ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಜೆ ನಿನ್ನೊಗೆತನದ ಸೊಗಸನೇನೆಂಬೆ ಜಗವೆಲ್ಲ ನಗುವಂತೆ ಹಗರಣವೆ ತೋರಿಸುವೆ ಪ. ಕೆಂಗಣ್ಣು ಕೊನೆಮೀಶೆ ಅಂಗವೆಲ್ಲ ವಿಭೂತಿ ಗಂಗೆ ಶಿರದಲಿ ಬಹು ಭುಜಂಗ ಭೂಷಣನು ತುಂಗ ತ್ರಿಶಿಖಿವ ಪಿಡಿದು ರಂಗನಟನಂತಿರುವ ಅಂಗ ಪೂಜೆಯಗೊಂಬ ಇಂಗಿತೇಶನು ಪತಿಯು 1 ಗೌರಿಯ ಮಗನಾರುಮುಖಿ ಕರಿವದನ ಮತ್ತೋರ್ವ ಮರುಳುಭೂತಗಳೆಲ್ಲ ಪರಿವಾರವು ಸುರನಾಥನರಸಿ ಶಚಿ ಗುರು ಮಹಿಳೆ ತಾರಾದಿವರೆ ನಿನ್ನ ಪರಮ ಸೌಂದರಿಯಕಿದು ಸರಿಯೆಂತು 2 ಶತ್ರುಜಯ ಸೌಭಾಗ್ಯ ಪುತ್ರ ಮಿತ್ರ ಕಳತ್ರ ಚಿತ್ರ ಸುಖದಾಯ ಸರ್ವತ್ರ ಪೂಜ್ಯೆ ಸುತ್ರಾಮಗೊಲಿದೀ ಜಗತ್ರಯವ ಪೊರೆವಸುರ ಮಿತ್ರ ವೆಂಕಟಪತಿಯ ಪಾತ್ರನೆಂತ್ವಧುವಾದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ - ಇದರಕುರುಹ ಪೇಳಿ ಕುಳಿತಿರುವ ಜನರು ಪ ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲಗಂಟಲು ಮೂರುಂಟು ಮೂಗು ಇಲ್ಲಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು 1 ನಡುವೆ ಕಲಿಯುಂಬುವುದು ನಡುನೆತ್ತಿಲಿ ಬಾಯಿಕಡು ಸ್ವರಗಳಿಂದ ಗಾನ ಮಾಡುವುದುಅಡವಿಯಲಿ ಹುಟ್ಟುವುದು ಅಂಗವೆರಡಾಗುವುದುಬಡತನ ಬಂದರೆ ಬಹಳ ರಕ್ಷಿಪುದು 2 ಶಿಖಾಮಣಿ ಸಿಂಹಾಸನದ ಮೇಲಿರ್ಪಸಂಜೀವ ಪಿತ ಆದಿಕೇಶವನೆ ಬಲ್ಲ 3
--------------
ಕನಕದಾಸ
ತಂದು ತೋರೆ ತಡಿಯೆನೆ ತಾಳಲಾರೆನೆ ತಂಗಿಹೆಂದಳ ವೇಲಾಪುರದ ಚೆನ್ನಿಗನಭಾವಕಿಪ.ಮಂಗಳ ನೋಟಕೆ ಮೆಚ್ಚಿ ಮರುಳಾದೆನೆಲೆ ತಂಗಿಅಂಗವೆಲ್ಲ ಕಮಠಾದವನಪ್ಪಿಸಮ್ಮಭಾವಕಿ1ಕೊನೆವಲ್ಲಿಗೆಧರೆಸೋಂಕಲು ವಶ್ಯವಾದೆನೆಲೆ ತಂಗಿಘನಕೋಪವ್ಯಕ್ತನ ಕೂಡಿಸಮ್ಮಭಾವಕಿ2ಮಾನದಂತಿದ್ದ ಬಲಿಯ ಮೆಚ್ಚಿ ನುಂಗುವರೆ ತಂಗಿಕ್ಷಣಯುಗವಾಗಿದೆ ಸದ್ವೀಕ್ಷಣ ಕಾಣದೆಭಾವಕಿ3ಹೆಂಗಳ ಬಿಟ್ಟೊಬ್ಬನೆ ತಾ ಹ್ಯಾಗೆ ಹೋದ ಹೇಳೆ ತಂಗಿಪೊಂಗೊಳಲೂದುತಲೆನ್ನ ಪಾಲಿಸೆನ್ನೆಭಾವಕಿ4ಮೋಹನ ಬಾರದೀ ಗಂಧಮಲ್ಲಿಗ್ಹಾರ್ಯಾಕೆ ತಂಗಿ ಬರಹೇಳೆ ಪ್ರಸನ್ನವೆಂಕಟನ ವಾಜಿಯಿಂದಭಾವಕಿ5
--------------
ಪ್ರಸನ್ನವೆಂಕಟದಾಸರು
ಬೂಚಿಬಂದಿದೆ-ರಂಗ-ಬೂಚಿ ಬಂದಿದೆಪಚಾಚಿ ಕುಡಿದು ಸುಮ್ಮನೆ ನೀಪಾಚಿಕೊಳ್ಳೊ ಕೃಷ್ಣಯ್ಯ ಅ.ಪನಾಕು ಮುಖದ ಬೂಚಿಯೊಂದು |ಗೋಕುಲಕ್ಕೆ ಓಡಿ ಬಂದು ||ತೋಕರನ್ನು ಎಳೆದುಕೊಂಡು |ಕಾಕುಮಾಡಿ ಒಯ್ಯುವುದಕೆ 1ಮೂರು ಕಣ್ಣಿನ ಬೂಚಿಯೊಂದು |ಊರು ಊರು ಸುತ್ತಿ ಬಂದು ||ದ್ವಾರದಲ್ಲಿ ನಿಂದಿದೆ ನೋಡೊ |ಪೋರರನ್ನು ಒಯ್ಯುವುದಕೆ 2ಅಂಗವೆಲ್ಲ ಕಂಗಳುಳ್ಳ |ಶೃಂಗಾರ ಮುಖದಬೂಚಿ||ಬಂಗಾರದ ಮಕ್ಕಳನೆಲ್ಲ |ಕೆಂಗೆಡಿಸಿ ಒಯ್ಯುವುದಕೆ 3ಆರು ಮುಖದ ಬೂಚಿಯೊಂದು |ಈರಾರುಕಂಗಳದಕೆ ||ಬಾರಿಬಾರಿಅಳುವ ಮಕ್ಕಳ |ದೂರ ಸೆಳೆದು ಒಯ್ಯುವುದಕೆ 4ಮರದ ಮೇಲೆ ಇರುವುದೊಂದು |ಕರಿಕರಾಳದ ಮುಖದಬೂಚಿ||ತರಳರನ್ನು ಎಳೆದುಕೊಂಡು |ಪುರಂದರವಿಠಲಗೊಪ್ಪಿಸಲಿಕ್ಕೆ 5
--------------
ಪುರಂದರದಾಸರು
ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಪ.ಒಂಟಿ ಕೊಂಬಿನ ಪಕ್ಷಿ ಒಳಗೆ ಕರುಳಿಲ್ಲಗಂಟಲು ಮೂರುಂಟು ಮೂಗು ಇಲ್ಲಕುಂಟು ಮನುಜನಂತೆ ಕುಳಿತಿಹುದು ಮನೆಯೊಳಗೆಎಂಟು ಹತ್ತರ ಭಕ್ಷ ಭಕ್ಷಿಸುವುದು 1ನಡುವೆ ತಲಿಯೆಂಬುವದು ನಡು ನೆತ್ತಿಯಲಿ ಬಾಯಿಕಡು ಸ್ವರಗಳಿಂದ ಗಾನ ಮಾಡ್ವದುಅಡವಿಯಲಿ ಹುಟ್ಟುವುದು ಅಂಗವೆರಡಾಗುವುದುಬಡತನ ಬಂದರೆ ಬಹಳ ರಕ್ಷಿಪುದು 2ಕಂಜ ವದನೆಯರ ಕರದಲ್ಲಿ ನಲಿದಾಡುವುದುಎಂಜಲನುಣಿಸುವುದು ಮೂರ್ಜಗಕೆರಂಜಿಪಶಿಖಾಮಣಿ ಸಿಂಹಾಸನದ ಮೇಲಿಪ್ಪಸಂಜೀವ ಪಿತ ಪುರಂದರವಿಠಲನೇ ಬಲ್ಲ * 3
--------------
ಪುರಂದರದಾಸರು
