ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆನ್ನ ದೂರುವರೆ ಪೇಳಮ್ಮಯ್ಯ ಪೋಕಬುದ್ಧಿಯ ಗೊಲ್ಲತಿ ಪೋಕ ಲೋಕಲೋಕದಿ ನೋಡೆ ನಾಕಾಣೆನೆಲ್ಲೆಲ್ಲೂ ಪ ಅಮ್ಮಯ್ಯ ನೀನಿಡುವೊ ಪಾಲ್ಬೆಣ್ಣೆಯ ಕಣ್ಣಿಂದ ನೋಡುವೆನೆ ಅಣ್ಣ ರಾಮರ ಕೇಳೆ ಎನ್ನಾಣೆ ಹುಸಿಯಲ್ಲ ಎನ್ನ ಪಣೆಯ ಲಿಖಿತ ಮುನ್ನ ಮಾಡಲಿ ಏನೆ 1 ದುಷ್ಟಹೆಂಗಳೇರಾಡುವೊ ಮಾತೊಂದು ನೀ ಗೊತ್ತು ಹಿಡಿಯ ಬ್ಯಾಡಮ್ಮ ಚಟ್ಟಿಗೆ ಬೆಣ್ಣೆಯ ಮೆಲುವೋದುಂಟಾದರೆ ಪುಟ್ಟಕೂಸಿನ ಹೊಟ್ಟೆಗೆ ದೃಷ್ಟಿತಾಗದು ಏನೆ 2 ಚೆಂಡನಾಡುವಾಗ ಇವರು ಎನ್ನ ಮುಂಗೈಯ ಪಿಡಿದುಕೊಂಡು ಗಂಡರಂಜಿಕೆಯಿಲ್ಲ ಗಾಡಿಕಾರ್ತಿಯರೆಲ್ಲ ಬಂಡು ಮಾತುಗಳಾಡಿ ಬಂದು ದೂರಿದರೇನೆ 3 ಸಣ್ಣ ಮಕ್ಕಳೊಡನೆ ಅಂಗಳದಿ ನಾ- ಚಿಣ್ಣಿಯನಾಡುವಾಗ ಬೆಣ್ಣೆಕೊಡುತೇವೆಂದು ಬಣ್ಣ ಬಣ್ಣದಿ ಎನ್ನ ಕಣ್ಣು ಸನ್ನೆಯ ಮಾಡಿ ಕರೆದರ್ಯಾತಕೆ ಕೇಳೆ 4 ಗೋಲಿ ಗುಂಡುಗಳಾಡುತ ನಿಂತಿರಲೆನ್ನ ಲೀಲೆಯಿಂದಲಿ ನೋಡುತ ಭೀಮೇಶಕೃಷ್ಣ ಬಾರೆಂದೆನ್ನ ಬಿಗಿದಪ್ಪಿ ಬಾಯ ತಂಬುಲಗಳ ಬೇಡಿ ಮಾತಾಡೋರು 5
--------------
ಹರಪನಹಳ್ಳಿಭೀಮವ್ವ
ತುಳಸಿ ತುಳಸಿ ಪೂಜೆ ಮಾಡಿ ಹರಿ ಪ್ರೇಮದ ಪ. ಹಳದಿ ಕುಂಕುಮ ಪರಿಮಳದ ಗಂಧದಿ ಅಂಗಳದಿ ಶೋಭಿಪ ಹರಿಸತಿ ಅ.ಪ. ಆದಿಯಲಿ ತಾ ಮೋದದಿಂದಲೆ ಮಾಧವ ಪ್ರಿಯೆಯನು ದ್ರೌಪದಿ ಪೂಜಿಸೆ ಮೋದದಿಂದಕ್ಷಯ ಪಾತ್ರೆಯೊಳ್ ಪಾಕವ ಸತಿ ತುಳಸಿ 1 ಪರಿಪರಿ ಭಾಗ್ಯಕೆ ಹಿರಿಮೆ ಶ್ರೀ ತುಳಸಿ ಯೆಂ ದರುಹಿದ ನಾರದ ವರ ವಚನವು ಎಂದು ಪರಮಾದರದೊಳು ಪೂಜಿಸಿ ತುಳಸಿಯ ಹರಿಗೆ ಅರ್ಪಿಸೆ ಹರುಷವ ಕೊಡುವ 2 ಉದಯ ಕಾಲದಿ ಮುದದಿ ಪೂಜಿಸಿ ಮಧುರ ಸ್ವರದಿ ಮಾಘದ ಮಾಸದಲಿ ಮುದದಲೊಂದಿಸೆ ವದಗಿದಾಪತ್ತನು ಚದರಿಸಿ ಕಳೆದು ಶ್ರೀ ಶ್ರೀನಿವಾಸನ ಮುದದಿ ತೋರುವ ಶ್ರೀ ತುಳಸಿ 3
--------------
ಸರಸ್ವತಿ ಬಾಯಿ
