ಶ್ರೀ ರಾಘವೇಂದ್ರರು
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ ಪ
ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಗುರುಗಳ ಕಂಡಿರೇನಮ್ಮ ಅ.ಪ.
ಕಾಲಲಿ ಕಡಾಂವಿಗಿ ಕರದಲ್ಲಿ ದಂಡಕಾಷ್ಟಾ
ಮೈಯೊಳು ಕಾವಿಶಾಟಿ ಪೊತ್ತಿರುವರಮ್ಮ
ಬಂದ ಬಂದ ಜನರಿಗೆಲ್ಲ ಆನಂದ ನೀಡುತ
ಛಂದಾಗಿ ತಾಂವು ಇಲ್ಲಿ ಇರುತಿಹರಮ್ಮ 1
ಬಂದ ಬಂದ ಜನರಿಗೆ ಅಭೀಷ್ಟವ ನೀಡುತ
ಛಂದಾಗಿ ಅಭಯವ ನೀಡುತಿಹರಮ್ಮ
ಒಂದಿನ ಸ್ವಪ್ನದಿ ಫಲಮಂತ್ರಾಕ್ಷತೆ ಕೊಡುತಲಿ
ಅಂದಿನ ಆನಂದನ ಕಾಣಮ್ಮ 2
ಬಂದ ಬಂದ ಜನರು ಪ್ರದಕ್ಷಿಣೆ ನಮಸ್ಕಾರ
ತಾಂವ ದಿಂಡು ಉರುಳುವರಮ್ಮಾ
ಬಂದ ಬಂದ ಜನರಿಗೆಲ್ಲಾ ಅಭಯವ ನೀಡುತ
ತಾಂವ ತುಂಗಾ ತಟದೊಳು ಇರುತಿಹರಮ್ಮಾ 3
ಮೈಯೊಳು ಕೇಸರಿಗಂಧಾ ಪೋಷಿಸಿದಾರಮ್ಮಾ
ಎದುರಲಿ ಶ್ರೀ ಕೃಷ್ಣನ ಪೂಜಿಪರಮ್ಮಾ
ಢಾಳ ಅಕ್ಷಂತಿ ತಿದ್ದಿದ ಅಂಗಾರವು
ಮುದ್ರಿಯು ತಾಂವ್ ಧರಿಸಿಹರಮ್ಮ 4
ಕರದಲಿ ಜಪಮಾಲೆ ಕೊರಳಲಿ ಕಮಲಾಕ್ಷಿ ತಾವ್
ಧರಿಸಿಹರಮ್ಮಾ ಬಿಡದೆ ನಿರಂತರ
ನರಸಿಂಹವಿಠಲನ ಜಪಿಸುತ
ತಾಂವರಿಂದಾವನದೊಳ್ ಇರುಹರಮ್ಮಾ 5