ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡು ಎನ್ನೊಳು ಮಾಡು ದಯವನು ಬೇಡಿಕೊಂಬುವೆ ಮುರಹರ ಪ ರೂಢಿಯೊಳು ಎನ್ನ ಖೋಡಿಮಾಡದೆ ಕಾ ಪಾಡು ಬೇಗ ಭಕ್ತಹಿತಕರ ಅ.ಪ ಪಂಕಜಾಕ್ಷನೆ ಕಿಂಕರನ ಈ ಮಂಕುಗುಣಗಳ ಬಿಡಿಸಯ್ಯ ಶಂಖಸುರಹರ ಶಂಕೆಯಾತಕೆ ಕಿಂಕರನು ನಾಂ ಪಿಡಿ ಕೈಯ 1 ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ ತಂದೆ ನಿನ್ಹೊರತ್ಯಾರ್ಯಾರು ಮಂದಮತಿಯನು ಛಿಂದಿಸಿ ಬೇಗ ಕಂದನನು ಪೊರೆ ದಯಾಕರ 2 ತಂದೆ ನೀನೆ ತಾಯಿ ನೀನೆ ಬಂಧು ನೀನೆ ಶ್ರೀಕರ ಬಂದ ದುರಿತದಿಂದ ಕಾಯೊ ಸಿಂಧು ನೀನೆ ದೇವರೊ 3 ಉರಗನ ಬಾಯಲಿರುವ ಮಂಡೂಕ ಸ್ಮರಿಸಿ ನೋಣಕ್ಹವಣಿಸುವ ತೆರದಿ ಶರಧಿಸಂಸಾರ ಸ್ಥಿರವೆಂದರಿಯದೆ ಮರವಿನಿಂ ಬಿದ್ದೆ ದುರಿತದಿ 4 ಕಾಯಜೆಂಬುವ ಮಾಯಕೋರನು ಪಾಯಕೆ ಒಳಪಟ್ಟೆನು ತೋಯಜಾಕ್ಷೇರ ಮಾಯಮೋಹದಿ ಕಾಯದಂದಿಸಿ ಕೆಟ್ಟೆನು 5 ಕುಂಭಿನಿಯೊಳೆನಗಿಂಬುಗೊಟ್ಟು ಬಲು ನಂಬಿದವರಾಸ್ತ್ಯಳಿದೆನೊ ಜಂಬಬಡಿಯುತ ಶುಂಭಗುಣಗಳಿ ಗಿಂಬುಗೊಟ್ಟು ದಿನಗಳೆದೆನೊ 6 ಪ್ರಾಣತಗ್ಗಿಸಿ ದೀನತನದಲಿ ದೈನ್ಯಬಡುವರಿಗ್ಹಾನಿಮಾಡಿದೆ ದಾನಕೊಡುವರ ದಾನಕಡ್ಡಾಗಿ ನಾನಾ ದುರ್ಬೋಧವುಸುರಿದೆ 7 ಜಾನಕೀಶನ ಧ್ಯಾನಯುತರಿಗೆ ಹೀನ ಹಾಸ್ಯವ ಗೈದೆನೊ ಏನು ತಿಳಿಯದೆ ಗಾಣಕೆ ಬಿದ್ದ ಮೀನಿನಂತೆ ನಾನಾದೆನೊ 8 ಶ್ವಾನನಂದದಿ ಖೂನವಿಲ್ಲದೆ ನಾನಾಪಾಪವ ಗೈದೆನೊ ಮಾನವಜನುಮೇನು ಶ್ರೇಷ್ಠಿದ ಜ್ಞಾನದೋಳ್ಹೊತ್ತುಗಳೆದೆನೊ9 ಮಂಗನಂದದಿ ಹಂಗದೊರೆದು