ ಅನುಭವ
ಮಂಗನ ಹಿಗ್ಗಟೆಯು
ಇಂದಿರೆಯರಸನ ಪರಮ ಪ್ರಸನ್ನತೆ
ಪೊಂದಿದ ಪುರುಷನೆ ಜೀವನ್ಮುಕ್ತನು 3