ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಜೆ ನಿನ್ನೊಗೆತನದ ಸೊಗಸನೇನೆಂಬೆ ಜಗವೆಲ್ಲ ನಗುವಂತೆ ಹಗರಣವೆ ತೋರಿಸುವೆ ಪ. ಕೆಂಗಣ್ಣು ಕೊನೆಮೀಶೆ ಅಂಗವೆಲ್ಲ ವಿಭೂತಿ ಗಂಗೆ ಶಿರದಲಿ ಬಹು ಭುಜಂಗ ಭೂಷಣನು ತುಂಗ ತ್ರಿಶಿಖಿವ ಪಿಡಿದು ರಂಗನಟನಂತಿರುವ ಅಂಗ ಪೂಜೆಯಗೊಂಬ ಇಂಗಿತೇಶನು ಪತಿಯು 1 ಗೌರಿಯ ಮಗನಾರುಮುಖಿ ಕರಿವದನ ಮತ್ತೋರ್ವ ಮರುಳುಭೂತಗಳೆಲ್ಲ ಪರಿವಾರವು ಸುರನಾಥನರಸಿ ಶಚಿ ಗುರು ಮಹಿಳೆ ತಾರಾದಿವರೆ ನಿನ್ನ ಪರಮ ಸೌಂದರಿಯಕಿದು ಸರಿಯೆಂತು 2 ಶತ್ರುಜಯ ಸೌಭಾಗ್ಯ ಪುತ್ರ ಮಿತ್ರ ಕಳತ್ರ ಚಿತ್ರ ಸುಖದಾಯ ಸರ್ವತ್ರ ಪೂಜ್ಯೆ ಸುತ್ರಾಮಗೊಲಿದೀ ಜಗತ್ರಯವ ಪೊರೆವಸುರ ಮಿತ್ರ ವೆಂಕಟಪತಿಯ ಪಾತ್ರನೆಂತ್ವಧುವಾದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಂದು ತೋರೆ ತಡಿಯೆನೆ ತಾಳಲಾರೆನೆ ತಂಗಿಹೆಂದಳ ವೇಲಾಪುರದ ಚೆನ್ನಿಗನಭಾವಕಿಪ.ಮಂಗಳ ನೋಟಕೆ ಮೆಚ್ಚಿ ಮರುಳಾದೆನೆಲೆ ತಂಗಿಅಂಗವೆಲ್ಲ ಕಮಠಾದವನಪ್ಪಿಸಮ್ಮಭಾವಕಿ1ಕೊನೆವಲ್ಲಿಗೆಧರೆಸೋಂಕಲು ವಶ್ಯವಾದೆನೆಲೆ ತಂಗಿಘನಕೋಪವ್ಯಕ್ತನ ಕೂಡಿಸಮ್ಮಭಾವಕಿ2ಮಾನದಂತಿದ್ದ ಬಲಿಯ ಮೆಚ್ಚಿ ನುಂಗುವರೆ ತಂಗಿಕ್ಷಣಯುಗವಾಗಿದೆ ಸದ್ವೀಕ್ಷಣ ಕಾಣದೆಭಾವಕಿ3ಹೆಂಗಳ ಬಿಟ್ಟೊಬ್ಬನೆ ತಾ ಹ್ಯಾಗೆ ಹೋದ ಹೇಳೆ ತಂಗಿಪೊಂಗೊಳಲೂದುತಲೆನ್ನ ಪಾಲಿಸೆನ್ನೆಭಾವಕಿ4ಮೋಹನ ಬಾರದೀ ಗಂಧಮಲ್ಲಿಗ್ಹಾರ್ಯಾಕೆ ತಂಗಿ ಬರಹೇಳೆ ಪ್ರಸನ್ನವೆಂಕಟನ ವಾಜಿಯಿಂದಭಾವಕಿ5
--------------
ಪ್ರಸನ್ನವೆಂಕಟದಾಸರು
ಬೂಚಿಬಂದಿದೆ-ರಂಗ-ಬೂಚಿ ಬಂದಿದೆಪಚಾಚಿ ಕುಡಿದು ಸುಮ್ಮನೆ ನೀಪಾಚಿಕೊಳ್ಳೊ ಕೃಷ್ಣಯ್ಯ ಅ.ಪನಾಕು ಮುಖದ ಬೂಚಿಯೊಂದು |ಗೋಕುಲಕ್ಕೆ ಓಡಿ ಬಂದು ||ತೋಕರನ್ನು ಎಳೆದುಕೊಂಡು |ಕಾಕುಮಾಡಿ ಒಯ್ಯುವುದಕೆ 1ಮೂರು ಕಣ್ಣಿನ ಬೂಚಿಯೊಂದು |ಊರು ಊರು ಸುತ್ತಿ ಬಂದು ||ದ್ವಾರದಲ್ಲಿ ನಿಂದಿದೆ ನೋಡೊ |ಪೋರರನ್ನು ಒಯ್ಯುವುದಕೆ 2ಅಂಗವೆಲ್ಲ ಕಂಗಳುಳ್ಳ |ಶೃಂಗಾರ ಮುಖದಬೂಚಿ||ಬಂಗಾರದ ಮಕ್ಕಳನೆಲ್ಲ |ಕೆಂಗೆಡಿಸಿ ಒಯ್ಯುವುದಕೆ 3ಆರು ಮುಖದ ಬೂಚಿಯೊಂದು |ಈರಾರುಕಂಗಳದಕೆ ||ಬಾರಿಬಾರಿಅಳುವ ಮಕ್ಕಳ |ದೂರ ಸೆಳೆದು ಒಯ್ಯುವುದಕೆ 4ಮರದ ಮೇಲೆ ಇರುವುದೊಂದು |ಕರಿಕರಾಳದ ಮುಖದಬೂಚಿ||ತರಳರನ್ನು ಎಳೆದುಕೊಂಡು |ಪುರಂದರವಿಠಲಗೊಪ್ಪಿಸಲಿಕ್ಕೆ 5
--------------
ಪುರಂದರದಾಸರು