ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ. ಶ್ರೀಹರಿಯ ಸ್ತುತಿ ಅಂಗಾರವನೆ ನೀಡು ಯನ್ನಂತರಂಗದ ಧೊರಿಯೇ ಪ ಅಮಂಗಳಗಳ ನೀಡುವೋ ಪರಮನೀಚ ಅಂಗನಿಯಳಿಗೆ ಅ.ಪ. ಮಂಗಳಾತ್ಮಜ ನಿನ್ನ ಅನುಗಾಲ ಕಂಗಳಿಂದಲಿ ನೋಡಿ ಸುಖಿಸುವೋಡಿಂಗನಾ ಭಂಗಪಡಿಸುತಿಹಳಿ 1 ಪರಮ ಅದ್ಭುತ ಮೂಗುತಿಯೆ ನಿನ್ನ ಅದ್ಭುತ-ಚರಿಯವ ತೋರು ಭೂತನಾಥಾ 2 ಭಕ್ತವತ್ಸಲನೆಂಬ ಬಿರುದು ಬೇಕಾದರೆ ನಂಬಿದ ಭಕುತರನು ಪಾಲಿಸಿ ಬಿರುದು ಪಡಿಯೋ 3 ಶಕುತಿ ಇಲ್ಲದ ಕಾರಣದಿ ವಿಷಕೂಪದೊಳು ಬಿದ್ದು ಘನ ಪಾಪಕೊಳಗಾದೆನೋ ವಿಷಕಂಠನೇ 4 ಹಂಸರೂಢನಾದ ದಾಸ ನಿನ್ನ ದಾಸರನು ಕ್ಲೇಶಪಡಿಸುವರ ಧ್ವಂಸಗೈಯೋ ತಂದೆವರದಗೋಪಾಲನಭಜಕಾ 5
--------------
ತಂದೆವರದಗೋಪಾಲವಿಠಲರು
ಭಾಸ್ಕರನುದಿಸುತಿರಲು ದೋಷ ನಿಲ್ಲಲ್ಯಾಕೆ ಪ ಭಂಗಾರ ದೊರಕಿರಲು ಬ್ಯಾಗಡಿಯ ಬಯಕ್ಯಾಕೆಗಂಗಾಂಬು ಇರಲು ಕೂಪೋದ(ಕ ?)ವ್ಯಾಕೆಶೃಂಗಾರ ಗುಣನಿಧಿ ಶ್ರೀನಿವಾಸಾರ್ಯರಾಅಂಗಾರವಿರಲನ್ಯ ಔಷಧಗಳ್ಯಾಕೆ1 ಕರಿ ದುರಿತ ತಿರುಗಿ ಬರಲ್ಯಾಕೆ 2 ಲೌಕಿಕಾಚಾರ ವರ್ಜಿತರೆಂಬ ಬಿರದಿನಲಿ ವೈ-ದಿಕಾಚಾರದಲಿ ದಕ್ಷ ದೀಕ್ಷಾಭವರೋಗ ವೈದ್ಯ ಮೋಹನ್ನ ವಿಠಲನ್ನ ಪ್ರೀಯಕವಿಕುಲ ತಿಲಕನಿರೆ ಕಳವಳಿಸಲ್ಯಾಕೆ 3
--------------
ಮೋಹನದಾಸರು
ಶ್ರೀ ರಾಘವೇಂದ್ರರು ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ ಪ ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಗುರುಗಳ ಕಂಡಿರೇನಮ್ಮ ಅ.ಪ. ಕಾಲಲಿ ಕಡಾಂವಿಗಿ ಕರದಲ್ಲಿ ದಂಡಕಾಷ್ಟಾ ಮೈಯೊಳು ಕಾವಿಶಾಟಿ ಪೊತ್ತಿರುವರಮ್ಮ ಬಂದ ಬಂದ ಜನರಿಗೆಲ್ಲ ಆನಂದ ನೀಡುತ ಛಂದಾಗಿ ತಾಂವು ಇಲ್ಲಿ ಇರುತಿಹರಮ್ಮ 1 ಬಂದ ಬಂದ ಜನರಿಗೆ ಅಭೀಷ್ಟವ ನೀಡುತ ಛಂದಾಗಿ ಅಭಯವ ನೀಡುತಿಹರಮ್ಮ ಒಂದಿನ ಸ್ವಪ್ನದಿ ಫಲಮಂತ್ರಾಕ್ಷತೆ ಕೊಡುತಲಿ ಅಂದಿನ ಆನಂದನ ಕಾಣಮ್ಮ 2 ಬಂದ ಬಂದ ಜನರು ಪ್ರದಕ್ಷಿಣೆ ನಮಸ್ಕಾರ ತಾಂವ ದಿಂಡು ಉರುಳುವರಮ್ಮಾ ಬಂದ ಬಂದ ಜನರಿಗೆಲ್ಲಾ ಅಭಯವ ನೀಡುತ ತಾಂವ ತುಂಗಾ ತಟದೊಳು ಇರುತಿಹರಮ್ಮಾ 3 ಮೈಯೊಳು ಕೇಸರಿಗಂಧಾ ಪೋಷಿಸಿದಾರಮ್ಮಾ ಎದುರಲಿ ಶ್ರೀ ಕೃಷ್ಣನ ಪೂಜಿಪರಮ್ಮಾ ಢಾಳ ಅಕ್ಷಂತಿ ತಿದ್ದಿದ ಅಂಗಾರವು ಮುದ್ರಿಯು ತಾಂವ್ ಧರಿಸಿಹರಮ್ಮ 4 ಕರದಲಿ ಜಪಮಾಲೆ ಕೊರಳಲಿ ಕಮಲಾಕ್ಷಿ ತಾವ್ ಧರಿಸಿಹರಮ್ಮಾ ಬಿಡದೆ ನಿರಂತರ ನರಸಿಂಹವಿಠಲನ ಜಪಿಸುತ ತಾಂವರಿಂದಾವನದೊಳ್ ಇರುಹರಮ್ಮಾ 5
--------------
ನರಸಿಂಹವಿಠಲರು
ಏಳಿ ಮೊಸರ ಕಡೆಯಿರೇಳಿ-ಗೋ-|ಪಾಲ ಚೂಡಾಮಣಿ ಏಳದ ಮುನ್ನ ಪಇಂದುಮುಖಿಯರೆದ್ದು ಮುಖವನೆ ತೊಳೆದು ಶ್ರೀ-|ಗಂಧ-ಕಸ್ತೂರಿ-ಕುಂಕುಮಗಳಿಟ್ಟು ||ಚಂದ್ರಗಾವಿಯ ಸೀರೆಯ ನೀರಿವಿಟ್ಟು ಮು-|ಕುಂದನ ಪಾಡುತ ಚದುರೆಯರೆಲ್ಲ 1ಹೊಂಗೊಡ ಬೆಳಗಿಟ್ಟು ಪೊಸಮೊಸರನೆತುಂಬಿ|ರಂಗನೀಲದ ಕಡೆಗೋಲನಿಟ್ಟು ||ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು |ರಂಗನ ಪಾಡುತ ಚದುರೆಯರೆಲ್ಲ 2ಬಡನಡು ಬಳುಕುತ ಕುಚಗಳಲ್ಲಾಡುತ |ಕಡಗ-ಕಂಕಣ ಝಣಝಣರೆನ್ನುತ ||ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ ಪಾ-|ಲ್ಗಡಲೊಡೆಯನ ಪಾಡುತ ಚದುರೆಯರು 3ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ |ಹಸಿದು ಆಕಳಿಸಿ ಬಾಯಾರುತಲಿ ||ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ |ಶಶಿವದನನಿಗೆ ಬೆಣ್ಣೆಯ ನೀಡಲೋಸುಗ 4ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು |ಪ್ರಾಣಪದಕ ಕೃಷ್ಣನಿಗೆ ಕೊಡಲು ||ಚಾಣೂರ ಮಲ್ಲನ ಗೆಲಿದು ಬಾರೆನುತಲಿ ||ಜಾಣ ಪುರಂದರವಿಠಲನಪ್ಪಲುಗೋಪಿ5ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ |ತಟ್ಟೆಯೊಳಾರತಿಗಳ ಬೆಳಗಿ ||ಥಟ್ಟನೆ ಉಪ್ಪು-ಬೇವುಗಳನಿವಾಳಿಸಿ|ತೊಟ್ಟಿಲೊಳಿಟ್ಟು ಮುದ್ದಾಡುವಳೊ 6ನಮ್ಮಪ್ಪ ರಂಗಯ್ಯ ಅಳಬೇಡವೊ ದೊಡ್ಡ |ಗುಮ್ಮ ಬಂದಿದೆ ಸುಮ್ಮನಿರು ಎನುತ ||ಅಮ್ಮಿಯನೀಯುತ ಅಮರರನಾಳ್ದನ |ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ 7ಏಸೊ ಬೊಮ್ಮಾಂಡವ ರೋಮದೊಳಿರಿಸಿದ |ವಾಸುದೇವನನೆತ್ತಿ ಕೊಂಬುವಳೊ ||ನಾಶರಹಿತನಾಯುಷ್ಯ ಹೆಚ್ಚಲೆಂದು |ರಾಶಿದೈವಕೆ ತಾ ಬೇಡಿಕೊಂಬುವಳೊ 8ಮಾಧವಬಾ ಮದುಸೂದನ ಬಾ ಬ್ರ-|ಹ್ಮಾದಿವಂದಿತಹರಿಬಾ ಯೆನುತ ||ಆದಿ ಮೂರುತಿ ಶ್ರೀ ಪುರಂದರವಿಠಲನ |ಆದರದಲಿ ಮುದ್ದಾಡುವಳೊ 9
--------------
ಪುರಂದರದಾಸರು