ಅರಿತರೆ ಮನುಜ ನೀನಹುದಣ್ಣಾ ನಿಜ
ದರಿವುಯಿಲ್ಲದೆ ಹ್ಯಾಂಗಹುದಣ್ಣಾ ಪ
ಪರಮನಪ್ಪಣೆ ಹಿಂಗಿಹುದಣ್ಣಾ ಇದ
ನರಿಯದೆ ಕೆಡುವೆ ನೀನಹುದಣ್ಣಾ ಅ.ಪ
ಸಪ್ತ ಸಮುದ್ರವ ನಡೆಯಣ್ಣಾ ನಿನ
ಗುಪ್ತದೆ ನಾಮವ ನುಡಿಯಣ್ಣಾ ಪ್ರಾ
ಣಾಪ್ತನ ಕಂಡು ನೀ ಹಿಡಿಯಣ್ಣಾ 1
ಅಂಗಪುರೀಯೆನಬಹುದಣ್ಣಾ ಜಯ
ಮಂಗಳ ನಾಯಕನಹುದಣ್ಣಾ
ಜಂಗಮಗುರು ಹರಿತುಲಶಿರಾಮ ನಿಜ
ಲಿಂಗನೆ ತಾನಹುದಹುದಣ್ಣ 2