ಲಿಂಗವ ಕಟ್ಟುವ ವಿವರವ ಹೇಳುವೆತಲೆವಾಗಿ ಕೇಳಲೆ ಹುಚ್ಚು ಬಡ್ಡಿಲಿಂಗ ಕಟ್ಟಿದೆಯಾದರೆ ಚಿದಾನಂದಲಿಂಗವಾಗುವೆ ಹುಚ್ಚು ಬಡ್ಡಿಪಹೊಟ್ಟೆಯೊಳಗಿರೆ ತಾಯಿಗೆ ಲಿಂಗವಕಟ್ಟುವೆಯೋ ಹುಚ್ಚು ಬಡ್ಡಿಮುಟ್ಟುಮಿಂದಿರೆ ಬಿಂದು ಬೀಳುವಾಗ ಲಿಂಗವಕಟ್ಟಿದೆಯಾ ಹುಚು ಬಡ್ಡಿಕಟ್ಟುವೆ ಯಾರಿಗೆ ಕಟ್ಟಿಕೊಂಬವನಾರುಇಷ್ಟು ಅರಿಯೆ ಹುಚ್ಚು ಬಡ್ಡಿಕಟ್ಟಿದೆಯಾದರೆ ಅಂಗವೆ ನೀನಾಗುನಿಜಲಿಂಗನಹೆ ಹುಚ್ಚು ಬಡ್ಡಿ1ಲಿಂಗ ಹೋಯಿತು ಎಂದು ಪ್ರಾಣವ ಕೊಡುವೆಯೋಲಿಂಗ ಹೋಯಿತೆ ಹುಚ್ಚು ಬಡ್ಡಿಲಿಂಗವು ಹೋದರೆ ನೀನು ಉಳಿವುದೆಂತುಲಿಂಗವು ನೀ ಹುಚ್ಚು ಬಡ್ಡಿಲಿಂಗವ ನೀನೆರಡಾಗಿ ಲಿಂಗವ ಕಟ್ಟಿಹೆಲಿಂಗಾಗಿಯೇ ಹುಚ್ಚು ಬಡ್ಡಿಅಂಗ ಸಜ್ಜೆಯು ಆಗಿ ಲಿಂಗವೇ ನೀನಿರೆಲಿಂಗ ಕಟ್ಟಿದೆ ಹುಚ್ಚು ಬಡ್ಡಿ2ಲಿಂಗವನೆ ಕಟ್ಟಿನಿದ್ರೆಯ ಮಾಡಲುಲಿಂಗವೆಲ್ಲಿತ್ತೋ ಹುಚ್ಚು ಬಡ್ಡಿಲಿಂಗವ ನೀನೀಗ ಲಿಂಗೆಂದು ಪೂಜಿಸನೀನಾರೋ ಎಲೆ ಹುಚ್ಚುಬಡ್ಡಿಲಿಂಗ ಚಿದಾನಂದ ಸದ್ಗುರುವನು ಹೊಂದುಲಿಂಗವ ತಿಳಿವೆ ಹುಚ್ಚು ಬಡ್ಡಿಲಿಂಗವ ತಿಳಿದ ಬಳಿಕ ಲಿಂಗಅಂಗವು ಅಂಗ ಲಿಂಗವು ಹುಚ್ಚು ಬಡ್ಡಿ3
--------------
ಚಿದಾನಂದ ಅವಧೂತರು
ಲಿಂಗವಾದವ ಲಿಂಗನಹನೆಲಿಂಗವಾಗಿ ತಾನಿರೆ ಅಂಗವೆನಿಸಬಲ್ಲನೆಲಿಂಗ ಬೋಧಮತಂಗ ಅಮೃತಗಂಗಮುಕ್ತಿಗೆಅನಂಗದೀಪ್ತಿಯ ತರಂಗರಂಗಲಿಂಗ ಲಿಂಗ ನಿಜ ಸಂಯೋಗಿರಲಿಕೆಲಿಂಗ ಸಹಜ ಅಖಂಡವೇ ತಾನಾದಪಮುತ್ತು ನೀರಿನರಲಿಕೆ ಮುತ್ತು ನೀರಹುದೇಮತ್ತೇ ಆಪರಿ ಆತ್ಮ ಲಿಂಗನಹನೇಮುತ್ತು ಸರ್ವಾಂಗಕ್ಕಿತ್ತು ಕಳೆಯದೊತ್ತೊತ್ತುಭ್ರಾಂತಿ ಹಾರಿತ್ತು ಸುಖವು ಬಂದಿತ್ತು ಇತ್ತುಸುತ್ತಮುತ್ತ ಬರಿ ಬೋಧವೆ ತುಂಬಿವೆಚಿತ್ತ ಸತ್ತು ಚಿನ್ಮಾತ್ರವೆ ತಾನಾದಾ1ಫಲವದು ಫಕ್ವವಾಗೆ ಪಕ್ವವು ಕಾಯಹುದೇತಿಳಿಯೆ ಆಪರಿ ಆತ್ಮ ಲಿಂಗನಹನೇಫಲವು ಫಲವು ಪ್ರಣವದ ಒಲವುಶುಕ್ರರೂ ಹಲವು ತೇಜದ ಬಲವು ಆನಂದ ನಿಲುವು ನಿಲುವುಕಳೆಯೊಳಗೆ ತಾ ಥಳಥಳಿಸುತ ಬಲುಪ್ರಭಾವವಾಗಿಹ ಪರಮನೆ ತಾನಾದ2ದೇವವೃಕ್ಷಾದುದು ಈಗ ಸನಿಯಹುದೇಜೀವಿ ಆಪರಿಆತ್ಮ ಲಿಂಗನಹನೇದೇವ ಭಕ್ತ ಸಂಜೀವ ಜÕಪ್ತಿಯಭಾವಎಲ್ಲ ತುಂಬಿರುವಆವಾಗಈವಈವಜೀವ ಹೋಗಿ ಚಿದಾನಂದನೆ ತಾನಾಗಿಆವಾವ ಕಾಲದಿ ಬ್ರಹ್ಮವೆ ತಾನಾದ3
--------------
ಚಿದಾನಂದ ಅವಧೂತರು