ದೇವ ಗುರುಸ್ತುತಿ
ಅಂಗವೇ ಶ್ರೀ ಮಹಾಂಗಿರೀಶ ಲಿಂಗವಾದುದು
ಸಂಗ ಸುಖದ ದುರಿತವೆಲ್ಲ ಹಿಂಗಿ ಪೋದುದು ಪ
ನಿರ್ಮಲಾತ್ಮ ಗುರುಕಟಾಕ್ಷ ಮರ್ಮಸಿಕ್ಕಿತು
ಕರ್ಮ ಹರಿದು ಜ್ಞಾನಜ್ಯೋತಿ ಬೆಳಕು ಮಿಕ್ಕಿತು
ಧರ್ಮ ತತ್ವದಮೃತವೆಂಬ ಶರಧಿಯುಕ್ಕಿತು
ಪ್ರೇಮದಿಂದ ಪ್ರಕಟವಾದ ಬ್ರಹ್ಮ ದಕ್ಕಿತು 1
ಮಾಯೆಯಿಂದ ಮಮತೆಯೆಲ್ಲ ಸತ್ಯವಾದುದು
ನ್ಯಾಯಪಥವ ತಿಳಿಯೆ ಸರ್ವ ಮಿಥ್ಯವಾದುದು
ಸಾಯುತೊಡನೆ ಹುಟ್ಟುವುದರ ಭೀತಿಪೋಪುದು
ಕಾಯದೊಳಗೆ ದಿವ್ಯಜ್ಯೋತಿ ಪಥ್ಯವಾದುದು 2
ಪರಶಿವಾತ್ಮಲಿಂಗವೆನ್ನ ಮನಕೆ ಸಾರಿತು
ತುಂಬಿ ತುಳುಕಿ ಬೀರಿತು
ಪರಮಾನಂದರಸದ ಲಹರಿ ಉಕ್ಕಿ ಹರಿಯಿತು 3