ಅಂಗಲಾಚಿ ಪರರನ್ನು ಬೇಡಿದೆ ಅಂಗಜಪಿತ ಮಂಗಳಾಂಗ ಶ್ರೀ ರಂಗ ನಿಮ್ಮ ಮಹಿಮ್ಯರಿಯದೆ 10 ದಾಸ ಮಾಡಿದ ದೋಷ ಮನ್ನಿಸಿ ಪೋಷಿಸು ಶ್ರೀರಾಮನೆ ಶ್ರೀಶ ಶ್ರೀನಿವಾಸ ಎನ್ನಂತ ರಾಸೆ ಪೂರೈಸು ಬೇಗನೆ 11
--------------
ರಾಮದಾಸರು
ಪಾದ ವನಜ | ಸೂಸಿ ಭಜಿಸಿರೋ |ವ್ಯಾಸ ತೀರ್ಥ ಶಿಷ್ಯರೆಂದು | ಭಾಸಿಸಿದ್ದರೋ ಪ ಪುರಂದರ ಗಡದಿ | ವಾಸರಿದ್ದರಾಪರಮ ಲೋಭಿ ನವ ಕೋಟಿ | ದ್ರವ್ಯವಿದ್ದರಾ 1 ಬಂದ ಕಾರ್ಯ ಮರೆತನೆಂದು | ಹರಿಯು ಚಿಂತಿಸೀಇಂದಿರೇಶ ದ್ವಿಜನಾಗಿ | ಹುಡುಗನಾವೆರಸೀ ||ಬಂದು ಮಗನ ಮುಂಜಿಗಾಗಿ | ಧನವನು ಬಯಸೀ ||ನಂದ ಕಂದ ತಿರುಗುತ್ತಿದ್ದ | ಅಂಗಲಾಚಿಸೀ 2 ಭಿಕ್ಷುಕನ್ನ ಬಿಡದಂತೆ | ಅಂಗಡಿಯಲ್ಲಿಶಿಕ್ಷಿಸೀದ ಆಳುಗಳ | ಲೋಭಿ ತಾನಲ್ಲಿ ||ತ್ರ್ಯಕ್ಷಸೇವ್ಯ ತಿಂಗಳಾರು | ತಿರುಗಿದನಲ್ಲೀಲಕ್ಷಿಸಾದೆ ಮೆರೆಯುತಿದ್ದ | ಕಾಣದಂತಲ್ಲಿ3 ಕಟ್ಟಕಡೆಗೆ ಸವೆದ ನಾಣ್ಯ | ಚೀಲ ವೆಸೆಯುತ್ತಕಟ್ಟು ಮಾಡ್ದ ದುಡ್ಡೊಂದನ್ನು | ಕೊಳ್ಳೆಂದೆನುತ್ತ ||ಅಟ್ಟುಗಳಿಗೆ ಬೇಸರಿಸಿ | ಮುಂದೆ ಹೋಗುತ್ತ |ಥಟ್ಟನ್ಹೋದ ಹಿತ್ತಲಿನ | ಕದವ ಸಾರುತ್ತ 4 ಅಲ್ಲಿನಿಂತ ಲೋಭಿ ಸತಿಯ | ಬಳಿಗೆ ಪೋಗುತ್ತಬಲ್ಲ ಹರಿಯ ಧನವ ಬೇಡ್ದ | ಮುಂಜಿಗೆನ್ನುತ್ತ ||ನಲ್ಲ ಬೈವನೆಂದು ಬೆದರಿ | ಇಲ್ಲವೆನ್ನುತ್ತಚೆಲ್ವ ಸತಿಯು ಪೇಳೆ ಅವಳ | ಮೂಗ್ತಿ ನೋಡುತ್ತ 5 ತವರು ಮನೆಯ ದ್ರವ್ಯದಾನ | ಮಾಡು ನೀನೆಂದಅವಳು ತನ್ನ ಮೂಗುತಿಯ | ಕೊಟ್ಟುದೆ ಛಂದ ||ಇವನು ಅದನ ಸಾಹುಕಾರ್ನ | ಮುಂದಾಕಿ ಅಂದಜವದಿ ನಾನೂರ್ಪಾಕಿ ಹಣ | ತನಗೆ ಬೇಕೆಂದ 6 ನಾಯಕನು ಕೈಲಿ ತೆಗೆದು ನೋಡುತ್ತಲಿರೇಶ್ರೀಯರಸ ಪೋದತಾನು | ಕಣ್ಣಿಗೆ ಮರೇ ||ಕಾಯುತ್ತಿದ್ದ ಆಳು ಹಿಡುಕಿ | ಸಿಗದೆತಾಬರೇನಾಯಕನದ ಭದ್ರಮಾಡಿ | ಸತಿಬಳಿಗೆ ಬರೇ 7 ಬರಿಯ ನಾಸಿಕವ ನೋಡಿ | ಮೂಗ್ತಿ ಎಲ್ಲೆನಲುಸರಿಯ ಪಡಿಸಲಿಕ್ಕೆ ಕೊಟ್ಟು | ಇರುವೆ ನೆನ್ನಲುತ್ವರದಿ ತೋರದಿರೆ ನಿನ್ನ | ಅರೆವೆ ನೆನ್ನಲು |ಬರುವೆ ಬೇಗ ಎಂದು ಪೋಗಿ | ಗರದ ಬಟ್ಟಲು 8 ಕರದಿ ಪಿಡಿದು ತುಳಸಿ ಮುಂದೆ | ಮೊರೆಯ ನಿಡುತಿರೇಗರದ ಬಟ್ಟಲೊಳು ಬಿದ್ದ | ಶಬ್ದವು ಬರೇ ||ಹರುಷದಿ ದಿಗ್ಗನೆ ಎದ್ದು | ಪತಿಗೆ ತಾತೋರೇಗರ ಹೊಡೆದಂತವನಾಗಿ | ಮೋರೆಯ ತೋರೇ 9 ಹೆಂಡತಿಯ ಕೇಳಿ ತಿಳಿದ | ಆದ ಪರಿಯಾಮಂಡೆ ಬಾಗಿ ತಾನು ಆದ | ಹೊಸ ಪರಿಯಾ ||ಕೊಂಡಾಡಿದ ಪತ್ನಿ ಚರ್ಯ | ಹರಿಯ ಭಕ್ತಿಯಬಂಡುಣಿ ಹರಿಪಾದಾಬ್ಜದಿ | ತೊರೆದ ಮನೆಯ 10 ಪಾದ ನಮಿಸೀಬಾರಿ ಬಾರಿ ಹರಿಯ ತತ್ವ | ಕೇಳಿ ಸುಖಿಸೀ 11 ಪುರಂದರ ಸಾರ ಭಾಷೆ | ಪ್ರಾಕೃತ ವೆನಿಸೀ 12 ಮೂರ್ತಿ ಸುಂದರತೊಂಡನಾದ ಮೇಲೆ ತನ್ನ | ಹೃದಯ ಮಂದಿರ ||ಪಿಂಡ ಅಂಡದೊಳಗೆ ಕಂಡು | ಹಿಗ್ಗಿದ ವಿವರ |ಕಂಡವನೆ ಪೇಳ ಬಲ್ಲ | ಅದರ ವಿಸ್ತಾರ 13 ಪೊಂದಿ ಅಪರೋಕ್ಷವನ್ನು | ಸುಜನರುದ್ಧಾರಛಂದದಿಂದ ಮಾಡಿದಂಥ | ದಾಸವರ್ಯರ ||ಅಂದ ಚರಿತೆ ಕೇಳಿ ತೋಷ | ಪೊಂದಿದವರನಂದ ಕಂದ ಪಾಲಿಸುವ | ಬಿಡದೆ ಅವರಾ 14 ಗೋವ ಕಾವ ಗೊಲ್ಲರೊಡೆಯ | ಗೋಪಿಯ ಬಾಲತಾವಕ ಭಕ್ತರ ಪೊರೆವ | ಪಾಂಡವ ಪಾಲಆವ ದಾಸರ ಪೊರೆದಂತೆ ಮೈದುನ ಪಾಲದೇವ ದೇವ ಪೊರೆವ ಗುರು | ಗೋವಿಂದ ವಿಠಲ 15
