ಸುಲಭಪೂಜೆಯಕೇಳಿ ಬಲವಿಲ್ಲದವರುಕಾಲಕಾಲದಕರ್ಮಕಮಲಾಕ್ಷಗರ್ಪಿಸಿರಿಪ.ಇರುಳು ಹಚ್ಚುವ ದೀಪ ಹರಿಗೆ ನೀಲಾಂಜನವು |ಮರುವುಡುವ ಧೋತರವು ಪರಮವಸ್ತ್ರ ||ತಿರುಗಾಡಿ ದಣಿಯುವುದು ಹರಿಗೆ ಪ್ರದಕ್ಷಿಣೆಯುಮರಳಿ ಹೊಡಮರುಳುವುದು ನೂರೆಂಟು ದಂಡ 1ನುಡಿವ ಮಾತುಗಳೆಲ್ಲ ಪಾಂಡುರಂಗನ ಜಪವುಮಡದಿ ಮಕ್ಕಳು ಎಲ್ಲ ಒಡನೆ ಪರಿವಾರ ||ನಡುಮನೆಯ ಅಂಗಳವುಉಡುಪಿ ಭೂವೈಕುಂಠಎಡ ಬಲದ ಮನೆಯವರು ಕಡುಭಾಗವತರು 2ಹೀಗೆ ಈ ಪರಿಯಲಿನಿತ್ಯ ನೀವರಿತಿರಲುಜಗದೊಡೆಯ ಶ್ರೀ ಕೃಷ್ಣ ದಯವ ತೋರುವನು ||ಬೇಗದಿ ತಿಳಿದುಕೇಳಿ ಹೋಗುತಿದೆ ಆಯುಷ್ಯಯೋಗಿಪುರಂದರವಿಠಲ ಸಾರಿ ಪೇಳಿದನು3