ಥಳಕು ಥಳಕು ಹೊಳೆವೋತನ್ನ ಬೆಳಕು ತುಂಬಿಭವನದೊಳು ಝಳಕು ಝಳಕು ಬಂದ ನಮ್ಮಜಾಣರಂಗನ ನೋಡುವ ಬಾರೆ ಅಂಗನೆ ಪ. ನೀಲ ಮಾಣಿಕ ರತ್ನದಿವ್ಯನಿಲವುಗನ್ನಡಿ ಹೊಳೆವ ಮಹಲಗಳ ಇಳಿದು ಬಂದ1 ಕೋಟಿ ಕೋಟಿ ಸೂರ್ಯರಂತೆ ಧಾಟತೋರೋ ಅಂಗಳದಿ ದಾಟಿ ದಾಟಿ ಇಳಿದು ಬಂದ 2 ನೂರು ಸೂರ್ಯರ ಬೆಳಕುತೋರುವಂತೆ ದ್ವಾರಗಳನು ವಾರಿಜಾಕ್ಷ ಇಳಿದು ಬಂದ 3 ಮುತ್ತಿನ ತ್ವಾರಣನವರತ್ನ ಹಂದರ ದಾಟಿಚಿತ್ರ ಚಾವಡಿ ಇಳಿದು ಬಂದ 4 ವಜ್ರ ಮಾಣಿಕವು ಬಹಳ ಸಜ್ಜ ತೊರೋ ಅಂಗಳದಿ ನಿರ್ಜರೋತ್ತಮನು ಬಂದ 5 ಪಚ್ಚದ ಪಾವಟಿಗೆ ರತ್ನಹಚ್ಚಿದ ಹೊಸ್ತಿಲವ ದಾಟಿಅಚ್ಯುತಾನಂತ ಬಂದ 6 ನಾಗಶಯನ ತನ್ನ ಮನೆಯ ಬಾಗಿಲ ಮುಂದೊಪ್ಪುತಿರಲು ಭಾಗವತರ ಮ್ಯಾಳದಿಂದ ಬಂದ7 ರುದ್ರಾದಿಗೊಂದ್ಯನ ಮುಂದೆ ಅಧ್ಯಾನ(ಅಧೀನ) ವೆಂಬುವರು ಕೋಟಿಮುದ್ದು ತೋರೋದಮ್ಮ ಸಭೆಯು 8 ಅಲ್ಲೆ ಅಲ್ಲೆ ನಿಂತ ಜನರು ಚಲ್ವರಮೆ ಅರಸನ ಮ್ಯಾಲೆಮಲ್ಲಿಗೆ ಸೂರ್ಯಾಡೋರೆಷ್ಟ 9
--------------
ಗಲಗಲಿಅವ್ವನವರು
ರಾಘವೇಂದ್ರ ಸ್ವಾಮಿಗಳು ಅಂತರಂಗದಿ ಹರುಷವಾಂತೆವೈ ಗುರುವೆ ಪ ಸಂತಸದಿ ಸೇವೆಗಳ ಸ್ವೀಕರಿಸು ಪ್ರಭುವೆ ಅ.ಪ ಮಂಗಳಾಂಗಿಯರೆಲ್ಲ ಮಿಂದು ಮಡಿಗಳನ್ನುಟ್ಟು | ಮಂಗಳಾತ್ಮಕ ನಿನಗೆ ಮಜ್ಜನವ ಗೈಸೆ || ಅಂಗಳದಿ ದಧಿಕ್ಷೀರ ಘೃತಕುಂಭಗಳಧರಿಸಿ | ಸಿಂಗರದಿ ನಿಂದಿಹರೊ ಗುರುರಾಘವೇಂದ್ರ 1 ಧಾರುಣೀಸುರರೆಲ್ಲ ಧೀರಯತಿವರ ನಿನಗೆ | ಚಾರುವಿಭವದಿ ಕವಚ ಧಾರಣೆಯ ಗೈಸೆ || ಸೇರಿ ನುತಿಸುತೆ ನಿನ್ನ ಸಾರಗುಣ ಸಂಪನ್ನ | ಸಾರಿಹರೊ ನಿನ್ನಡಿಗೆ ಗುರುರಾಘವೇಂದ್ರ 2 ನಿಂದು ಭೂಸುರರೆಲ್ಲಾ ಜಯಜಯ ಜಯವೆನಲು| ಮಂದಹಾಸದಲವರ ಸೇವೆಯನು ಕೊಂಡೆ || ಇಂದು ಬೃಂದಾವನದಿ ನಿಂದು ದರ್ಶನವಿತ್ತೆ | ಕುಂದದಿಷ್ಟವ ಸಲಿಸೊ ಗುರುರಾಘವೇಂದ್ರ 3 ಉಡುರಾಶಿಗಳ ಮಧ್ಯೆ ಉಡುಪ ಮೆರೆಯುವ ತೆರದಿ | ಉಡುಗಣಿಕ್ಷೇತ್ರದೊಳು ನಿಂದು ಮೆರೆದೆ || ಕಡುಮಮತೆಯಲಿ ನಿನ್ನ ಸಡಗರದಿ ಸೇವಿಪರ | ಎಡರುಗಳ ಪರಿಹರಿಸೊ ಗುರುರಾಘವೇಂದ್ರ4 ನರಹರಿಯ ಮೆಚ್ಚಿಸಿದೆ ಪ್ರಹ್ಲಾದನೆನಿಸುತಲೆ | ಸಿರಿಕೃಷ್ಣನೊಲಿಸಿದಿಯೊ ವ್ಯಾಸಮುನಿ || ಸಿರಿರಾಮಚಂದ್ರಪ್ರಿಯ ಗುರುರಾಘವೇಂದ್ರನೆ | ಕರುಣದಲಿ ತೋರೀಗ ಶ್ರೀಶಕೇಶವನ5
--------------
ಶ್ರೀಶ ಕೇಶವದಾಸರು