--------------
ಗುರುಗೋವಿಂದವಿಠಲರು
ಯತಿರಾಜಾ - ಪಾಲಿಸೊ ಎನ್ನ - ಯತಿರಾಜಾ ಪ ಯತಿರಾಜಾ ಪಾಲಿಸೊ ಎನ್ನ - ಅಹಂಮತಿಯ ಕಳೆದು ಗುರುವರೇಣ್ಯ | ಆಹ ಸತತದಿ ಹರಿ ಧ್ಯಾನ | ರತನನ ಮಾಡಿ ಸದ್ ಗತಿಯ ಸೇರುವಂಥ | ಪಥದಲ್ಲಿರಿಸೊ ರಾಜಅ.ಪ. ವೀಣಾ ವೆಂಕಟ ನಾಮಾಭಿಧ | ಕುಂಭಕೋಣ ಪುರದೊಳು ಮೆರೆದಾ | ಓವಿಜ್ಞಾನಿ ಸುಧೀಂದ್ರರೊಲಿಸಿದಾ | ಬಹುಮಾನವಾಗಿ ಶಾಲು ಪಡೆದಾ | ಆಹಏನು ಇದಾಶ್ಚರ್ಯ | ಮಾನ ಉಳಿವದೆಂತುನಾನೊಂದು ಕಾಣೆ | ನೆನುತಾವಸನ ಮುಂದಿಟ್ಟ 1 ಅಂದಿನಂದಿನ ಪಾಠಕ್ಕೆಲ್ಲ | ಟೀಕೆಛಂದಾಗಿ ಬರೆದಿರುವಲ್ಲ | ನಮ್ಮಹಿಂದಿನ ಸಂಶಯವೆಲ್ಲ | ನೀಗಿಮುಂದೆ ಜರುಗಿತು ಪಾಠವೆಲ್ಲ | ಆಹಎಂದು ನಮ್ಮ ವಸನ | ಕಂದ ನಿನ್ನಯ ಮೇಲೆಹೊಂದಿಸಿ ಮುದದಿಂದ | ಬಂದೆವೆಂದರ ಶಿಷ್ಯ 2 ಗುರುವು ಪಟ್ಟರು ಬಲು ಮೋದಾ | ಸುಧಾಪರಿಮಳಾರ್ಯರೆಂಬ ಬಿರುದಾ | ಪೊಂದಿಇರಲು ಕಾಲಾಂತರದಿಂದಾ | ಪಡೆದೆವರ ಯತ್ಯಾಶ್ರಮವವರಿಂದಾ | ಆಹಮೆರೆಸಿದೆ ರಾಮರ | ವರ ವೈಭವದಿಂದದುರುಳ ಮಾಯ್ಗಳಮತ | ತರಿದಿಟ್ಟೆ ವಾದದಿ 3 ಬೇಗೆಯಿಂದಳುತಿದ್ದ ಶಿಶುವಿಗೆ | ಚೈಲಆಗಸದೊಳು ನೀನು ನಿಲಿಸಿದೆ | ಹಾಂಗೆಮಾರ್ಗದಿ ಪ್ರಸವಿಸದವಳೀಗೆ | ನೀರನುಗಮಿಸುತ ನೀನು ಪೊರೆದೇ | ಆಹನಿಗಮಾಲಯ ವಾಸ | ರಾಘವೇಂದ್ರ ಗುರುವೆಬಗೆ ಬಗೆ ಗ್ರಂಥವ | ಮಿಗಿಲಾಗಿ ರಚಿಸೀದೆ 4 ಪಂಗು ಬಧಿರ ಮೂಕ ಜನರು | ನಿಮ್ಮಹಿಂಗದೆ ಬಂದು ಸೇವಿಪರು | ಬಂದಭಂಗಗಳೆಲ್ಲ ನೀಗುವರು | ಯತಿಪುಂಗನೆ ನಿನಗೆ ಸರಿಯಾರು | ಆಹಗಂಗಾ ಜನಕ ರೂ | ಪರಿಗಳು ನಾಲ್ಕರಿಂಅಂಗಲಾಚಿಪ ಜ | ನಂಗಳ ಪೊರೆಯುವ 5 ಅಘ ಪತಿ ಗೋ | ವಿಂದನ ಮಂದಿರಬಂದು ಸೇರುವುದಕ್ಕೆ | ಅಂದ ಸೋಪಾನವು 6 ವರಹಸುತೆ ತೀರ ವಾಸಾ | ಭಕ್ತಸುರತರುವೆ ನಿನ್ನ ದಾಸಾ | ನಾಗಿಇರಿಸೊ ಭೂ ತಳಾಧೀಶ | ಬೇಡ್ವೆವರ ಒಂದ ನಾನಿನ್ನ ಅನಿಶ | ಆಹಗುರುಗೋವಿಂದ ವಿಠಲನ | ಚರಣಾರವಿಂದವನಿರುತ ಭಜಿಸುವಂಥ ವರಮತಿ ಕೊಟ್ಟನ್ನ7
--------------
ಗುರುಗೋವಿಂದವಿಠಲರು
ಹುಡುಕಿದಳೆಶೋದ ಕಂದನ ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ ಕಂಗಳನಿಕ್ಕಿ ಕಾದಿಹ್ಯದು ಸಿಂಗರದ ಗೋಪಿರ್ಹೆಂಗಳೆಯರು ರಂಗನ ಸುಖಕವರು ಗುಂಗುಹಿಡಿದು ಕುಳಿತಿಹ್ಯರು ರಂಗುಮಂಟಪದೊಳಗೆ ಎನ್ನ ಕಂಗಳಿದರ ಕಾಣನಾವ ಅಂಗನೆಯರಡಗಿಸಿದರೆಂದು ಅಂಗಲಾಚಿ ಅಂತರಂಗದಿ 1 ಉನ್ನತೋನ್ನತ ಋಷಿಗಣರು ಪನ್ನಂಗಶಾಯಿಯ ಸನ್ನಿಧಿಲವರು ಮುನ್ನಾವ ಕಾಲದಿಂ ಕುಳಿತಿಹರು ಭಿನ್ನವಿಲ್ಲದೆ ತಪವ ಮಾಳ್ಪರು ಇನ್ನು ಕಾಣಲವರು ತಮ್ಮಿಷ್ಟ ವನ್ನು ಪೂರ ಪಡೆವನಕ ಎನ್ನ ಕಣ್ಣಿಗೆ ಹಾಕರೆಂದು ಬನ್ನಬಡುತ ತನ್ನೊಳ್ತಾನು 2 ದೂಷಣೆ ಭೂಷಣಗಳನೊದೆದ ಮೋಸ ಕ್ಲೇಶಗಳನು ತರಿದ ಆಶಾ ಪಾಶಗಳನು ಜರಿದ ಈಶನುನ್ನತ ನಿಜವ ತಿಳಿದ ಶ್ರೀಶ ಶ್ರೀರಾಮ ನಿನ್ನ ಪಾದ ದಾಸರು ಕಾಣಲು ತಮ್ಮ ಭಕ್ತಿ ಪಾಶದಿಂದ ಬಿಗಿದು ಕಟ್ಟಿ ನ್ನೇಸು ಕಾಲದಿ ಬಿಡರೆಂದರಿದು 3
--------------
ರಾಮದಾಸರು